ಮಹಾಲಿಂಗಪುರ 28: ಬುಧವಾರ ಪಟ್ಟಣದ ಸ್ಥಳೀಯ ಮಹಾಲಿಂಗಪುರ ಕ್ರಿಕೆಟ್ ಕ್ಲಬ್ ಆಯೋಜಿಸಿರುವ ಅಂತರ್ರಾಜ್ಯ ಅಪ್ಪು ಟ್ರೋಫಿ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಗೆ ಯುವ ನಾಯಕ ಅರುಣ ಗೋವಿಂದ ಕಾರಜೋಳ ಹಾಗೂ ಗಣ್ಯರು ಜ್ಯೋತಿ ಬೆಳಗುವ ಮೂಲಕ ಚಾಲನೆ ನೀಡಿದರು.
ಬಸ್ ನಿಲ್ದಾಣ ಹತ್ತಿರ ಗೋಕಾಕ ರೋಡ್ ಮಾರ್ಗದ ಮಹಾತ್ಮಾ ಗಾಂಧಿ ಕ್ರೀಡಾಂಗಣದಲ್ಲಿ ಬುಧವಾರದಿಂದ ರವಿವಾರ ವರೆಗೆ ಟೂರ್ನಿಯ ಪಂದ್ಯಗಳು ಜರುಗಲಿವೆ.
ಅಂತಿಮವಾಗಿ ಬಹುಮಾನ ಪಡೆಯುವ ತಂಡಗಳು ಪ್ರಥಮ 1 ಲಕ್ಷ , ದ್ವಿತೀಯ 50 ಸಾವಿರ ಹಾಗೂ ತೃತೀಯ 20 ಸಾವಿರ ಹಾಗೂ ಆಕರ್ಷಕ ಅಪ್ಪು ಟ್ರೋಫಿಗಳನ್ನು ಪಡೆಯಲಿವೆ. ಪಂದ್ಯಾವಳಿಯಲ್ಲಿ ವೈಯಕ್ತಿಕ ಉತ್ತಮ ಪ್ರದರ್ಶನ ನೀಡುವ ಮೂವರು ಆಟಗಾರರಿಗೆ ಅಂದರೆ ಉತ್ತಮ ಬ್ಯಾಟಿಂಗ್, ಬಾಲಿಂಗ್ ಮತ್ತು ಸರಣಿ ಪುರುಷನಿಗೆ ತಲಾ ಸ್ಪೋರ್ಟ್ಸ್ ಕೈ ಗಡಿಯಾರ ನೀಡಲಾಗುವುದು.ಅಲ್ಲದೆ ಪ್ರತಿ ಪಂದ್ಯದಲ್ಲೂ ಉತ್ತಮ ಆಟವಾಡುವ ಆಟಗಾರನಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಘೋಷಿಸಿ ಆತನಿಗೆ ಪ್ರಾಯೋಜಕರಾದ ಸುರೇಶ್ ಹೊಸೂರ ಇವರು ಕೊಡ ಮಾಡುವ ಟೀ- ಶರ್ಟ್ ನೀಡಲಾಗುವುದು.
ಈ ಕಾರ್ಯಕ್ರಮದಲ್ಲಿ ಜಮ್ಮು ಮತ್ತು ಕಾಶ್ಮೀರ ಪೂಂಚ್ ಗಡಿಯಲ್ಲಿ ಡಿಸೆಂಬರ್ 24 ರಂದು ಮಂಗಳವಾರ ಸೇನಾ ವಾಹನ ಪ್ರಪಾತಕ್ಕೆ ಬಿದ್ದು ಮಹಾಲಿಂಗಪುರ ಪಟ್ಟಣದ ಯೋಧ ಮಹೇಶ ಮರೆಗೊಂಡ ಸೇರಿದಂತೆ ಐದು ಜನ ಭಾರತೀಯ ಯೋಧರು ಹುತಾತ್ಮರಾದ ಪ್ರಯುಕ್ತ ಅವರ ಆತ್ಮಕ್ಕೆ ಒಂದು ನಿಮಿಷ ಮೌನ ಆಚರಣೆ ಮಾಡಲಾಯಿತು.
ಸಂದರ್ಭದಲ್ಲಿ ಪಂಚಮಸಾಲಿ ಸಮಾಜದ ಜಿಲ್ಲಾಧ್ಯಕ್ಷ ಧರೆಪ್ಪ ಸಾಂಗ್ಲಿಕರ್ ಕ್ರೀಡೆ ಬಗ್ಗೆ ಮಾತನಾಡಿದರು.ಭಾಜಪ ಯುವ ನಾಯಕ ಅರುಣ ಗೋವಿಂದ. ಕಾರಜೋಳ, ರಬಕವಿ/ ಬನಹಟ್ಟಿ ಪಂಚ ಗ್ಯಾರಂಟಿ ಅಧ್ಯಕ್ಷ ಬಲವಂತಗೌಡ ಪಾಟೀಲ್, ಪ್ರಕಾಶ ಕರ್ಲಟ್ಟಿ, ಶ್ರೀಕಾಂತ ಮಾಗಿ, ಶಿವಶಂಕರ್ ಗುಜ್ಜರ್, ಬಸವರಾಜ ರಾಯರ, ರಾಜು ಯಡಹಳ್ಳಿ, ಶ್ರೀಶೈಲ್ ಚನ್ನನವರ, ಮಹಾಂತೇಶ ಫನಸಲಕರ, ಮೀರಾ ತಟಗಾರ, ಬಾಲಕೃಷ್ಣ ಮಾಳವದೆ, ಮಹಾಲಿಂಗಪ್ಪ ಮಾಳಿ, ಬಸವರಾಜ ಘಟ್ನಟ್ಟಿ, ಅಶೋಕ ಜ. ಅಂಗಡಿ, ಯಾಸೀನ್ ಪಾಂಡು, ರಾಜು ಶೆಟ್ಟರ್, ಅವನೇಶ ಜಾಧವ, ಪರಶುರಾಮ ಪಾತ್ರೋಟ ಇದ್ದರು. ಮಹಾದೇವ ಕಡಬಲ್ಲವರ ಸ್ವಾಗತಿಸಿ, ಪತ್ರಕರ್ತ ಲಕ್ಷ್ಮಣ ಕಿಶೋರಿ ನಿರೂಪಿಸಿ ವಂದಿಸಿದರು.