ಬಾಗಲಕೋಟೆ: ಉದ್ಯಾನಗಿರಿಯ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಆವರಣದಲ್ಲಿ ಹಮ್ಮಿಕೊಂಡ ತೋಟಗಾರಿಕಾ ಬೆಳೆಗಳ ಕ್ಷೇತ್ರೋತ್ಸವಕ್ಕೆ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಚಾಲನೆ ನೀಡಿದರು.
ವಾಷರ್ಿಕ ಮತ್ತು ಬಹು ವಾಷರ್ಿಕ ಪುಷ್ಪ ಕ್ಷೇತ್ರ ಪ್ರಾತ್ಯಕ್ಷಿಕೆ, ತರಕಾರಿ ಬೆಳೆಗಳ ಕ್ಷೇತ್ರ ಪ್ರಾತ್ಯಕ್ಷಿಕೆ, ತೋಟಗಾರಿಕೆ ಜೈವಿಕ ತಂತ್ರಜ್ಞಾನ ಕೇಂದ್ರ, ತೋಟಗಾರಿಕೆ ಆಧಾರಿತ ಸಮಗ್ರ ಕೃಷಿ ಪದ್ದತಿ ಮಾದರಿ ತಾಕು, ಮಾವಿನ ತಳಿ ಮತ್ತು ಸಂಸ್ಕರಣ ತಳಿ, ಹಣ್ಣಿನ ಬೆಳೆಗಳ ತಾಯಿಗಿಡಗಳ ತಾಕು, ಸೀತಾಫಲ ಹಣ್ಣಿನ ತಳಿಗಳು ಮತ್ತು ಸಂಕರಣ ತಳಿಗಳ ಪ್ರಾತ್ಯಕ್ಷಿಕೆ, ದ್ರಾಕ್ಷಿ ಬೆಳೆಗಳ ಅಧ್ಯಯನ, ಗುಣಮಟ್ಟದ ಬೀಜ ಸಂಸ್ಕರಣಾ ಮತ್ತು ಪರೀಕ್ಷಾ ಕೇಂದ್ರ, ಜೈವಿಕ ರೋಗಾಣು ನಿಯಂತ್ರಕ ಉತ್ಪಾದನಾ ಘಟಕ ಹಾಗೂ ತೋಟಗಾರಿಕೆ ಬೆಳೆ ಆಧಾರಿತ ಸಮಗ್ರ ಕೃಷಿ ಪದ್ದತಿಗಳ ಪ್ರಾತ್ಯಕ್ಷಿಕೆಗಳನ್ನು ವೀಕ್ಷಿಸಿದರು.
ತೋಟಗಾರಿಕೆ ತಂತ್ರಜ್ಞಾನ ಮಾಹಿತಿ ಕೇಂದ್ರ ಕಟ್ಟಡದ ಒಳಾಂಗಣದಲ್ಲಿ ತೋಟಗಾರಿಕೆ ವಸ್ತು ಪ್ರದರ್ಶನವನ್ನು ವೀಕ್ಷಿಸಿದರು. ಒಳಾಂಗಣ ಪ್ರದರ್ಶನದಲ್ಲಿ ವಿದೇಶಿ ಹಾಗೂ ಸೀತ ವಲಯದ ಹಣ್ಣುಗಳು, ಸಿರಿಫಲಗಳು, ವಾಣಿಜ್ಯ ಹಾಗೂ ಖುಷ್ಕಿ ಬೇಸಾಯದ ಹಣ್ಣುಗಳು, ಆಲೂಗಡ್ಡೆ, ಪುಷ್ಪ ಮತ್ತು ಉದ್ಯಾನ ವಿನ್ಯಾಸ, ಗೆಡ್ಡೆ ಗೆಣಸು ಬೆಳೆಗಳು, ಹಣ್ಣು ಮತ್ತು ತರಕಾರಿಗಳ ಮೌಲ್ಯವರ್ಧನೆ, ತೋಟಪಟ್ಟಿ, ಸಾಂಬಾರು, ಔಷಧಿ ಮತ್ತು ಸುಗಂಧಿ ಬೆಳೆಗಳು, ವಿವಿಧ ತಳಿಗಳ ದ್ರಾಕ್ಷಾರಸ, ಹಣ್ಣು ಮತ್ತು ತರಕಾರಿಗಳ ಕಲಾಕೃತಿಗಳನ್ನು ವೀಕ್ಷಿಸಿದರು. ಇದೇ ಸಂದರ್ಭದಲ್ಲಿ ಶಾಸಕ ವೀರಣ್ಣ ಚರಂತಿಮಠ ಇದ್ದರು.
ನಂತರ ವೇದಿಕೆ ಕಾರ್ಯಕ್ರಮದಲ್ಲಿ ಸಂಸದ ಪಿ.ಸಿ.ಗದ್ದಿಗೌಡರ ಜ್ಯೋತಿ ಬೆಳೆಗಿಸಿದರು. ಜಿ.ಪಂ ಅಧ್ಯಕ್ಷೆ ಬಾಯಕ್ಕ ಮೇಟಿ ಅವರು ವಿವಿಧ ಪ್ರಕಟಣೆಗಳನ್ನು ಬಿಡುಗಡೆ ಮಾಡಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ಕನರ್ಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷರಾದ ಹನಮಗೌಡ ಬೆಳಗುಕರ್ಿ ಅವರು ರೈತ ಅನೇಕ ಸಂಕಷ್ಟಗಳಿಗೆ ಒಳಗಾಗುತ್ತಿದ್ದಾನೆ. ಜಮೀನಿನಲ್ಲಿ ಉತ್ತಮ ಬೆಳೆ ಬೆಳೆದರು ಸೂಕ್ತ ಮಾರುಕಟ್ಟೆ ವ್ಯವಸ್ಥೆ ಮಾಹಿತಿ ಕೊರತೆಯಿಂದ ಉತ್ತಮ ಬೆಲೆಗಳ ಕೊಡಲು ಸಾಧ್ಯವಾಗತ್ತಿಲ್ಲ. ಇಂತಹ ಅನೇಕ ಪರಿಸ್ಥಿತಿಗಳ ಅವಲೋನ ಮಾಡುವುದು ಅಗತ್ಯವಾಗಿದೆ ಎಂದರು.
ಹಿಂದಿನ ಕಾಲದಲ್ಲಿ ದುಡ್ಡು ಕೊಟ್ಟರು ಆಹಾರ ಪದಾರ್ಥಗಳು ಸಿರುತ್ತಿರಲಿಲ್ಲ. ಇಂದು ರೈತರ ಹಾಗೂ ಸಂಶೋಧಕರ ಪರಿಶ್ರಮದಿಂದ ದೇಶದಲ್ಲಿ 285 ದಶಲಕ್ಷ ಟನ್ ಆಹಾರ ಪದಾರ್ಥ, 300 ದಶಲಕ್ಷ ಟನ್ ಕಾಯಿಪಲ್ಲೆ, 300 ಕೋಟಿ ಮಿಲ್ಕ ಉತ್ಪಾದಿಸಲಾಗುತ್ತಿರುವುದರಿಂದ ಆಹಾರ ಕೊರತೆ ಇಲ್ಲದೇ ದೇಶ ಸುಬೀಕ್ಷೆಯಿಂದ ಕೂಡಿದೆ. ಕೃಷಿಕರ ಆದಾಯ ದ್ವಿಗುಣಗೊಳಿಸಿ ಉತ್ಪಾದನೆ ವೆಚ್ಚವನ್ನು ಕಡಿಮೆ ಮಾಡಿ ಉತ್ಪಾದಕತೆಯನ್ನು ಹೆಚ್ಚಿಸಲು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯವು ಸಾಕಷ್ಟು ಕೆಲಸ ಮಾಡಿದೆ ಎಂದು ತಿಳಿಸಿದರು. ಜಿ.ಪಂ ಉಪಾಧ್ಯಕ್ಷ ಮುತ್ತಪ್ಪ ಕೋಮಾರ ಮಾತನಾಡಿದರು.ಪ್ರಾಸ್ತಾವಿಕವಾಗಿ ಮಾತನಾಡಿದ ತೋವಿವಿಯ ಕುಲಪತಿ ಕೆ.ಎಂ.ಇಂದಿರೇಶ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ 23 ಜಿಲ್ಲೆಗಳಲ್ಲಿ ತಮ್ಮ ಕಾರ್ಯವ್ಯಾಪ್ತಿಯನ್ನು ಹೊಂದಿದೆ. ಇನ್ನಷ್ಟು ಅಭಿವೃದ್ದಿ ಪಡಿಸುವ ನಿಟ್ಟಿನಲ್ಲಿ ಕಳೆದ 3 ದಿನಗಳಲ್ಲಿ ಉಪ ಮುಖ್ಯಮಂತ್ರಿಗಳು ತೋವಿವಿಗೆ 15 ಕೋಟಿ ರೂ.ಗಳ ವಿಶೇಷ ಅನುದಾನ ನೀಡಿದ್ದಾರೆ. ಬಿಟಿಡಿಎದಿಂದ ಕುಡಿಯುವ ನೀರಿನ ವ್ಯವಸ್ಥೆ, ವಿಶ್ವವಿದ್ಯಾಲಯದಿಂದ 10 ಕಿ.ಮೀ ಅಂತರದಲ್ಲಿ 62 ಎಕರೆ ಜಮೀನು ಮುಂದಿನ ಬಜೆಟ್ನಲ್ಲಿ ತೋವಿವಿಗೆ ಹೆಚ್ಚಿನ ಅನುದಾನ ನೀಡುವುದಾಗಿ ಮುಖ್ಯಮಂತ್ರಿಗಳು ತಿಳಿಸಿರುವುದಾಗಿ ಹೇಳಿದರು. ತಾಲೂಕಾ ಪಂಚಾಯತ ಅಧ್ಯಕ್ಷ ಚನ್ನನಗೌಡರ ಪರನಗೌಡರ, ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ, ಜಿಲ್ಲಾ ಕೃಷಿಕ ಸಮಾಜದ ಅದ್ಯಕ್ಷ ಬಿ.ಎಂ.ದೇಸಾಯಿ, ತೋವಿವಿಯ ವ್ಯಸ್ಥಾಪಕ ಮಂಡಳಿಯ ಸದಸ್ಯರಾದ ಆರ್.ಎಂ.ನಾಗೇಶ, ಎಸ್.ಎನ್.ಮಂಜುನಾಥಗೌಡ, ಶಂಕ್ರಪ್ಪ ಮಳಲಿ, ತೋವಿವಿಯ ವಿಸ್ತರಣಾ ನಿದೇರ್ಶನ ಡಾ.ವೈ.ಕೆ.ಕೋಟಿಕಲ್, ಸಂಶೋಧನಾ ನಿದರ್ೇಶಕ ಡಾ.ಎನ್.ಬಸವಾಜ ಸೇರಿದಂತೆ ಇತರರು ಉಪಸ್ಥಿತರಿದ್ದರು.