ರಾಮಯ್ಯ ಕಾಲೋನಿಯಲ್ಲಿನ ಸಿ.ಸಿ ರಸ್ತೆ ಕಾಮಗಾರಿಗೆ ಚಾಲನೆ

ಬಳ್ಳಾರಿ,ಮೇ 29: ನಗರದ ರಾಮಯ್ಯ ಕಾಲೋನಿಯಲ್ಲಿನ ಜಿಲ್ಲಾ ಖನಿಜ ನಿಧಿ ಅಡಿ ಸಿ.ಸಿ ರಸ್ತೆ ಕಾಮಗಾರಿಯ ಭೂಮಿಪೂಜೆಯನ್ನು ಬಳ್ಳಾರಿ ನಗರ ಶಾಸಕರಾದ ಜಿ.ಸೋಮಶೇಖರ ರೆಡ್ಡಿ ಹಾಗೂ ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ದಮ್ಮೂರ ಶೇಖರ್ ಅವರು ಶುಕ್ರವಾರ ಬೆಳಗ್ಗೆ ನೆರವೇರಿಸಿದರು.  

ಭೂಮಿ ಪೂಜೆ ನೇರವೇರಿಸಿ ಮಾತನಾಡಿದ ಶಾಸಕ ಸೋಮಶೇಖರ ರೆಡ್ಡಿ ಅವರು ಈ ಸಿಸಿ ರಸ್ತೆ ಕಾಮಗಾರಿಯು ಡಿ.ಎಂ.ಎಫ್ ಅನುದಾನದಡಿಯಲ್ಲಿ ಅನುಮೋದನೆಗೊಂಡಿದ್ದು, ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳಬೇಕು ಎಂದು ಗುತ್ತಿಗೆದಾರರಿಗೆ ಸೂಚಿಸಿದರು.

  ಈ ಸಂದರ್ಭದಲ್ಲಿ ಬುಡಾ ಆಯುಕ್ತ ಈರಪ್ಪ ಬಿರಾದಾರ, ಮುಖಂಡರಾದ ವೀರಶೇಖರ ರೆಡ್ಡಿ, ಶ್ರೀನಿವಾಸ್ ಮೋತ್ಕರ್ ರೆಡ್ಡಿ, ಕಿಟ್ಟು, ಬುಡಾ ಎಇಇ ಜಿ.ಕೆ.ರವಿಶಂಕರ್ ಸೇರಿದಂತೆ ರಾಮಯ್ಯ ಕಾಲೋನಿ ನಿವಾಸಿಗಳು ಇದ್ದರು.