ಲೋಕದರ್ಶನ ವರದಿ
ಸಂಬರಗಿ 23: ಮಳೆಗಾಲದಲ್ಲಿ ಅಗ್ರಾಣಿ ನದಿಗೆ ನೀರು ಬಂದಾಗ ಶಿವನೂರ-ಕಿರಣಗಿ ರಸ್ತೆ ಸ್ಥಗಿತಗೊಳ್ಳುತ್ತದೆ. ಈ ಎಲ್ಲಾ ಸಮಸ್ಯೆ ಬಗೆಹರಿಸಿ ಶಿವನೂರ-ಕಿರಣಗಿ ರಸ್ತೆಯ ಮಧ್ಯೆ 3.5 ಕೋಟಿ ರೂ ಬ್ರಿಡ್ಜ್ ಕಮ್ ಬಾಂದಾರ ಮಂಜೂರಾತಿಯಾಗಿ ಒಳ್ಳೆಯ ಗುಣಮಟ್ಟದ ಕಾಮಗಾರಿ ಮಾಡಬೇಕೆಂದು ಶಾಸಕ ಶ್ರೀಮಂತ ಪಾಟೀಲ ಹೇಳಿದರು.
ಶಿವನೂರ ಗ್ರಾಮದ ಅಗ್ರಾಣಿ ನದಿಗೆ ಬ್ರಿಡ್ಜ್ ಕಮ್ ಬಾಂದಾರ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು ಅಗ್ರಾಣಿ ನದಿಗೆ ನೀರು ಸಂಗ್ರಹ ಮಾಡಲು ಹೆಚ್ಚಿನ ಬಾಂದಾರಗಳನ್ನು ನಿಮರ್ಿಸಲಾಗುವುದು. ಕಳೆದ ಹಲವಾರು ವರ್ಷಗಳಿಂದ ಅಗ್ರಾಣಿ ನದಿಗೆ ನಿರ್ಮಿಸಿದ ಬಾಂದಾರ ಕಾಮಗಾರಿ ಸರಿಯಿಲ್ಲದ ಕಾರಣ ನೀರು ಸಂಗ್ರಹವಾಗಲು ಅಸಾಧ್ಯವಾಗಿತ್ತು. ಅಂತಹ ಬಾಂದಾರಗಳು ದುರಸ್ತಿಯಾಗಲು 4 ಕೋಟಿ ರೂ ಅನುದಾನವನ್ನು ಮಂಜೂರಾತಿ ಮಾಡಲಾಗಿದೆ. ಗ್ರಾಮಸ್ಥರು ಅಭಿವೃದ್ದಿಗೆ ಕೆಲಸಕ್ಕೆ ಸಹಕಾರ ಮಾಡಬೇಕೆಂದು ಅವರು ಹೇಳಿದರು.
ಈ ವೇಳೆ ಕೆ.ಎಮ್.ಎಫ್ ನಿರ್ಧೆಶಕ ಅಪ್ಪಾಸಾಹೇಬ ದಾದಾ ಅವತಾಡೆ ಮಾತನಾಡಿ ಈ ಭಾಗಕ್ಕೆ ಶ್ರೀಮಂತ ಪಾಟೀಲ ಇವರು ಶಾಸಕರಾಗಿ ಸಿಕ್ಕಿರುವುದು ನಿಮ್ಮ ಭಾಗ್ಯ. ಈ ಭಾಗವನ್ನು ಬರಗಾಲ ಮುಕ್ತಮಾಡುವ ಗುರಿಹೊಂದಿದ್ದಾರೆ.
ಸತತವಾಗಿ ಪ್ರತಿ ಗ್ರಾಮದ ಜನರಿಗೆ ಸಂಪರ್ಕದಲ್ಲಿದ್ದು ಅವರ ಸಮಸ್ಯೆಯನ್ನು ಪರಿಹಾರಗೊಳಿಸಲು ಸಿದ್ದರಾಗಿದ್ದಾರೆ. ಖಿಳೇಗಾವಿ ಬಸವೇಶ್ವರ ಯಾತನೀರಾವರಿ ಯೋಜನೆಯನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸುವ ಗುರಿ ಹೊಂದಿದ್ದಾರೆ.
ಈ ವೇಳೆ ಬಿ.ಜೆ.ಪಿ ಬ್ಲಾಕ್ ಅಧ್ಯಕ್ಷ ನಿಂಗಪ್ಪ ಕೋಕಳೆ, ಪಿ.ಎಲ್.ಡಿ ಬ್ಯಾಂಕ್ ನಿರ್ದೇಶಕ ಮಹಾದೇವ ಕೋರೆ, ಆರ್.ಎಮ್.ಪಾಟೀಲ, ಈಶ್ವರ ಕುಂಬಾರೆ, ಮುರಗೆಪ್ಪಾ ಮಗದುಮ್, ಶಿವಾಜಿ ಗಾಡಿವಡ್ಡರ, ವಿನಾಯಕ ಪಾಟೀಲ, ರಾವಸಾಬ ಬಂಡಗರ,ಶಿವು ಸಂಕ್ರಟ್ಟಿ, ಬಿ.ಕೆ.ಚನರೆಡ್ಡಿ, ಅಪ್ಪಾಸಾಬ ಕಿರಣಗಿ, ಅರ್ಜುನ ಬನಹಟ್ಟಿ, ಸಿದರಾಯ ಕಾಂಬಳೆ, ಮಲ್ಲಪ್ಪ ಕೆಂಪವಾಡೆ, ಎಂ.ಡಿ.ಮಜ್ಜಗಿ, ವಸಂತ ಮಜ್ಜಗಿ, ಸಿದರಾಯ ತೇಲಿ, ಹೊಳೆಪ್ಪಾ ತೇಲಿ, ಅಮಗೊಂಡ ಬಳೋಲ, ಗುತ್ತಿಗೆದಾರ ಸಂತೋಷ, ಶ್ರೀಕಾಂತ ಮಾಕಾಣಿ, ಸೇರಿದಂತೆ ಅನೇಕ ಗಣ್ಯರು ಹಾಜರಿದ್ದರು.