ಸಂಬರಗಿ 11: ಗ್ರಾಮೀಣ ಪ್ರದೇಶದಲ್ಲಿ ಸಚಿವ ಶ್ರೀಮಂತ ಪಾಟೀಲ ಇವರ ಪ್ರಯತ್ನದಿಂದ ಅಗ್ರಾಣಿ ನದಿ ಹಾಗೂ ಚಿಕ್ಕ ಹಳ್ಳದ ಮೇಲೆ ಬಾಂದಾರು ಹಾಗೂ ಸಿ.ಡಿ ಕಾಮಗಾರಿಯನ್ನು ಕೈಗೊಂಡಿದ್ದಾರೆ ಈ ಸಿ.ಡಿ ಕಾಮಗಾರಿಯಿಂದ ಮಳೆಗಾಲದಲ್ಲಿ ಗ್ರಾಮಸ್ಥರಿಗೆ ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಂಪಕರ್ಿಸಲು ಅನುಕೂಲವಾಗಿದೆ ಎಂದು ಕೆಂಪವಾಡ ಗ್ರಾಮ ಪಂಚಾಯತ ಮಾಜಿ ಅಧ್ಯಕ್ಷರು ಬಿಜೆಪಿ ದುರಿನರು ರಮೇಶ ಅಣ್ಣಾ ತೇಲಿ ಹೇಳಿದರು.
ನವನಿಹಾಳ-ಕಿಡಗೇಡಿ ಮಧ್ಯ ಸಿ.ಡಿ ಕಾಮಗಾರಿ ಚಾಲನೆ ನೀಡಿ ಮಾತನಾಡಿ ಅವರು ಮಳೆಗಾಲದಲ್ಲಿ ಮಳೆಯಾದ ನಂತರ ಚಿಕ್ಕ ಹಳ್ಳಗಳಿಗೆ ಮಳೆ ನೀರು ಬಂದ ನಂತರ ಸಂಪರ್ಕ ರಸ್ತೆ ಕಡಿತಗೊಳ್ಳುತ್ತಿತ್ತು ಆದರೆ ಸಚಿವ ಶ್ರೀಮಂತ ಪಾಟೀಲ ಇವರು ತಮ್ಮ ಕ್ಷೇತ್ರದಲ್ಲಿ ಇಂತಹ ಸಮಸ್ಯೆ ಹೊಂದಿದ್ದಾರೆ ಪರಿಶೀಲನೆ ಮಾಡಿ ಜಿಲ್ಲಾ ಪಂಚಾಯತವತಿಯಿಂದ ಚಿಕ್ಕ ಸಿ.ಡಿ ಕಾಮಗಾರಿ ಕೈಗೊಂಡಿದ್ದಾರೆ ಕಿಡಗೇಡಿ-ನವನಿಹಾಳ ಮಧ್ಯ ಚೆಕ್ ಡ್ಯಾಮಕ್ (ಸಿ.ಡಿ) ಕಾಮಗಾರಿಗೆ 15 ಲಕ್ಷ ರೂ ಅನುದಾನ ಮಂಜೂರಾಗಿದೆ. ಒಳ್ಳೆಯ ಗುಣಮಟ್ಟದ ಕೆಲಸ ಗುತ್ತಿಗೆದಾರರು ಮಾಡಬೇಕೆಂದು ಸಲಹೆ ನೀಡಿದರು. ಈ ವೇಳೆ ರಾಜು ಮಾನೆ, ಮಲ್ಲಪ್ಪ, ಚುಂಗ, ದೀಪಕ ಕಾಂಬಳೆ, ಸಾತಪ್ಪ ಪಾಟೀಲ, ಚಂದ್ರಕಾಂತ ಬುಗರೆ, ರಾಜು ಕಾರಕೆ, ಹೊಳೇಪ್ಪ ತೇಲಿ, ಈರಪ್ಪ ಶಿರಗೂರ, ಅಮರ ಮೇತ್ರಿ ಸೇರದ ಅನೇಕ ಗಣ್ಯರು ಹಾಜರಿದ್ದರು.