ಲೋಕದರ್ಶನ ವರದಿ
ಬೆಳಗಾವಿ 7: ಸೋಮವಾರ ಶಾಸಕ ಅನಿಲ ಬೆನಕೆ ನಗರದ ಹೆಡ್ ಪೋಸ್ಟ್ನಲ್ಲಿ ಪ್ರಧಾನ ಮಂತ್ರಿಯವರ ಬಡವರ ಅನುಕೂಲಕರ ಯೋಜನೆಯಾದ ಆಯುಷ್ಮಾನ ಭಾರತ ರಾಷ್ಟ್ರೀಯ ಆರೋಗ್ಯ ಸಂರಕ್ಷಣಾ ಯೋಜನೆಯ ಕಾರ್ಡನ್ನು ಇಂದು ಕೆಲವು ಫಲನುಭವಿಗಳಿಗೆ ವಿತರಿಸುವುದರ ಮೂಲಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಹೆಡ್ ಪೋಸ್ಟ್ಗೆ ಬೇಟಿ ನೀಡಿ ಮಾತನಾಡಿದ ಶಾಸಕ ಅನಿಲ ಬೆನಕೆರವರು ಆಯುಷ್ಮಾನ್ ಭಾರತ ರಾಷ್ಟ್ರೀಯ ಆರೋಗ್ಯ ಸಂರಕ್ಷಣಾ ಯೋಜನೆಯು ಬಡ ಜನರಿಗೆ ವೈಧ್ಯಕೀಯವಾಗಿ ಅನುಕೂಲಕರವಾಗಲೂ ಪ್ರಧಾನ ಮಂತ್ರಿಗಳ ಜನಪರ ಯೋಜನೆಗಳಲ್ಲಿ ಆಯುಷ್ಮಾನ ಭಾರತ ಯೋಜನೆಯನ್ನು ಜಾರಿಗೆ ತಂದಿದ್ದು ಇದರಲ್ಲಿ ಒಂದು ಕುಟುಂಬಕ್ಕೆ 5 ಲಕ್ಷ ರೂಗಳ ಆರೋಗ್ಯಕ್ಕೆ ನೀಡಲಾಗುತ್ತದೆ ಎಂದು ಹೇಳಿದರು. ಇದರಿಂದ ಆಥರ್ಿಕವಾಗಿ ಹಿಂದುಳಿದ ಬಡ ಜನರ ಆರೋಗ್ಯವನ್ನುಸಂಬಂಧಿಸಿದ ಖಚರ್ು ಪಾವತಿಸಲಾಗುವುದು ಈ ಯೋಜನೆಯು ಪ್ರಧಾನ ಮಂತ್ರಿಗಳ ಜನಪ್ರೀಯ ಯೋಜನೆಗಳಲ್ಲಿ ಒಂದಾಗಿದೆ ಎಂದು ತಿಳಿಸಿದರು. ಮೊದಲನೆಯ ಹಂತದಲ್ಲಿ ಸುಮಾರು 80,000 ಡಿಜಿಟಲ್ ಕಾರ್ಡಗಳನ್ನು ಬೆಳಗಾವಿ ನಗರದಲ್ಲಿ ವಿತರಿಸಲಾಗುತ್ತಿದೆ ಎಂದು ಹೇಳಿದರು. ಈ ಯೋಜನೆಯಲ್ಲಿ ಗ್ರಾಮೀಣ ಕುಟುಂಬಗಳಗೆ ಮತ್ತು ನಗರ ಕುಟುಂಬಗಳನ್ನು ಗುರಿತಿಸಲಾಗಿದೆ 2011 ರ ಸಾಮಾಜಿಕ ಆಥರ್ಿಕ ಜಾತಿ ಗಣತಿ ಮಾಹಿತಿಯನ್ನು ಅನುಸರಿಸಿದರೆ ಗ್ರಾಮೀಣ ಪ್ರದೇಶದಲ್ಲಿ 08.03 ಕೋಟಿ ಕುಟುಂಬಗಳು ಮತ್ತು ನಗರ ಪ್ರದೇಶಗಳಲ್ಲಿ 02.33 ಕೋಟಿ ಕುಟುಂಬಗಳು ಈ ಯೋಜನೆಗೆ ಒಳಪಡುತ್ತಾರೆ ಎಂದು ತಿಳಿಸಿದರು.
ಆದ್ದರಿಂದ ಪ್ರಧಾನ ಮಂತ್ರಿಗಳ ಈ ಯೋಜನೆಯನ್ನು ಎಲ್ಲರೂ ಸದುಪಯೋಗ ಪಡಿಸಿಕೊಳ್ಳಬೇಕು ಹಾಗೂ ಆಯುಷ್ಮಾನ ಭಾರತ ಕಾರ್ಡನ್ನು ಮನೆ ಮನೆಗೆ ತಲುಪಿಸುವ ಕಾರ್ಯವನ್ನು ಮಾಡುತ್ತಿರುವ ಅಂಚೆ ಕಛೇರಿಯ ಸಿಬ್ಬಂದಿಗಳಿಗೆ ಈ ಸಂದರ್ಭದಲ್ಲಿ ಧನ್ಯವಾದಗಳನ್ನು ತಿಳಿಸಿದರು.
ಈ ಸಂದರ್ಭದಲ್ಲಿ ಶಾಸಕರೊಂದಿಗೆ ಹೆಡ್ ಪೋಸ್ಟ್ ಆಪೀಸ್ ಸೂಪರಿಡೆಂಟ್ ಎಸ್. ಡಿ. ಕುಲಕಣರ್ಿ, ಶ್ರೀನಿವಾಸ ಚೌಹಾಣ, ಧಮರ್ೇಂದರ ಜೋಯಿ, ಹಾಗೂ ಎಲ್ಲ ಪೋಸ್ಟ್ ಆಪೀಸ್ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.