2019-20ನೇ ಸಾಲಿನ ಕಬ್ಬು ಅರೆಯುವ ಹಂಗಾಮಿಗೆ ಚಾಲನೆ

ಲೋಕದರ್ಶನ ವರದಿ

ಬೈಲಹೊಂಗಲ:  ರಾಜ್ಯದಲ್ಲಿಯೇ ಅತ್ತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಶ್ರೀ ಸೋಮೇಶ್ವರ ಸಹಕಾರಿ ಸಕ್ಕರೆ ಕಾಖರ್ಾನೆ ರೈತರ ಕಾಖರ್ಾನೆ ಎಂದು ಹೆಸರುವಾಸಿಯಾಗಿದೆ ಎಂದು ನಯಾನಗರ ಸುಖದೇವಾನಂದ ಮಠದ ಅಭಿನವ ಸಿದ್ಧಲಿಂಗ ಸ್ವಾಮೀಜಿ ಹೇಳಿದರು.

ಅವರು ಶನಿವಾರ ಶ್ರೀ ಸೋಮೇಶ್ವರ ಸಹಕಾರಿ ಸಕ್ಕರೆ ಕಾಖರ್ಾನೆಯ 2019-20ನೇ ಸಾಲಿನ ಕಬ್ಬು ಅರೆಯುವ ಹಂಗಾಮಿಗೆ ಚಾಲನೆ ನೀಡಿ ಮಾತನಾಡಿ, ಬಂಡವಾಳಶಾಹಿಗಳು ಖಾಸಗಿ ಸಕ್ಕರೆ ಕಾಖರ್ಾನೆಗಳನ್ನು ನಿಮರ್ಿಸಿ ರೈತರನ್ನು ಲೂಟಿ ಮಾಡುತ್ತಿವೆ. ಇದು ಸರಿಯಾದ ಕ್ರಮವಲ್ಲ. ರೈತರು ಈ ದೇಶಕ್ಕೆ ಅನ್ನ ಹಾಕುವವರು ಅವರು ಹಿತ ಕಾಪಾಡಬೇಕೆ ವಿನಃ ಆತನ ಜೀವನದೊಂದಿಗೆ ಚೆಲ್ಲಾಟವಾಡಬಾರದು. ಸೋಮೇಶ್ವರ ಸಕ್ಕರೆ ಕಾಖರ್ಾನೆಯಲ್ಲಿ ಆಡಳಿತ ಮಂಡಳಿಯು ರೈತರ, ಕಾಮರ್ಿಕರ, ಸಿಬ್ಬಂದಿ ಹಿತ ಕಾಪಾಡುತ್ತಿರುವದು ಶ್ಲಾಘಣೀಯ ಎಂದರು.

ಆರಾದ್ರಿಮಠದ ಮಹಾಂತಯ್ಯ ಶಾಸ್ತ್ರೀಗಳು ಮಾತನಾಡಿ, ಕಾಖರ್ಾನೆ ಪ್ರಗತಿ ಹೊಂದಲು ಎಲ್ಲರ ಸಹಕಾರ ಅಗತ್ಯವಾಗಿದೆ. ಕಾಮರ್ಿಕರ, ರೈತರ ಹಿತ ಕಾಪಾಡಿದರೆ ಕಾಖರ್ಾನೆಗಳು ಉಳಿಯಲು ಸಾಧ್ಯ ಎಂದರು.

ಮಾಜಿ ಶಾಸಕ ಡಾ. ವಿಶ್ವನಾಥ ಪಾಟೀಲ ಮಾತನಾಡಿ, ಕಳೆದ ಬಾರಿ ಕಾಖರ್ಾನೆ 12.5 ಇಳುವರಿ ಹೊಂದಿ ಪ್ರಶಸ್ತಿ ಪಡೆದಿದೆ. ಜಿಲ್ಲೆಯಲ್ಲಿಯೇ ಸಹಕಾರಿ ತಳಹದಿಯಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುದು ಹರ್ಷದಾಯಕ ಎಂದರು. 

ಹಿರಿಯ ನಿದರ್ೇಶಕ ಮಲ್ಲಪ್ಪ ಮುರಗೋಡ ಮಾತನಾಡಿ, ಪ್ರಸಕ್ತ ವರ್ಷ 3 ಲಕ್ಷ ಟನ್ ಕಬ್ಬು ನುರಿಸುವ ಗುರಿ ಹೊಂದಲಾಗಿದ್ದು, ರೈತರು ಗುಣಮಟ್ಟದ ಹೆಚ್ಚು ಕಬ್ಬು ಪೂರೈಸಲು ಮನವಿ ಮಾಡಿದರು. ಕಾಮರ್ಿಕ ಸಿದ್ದಪ್ಪ ಮರಶೆಟ್ಟಿ ಮಾತನಾಡಿ, ಕಾಮರ್ಿಕರು ಅಭಿವೃದ್ದಿಗೆ ಕಾಮರ್ಿಕರು ಸಹಕರಿಸುವ ಭರವಸೆ ನೀಡಿದರು.

ಕಾಖರ್ಾನೆ ಅಧ್ಯಕ್ಷ ಗುರುಪುತ್ರಪ್ಪ ಹೊಸಮನಿ ಅಧ್ಯಕ್ಷತೆವಹಿಸಿದ್ದರು. ಕಾಖರ್ಾನೆಯ ಸಂಸ್ಥಾಪಕ ದಿ.ಆರ್.ಸಿ.ಬಾಳೇಕುಂದರಗಿ ಪುತ್ಥಳಿಗೆ ಪೂಜೆ ಸಲ್ಲಿಸಲಾಯಿತು. ಪೂಜೆಗೆ ಕಬ್ಬು ಪೂರೈಸಿದ ರೈತರನ್ನು ಸತ್ಕರಿಸಲಾಯಿತು. ಮಾಜಿ ಅಧ್ಯಕ್ಷ ದಿ.ಅಪ್ಪೂರಾವ ರುದ್ರಾಪೂರ ಅವರ ಭಾವಚಿತ್ರ ಅನಾವರಣಗೊಳಿಸಲಾಯಿತು.  

ವೇದಿಕೆಯ ಮೇಲೆ ಉಪಾಧ್ಯಕ್ಷ ಪಾರೀಸಪ್ಪ ಭಾವಿ, ನಿದರ್ೇಶಕರಾದ ಮಲ್ಲಿಕಾಜರ್ುನ ಗೂಳಪ್ಪನವರ, ರಾಜು ಕುಡಸೋಮಣ್ಣವರ, ಪ್ರದೀಪ ವಣ್ಣೂರ, ಸಣ್ಣಭೀಮಶೇಪ್ಪ ಅಂಬಡಗಟ್ಟಿ, ಶ್ರೀಮತಿ ಕಮಲಾ ಅವ್ವಕ್ಕನವರ, ಗಂಗಪ್ಪ ಭರಮಣ್ಣವರ, ಬಸವರಾಜ ಇಂಗಳಗಿ, ಮಾಜಿ ನಿದರ್ೇಶಕರಾದ ಬಸವರಾಜ ಸೋಮನಟ್ಟಿ, ಶಿವಪುತ್ರಪ್ಪ ಅವ್ವಕ್ಕನವರ, ಮಲ್ಲಯ್ಯ ರುದ್ರಾಪೂರ, ಮಲ್ಲೇಶ ಗ್ಪಜರ್ೂರ, ಮಹಾಂತೇಶ ಪೂಜೇರ ಇದ್ದರು.

ಕಾಖರ್ಾನೆ ಸಿಬ್ಬಂದಿ, ಕಾಮರ್ಿಕರು, ರೈತರು ಉಪಸ್ಥಿತರಿದ್ದರು. ಅಮೂಲ್ಯ ಬಾಳೇಕುಂದರಗಿ ಸ್ವಾಗತಿಸಿದರು. ಅಶೋಕ ಬೊಮ್ಮಣ್ಣವರ ನಿರೂಪಿಸಿ, ವಂದಿಸಿದರು.