ಲೋಕದರ್ಶನ ವರದಿ
ರಾಮದುರ್ಗ 17: ಮಳೆಯ ಕೊರತೆಯಿಂದಾ ನೀರಿನ ಅಭಾವ ಹೆಚ್ಚಾಗುವದನ್ನು ಅರಿತು ಭೂಮಿಗೆ ನೀರುನಿಸಲು ಹಾಗೂ ಜಮೀನುಗಳಿಗೆ ಸಂಪರ್ಕ ಸಾಧಿಸಲು ಬ್ರಿಡ್ಜ್ ಕಂ ಬ್ಯಾರೇಜಗಳು ಪ್ರಮುಖ ಪಾತ್ರ ವಹಿಸುತ್ತವೆ, ಆ ನಿಟ್ಟಿನಲ್ಲಿ ತಾಲೂಕಿನ ಹಲವಾರು ಗ್ರಾಮಗಳಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ ಅಂದಾಜು 30 ಕೋಟಿ ರೂ. ವೆಚ್ಚದ ಬ್ರಿಡ್ಜ್ ಕಂ ಬ್ಯಾರೇಜಗಳ ನಿಮರ್ಾಣದ ಕಾಮಗಾರಿಯನ್ನು ಪ್ರಾರಂಭಿಸಲಾಗಿದೆ ಎಂದು ಶಾಸಕ ಮಹಾದೇವಪ್ಪ ಯಾದವಾಡ ನುಡಿದರು.
ತಾಲೂಕಿನ ತೊಂಡಿಕಟ್ಟಿ ಗ್ರಾಮದ ಬಿಜಗುಪ್ಪ ತೊಂಡಿಕಟ್ಟಿ ಹಳ್ಳಕ್ಕೆ ಸಣ್ಣ ನೀರಾವರಿ ಇಲಾಖೆಯ ರೂ. 2 ಕೋಟಿ ವೆಚ್ಚದ ಬ್ರಿಡ್ಜ ಕಂ ಬ್ಯಾರೇಜ್, ಲೋಕೋಪಯೋಗಿ ಇಲಾಖೆಯ 50 ರೂ. ಲಕ್ಷದ ವೆಚ್ಚದ ಸಾಲಹಳ್ಳಿಯಿಂದಾ ರಾಣಿ ಚೆನ್ನಮ್ಮಾ ಶಾಲೆವರೆಗೆ ಸಿ ಸಿ ರಸ್ತೆ ಹಾಗೂ ಹುಲಕುಂದ ಗ್ರಾಮದಲ್ಲಿ 60 ರೂ. ಲಕ್ಷದ ವೆಚ್ಚದ ಸಿ ಸಿ ರಸ್ತೆ ನಿಮರ್ಾಣದ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡದ ಅವರು ಕಾಮಗಾರಿ ಯಶಸ್ವಿಯಾಗಿಸಲು ಗ್ರಾಮಸ್ಥರು ಪಕ್ಷಾತೀತವಾಗಿ ಸಹಕಾರ ನೀಡಿ, ಪ್ರತಿಯೊಬ್ಬರು ಕಾಮಗಾರಿಯನ್ನು ವಿಕ್ಷೀಸಲು ಸಲಹೆ ನೀಡಿದರು. ಒಂದು ವೇಳೆ ಕಳಪೆ ಕಾಮಗಾರಿ ಎಂದು ಕಂಡು ಬಂದಲ್ಲಿ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತರಬೇಕು ಅಂತಹ ಕಾಮಗಾರಿಗಳ ಬಿಲ್ಗಳನ್ನು ಶೀಘ್ರದಲ್ಲಿಯೇ ತಡೆಹಿಡಿಯಲಾಗುವುದು ಎಂದು ಹೇಳಿದರು.
ಕಾಮಗಾರಿಗಳು ನಡೆಯುವ ಜಾಗದಲ್ಲಿ ಒತ್ತುವರಿಯನ್ನು ತೆರೆವುಗೊಳಿಸಲು ಗ್ರಾಮಸ್ಥರು ಸ್ವಯಂ ಪ್ರೇರಿತರಾಗಿ ಮುಂದೆ ಬರಬೇಕು ಇಲ್ಲವಾದಲ್ಲಿ ಕಾಮಗಾರಿ ಪ್ರಮಾಣದಲ್ಲಿ ವ್ಯತ್ಯಯವಾಗುತ್ತದೆ, ಕಾರಣ ಗ್ರಾಮಸ್ಥರು ಒಕ್ಕೋರಲ್ಲಿಂದ ಮುಂದೆ ಬಂದು ತೆರವುಗೊಳಿಸಬೇಕು ಎಂದು ವಿನಂತಿಸಿದುರು. ಜಿಲ್ಲಾ ಪಂಚಾಯತ ಸದಸ್ಯ ಮಾರುತಿ ತುಪ್ಪದ, ತಾಲೂಕ ಪಂಚಾಯತ ಸದಸ್ಯ ತಳವಾರ, ಹನಮಂತಗೌಡ ಪಾಟೀಲ, ಎಪಿಎಮ್ಸಿ ಸದಸ್ಯ ಮಾರುತಿ ಕೊಪ್ಪದ, ಮಲ್ಲಿಕಾಜರ್ುನ ಕೊಪ್ಪದ, ಗುತ್ತಿಗೆದಾರ ಎಮ್ ಎಮ್ ಅತ್ತಾರ, ಭೂತಾಳಿ ಹಾಗೂ ಗಾಮಸ್ಥರು ಇದ್ದರು.