ಬಳ್ಳಾರಿ ಮೇ 30: ನಗರದ ಬಾಲಾಂಜಿನೇಯ ಸ್ವಾಮಿ ದೇವಸ್ಥಾನದಿಂದ ಬೆಂಗಳೂರು ರಸ್ತೆಯವರೆಗೆ ಜಿಲ್ಲಾ ಖನಿಜ ನಿಧಿಯಡಿಯಲ್ಲಿ ಸಿ.ಸಿ. ರಸ್ತೆ ಕಾಮಗಾರಿಗೆ ಭೂಮಿಪೂಜೆಯನ್ನು ಬಳ್ಳಾರಿ ನಗರ ಶಾಸಕರಾದ ಜಿ.ಸೋಮಶೇಖರ್ ರೆಡ್ಡಿ ಹಾಗೂ ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ದಮ್ಮೂರು ಶೇಖರ್ ಅವರು ಶನಿವಾರ ನೆರೆವೇರಿಸಿದರು.
ಭೂಮಿಪೂಜೆ ನೆರೆವೇರಿಸಿ ಮಾತನಾಡಿದ ಮಾತನಾಡಿದ ಶಾಸಕ ಸೋಮಶೇಖರ್ ರೆಡ್ಡಿ ಅವರು ಸಿ.ಸಿ ರಸ್ತೆ ಕಾಮಾಗಾರಿಯು ಡಿ.ಎಂ.ಎಫ್ ಅನುದಾನದನದಡಿಯಲ್ಲಿ ಅನುಮೋದನೆಗೊಂಡಿದ್ದು, ಕಾಮಾಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳುಬೇಕು ಎಂದು ಗುತ್ತಿಗೆದಾರರಿಗೆ ಸೂಚಿಸಿದರು
ಈ ಸಂದರ್ಭದಲ್ಲಿ ಬುಡಾ ಪ್ರಾಧಿಕಾರದ ಆಯುಕ್ತರಾದ ಈರಪ್ಪ ಬಿರಾದಾರ, ಬುಡಾ ಎ.ಇ.ಇ. ಜಿ.ಕೆ ರವಿಶಂಕರ್, ಮುಖಂಡರಾದ ವೀರಶೇಖರ ರೆಡ್ಡಿ, ಶ್ರೀನಿವಾಸ್ ಮೊತ್ಕರ್, ಬೆಣಕಲ್ ಬಸವರಾಜ್ ಗೌಡ ಮತ್ತು ನಿವಾಸಿಗಳು ಉಪಸ್ಥಿತರಿದ್ದರು.