ಜೇನು ಪ್ರದರ್ಶನ, ಮಾರಾಟ ಮೇಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಿಂದ ಚಾಲನೆ

ಕೊಪ್ಪಳ: ಕೊಪ್ಪಳ ತೋಟಗಾರಿಕೆ ಇಲಾಖೆ ವತಿಯಿಂದ ಆಯೋಜಿಸಲಾದ ಜೇನು ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಕರ್ನಾಟಕ ಸರ್ಕಾರದ ಉಪ ಮುಖ್ಯಮಂತ್ರಿಗಳು, ಸಾರಿಗೆ ಮತ್ತು ಕೃಷಿ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮಣ ಸಂಗಪ್ಪ ಸವದಿ ಅವರು ರಿಬ್ಬನ್ ಕತ್ತರಿಸುವುದರ ಮೂಲಕ ಚಾಲನೆ ನೀಡಿದರು.

"ಜೆನು ಮೇಳ" ಜೇನು ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಜಿಲ್ಲಾ ಕೇಂದ್ರವಾದ ಕೊಪ್ಪಳದಲ್ಲಿ  ತೋಟಗಾರಿಕೆ ಇಲಾಖೆ ಕಛೇರಿ ಆವರಣದಲ್ಲಿ ಇಂದಿನಿಂದಿ (ಅ.21 ರಿಂದ 23 ರವರೆಗೆ) ಆಯೋಜಿಸಲಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮಣ ಸಂಗಪ್ಪ ಸವದಿ ಅವರು ಸೋಮವಾರದಂದು ಚಾಲನೆ ನೀಡಿ, ನಂತರ ಮೇಳದಲ್ಲಿರುವ ಜೇನು ಸಾಕಾಣಿಕೆ ಸಾಮಾಗ್ರಿಗಳ ಹಾಗೂ ಜೆನು ಪದಾರ್ಥಗಳ ವೀಕ್ಷಣೆ ಮಾಡಿದರು.  ಅಲ್ಲದೇ ಜೇನು ತುಪ್ಪದ ಸವಿ ಸವೆದರು.   

ಕೊಪ್ಪಳ ಜಿಲ್ಲಾ ಪಂಚಾಯತ್ ಅಧ್ಯಕ್ಷ ಹೆಚ್. ವಿಶ್ವನಾಥ ರೆಡ್ಡಿ, ಸಂಸದ ಕರಡಿ ಸಂಗಣ್ಣ, ಶಾಸಕರುಗಳಾದ ಕೆ. ರಾಘವೇಂದ್ರ ಹಿಟ್ನಾಳ್, ಹಾಲಪ್ಪ ಆಚಾರ ಹಾಗೂ ಬಸವರಾಜ ದಢೇಸೂಗೂರು, ತಾ.ಪಂ ಅಧ್ಯಕ್ಷ ಬಾಲಚಂದ್ರನ್, ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಘುನಂದನ್ ಮೂತರ್ಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ. ಸಂಗೀತಾ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಕೃಷ್ಣ ಉಕ್ಕುಂದು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಹಲವು ಗಣ್ಯರು ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದರು.  

ಮೇಳದ ವಿಶೇಷತೆಗಳು: ಈ  ಮೇಳದಲ್ಲಿ ಜೇನು ನೋಣಗಳ ಸಾಕ್ಷಾ ಚಿತ್ರ ನಿರ್ಮಿಸಿದ್ದು, ವಿಶೇಷವಾಗಿದೆ.  ಜೇನು ಪ್ರದರ್ಶನ ಮತ್ತು ಮಾರಾಟ ಮೇಳವು ಮೂರು ದಿನಗಳ ವರೆಗೆ ಜರುಗಲಿದ್ದು, ಜೇನಿನ ವಿಧಗಳಾದ ಹೆಜ್ಜೇನು, ಕಟ್ಟಿಗೆ ಜೇನು, ನೇರಳೆ ಜೇನು, ಕುಂಟ ನೇರಳೆ ಜೇನು, ಮಚ್ಚು ಜೇನು, ಯುರೋಪ ಜೇನು, ರಷ್ಯಾ ಜೇನು ಇತ್ಯಾದಿ ಜಾತಿಯ ಜೇನುಗಳು ಇದ್ದು, ಜೆನು ತುಪ್ಪ, ರಾಯಲ್ ಜೆಲ್ಲಿ, ಜ್ಯಾಂ, ಜೇನು ವಿಷ, ಜೇನಿನ ಮೇಣಬತ್ತಿ, ಕ್ಯಾಂಟಿ, ಝಂಡುಬಾಂಬ್ ಸೇರಿದಂತೆ ಇತ್ಯಾದಿ ವಸ್ತುಗಳು ಹಾಗೂ ಹಲಾವಾರು ಖಾಯಿಲೆಗಳ ಔಷಧಿಗಳು ಕೂಡ ಲಭ್ಯ ಇವೆ.  ಜೇನು ಸಾಕಾಣಿಕೆಗೆ ಸಂಬಂಧಿಸಿದ ಹಾಗೂ ಇದಕ್ಕೆ ಬೇಕಾಗುವ ಪರಿಕರಗಳ ಸಂಪೂರ್ಣ ಮಾಹಿತಿಯು ಪ್ರಾತ್ಯಕ್ಷಿತೆ ಮೇಳದಲ್ಲಿ ಲಭ್ಯವಿದೆ.  ಜೇನು ಒಂದು ಕೆ.ಜಿ 200 ರೂಪಾಯಿಗಳಿಂದ ಎರಡು ಸಾವಿರ ಬೆಲೆ ಇದೆ.  ಜೇನು ಸಾಕಾಣಿಕೆಗೆ ಬೇಕಾಗುವ ಪೆಟ್ಟಿಗೆ, ಸ್ಟ್ಯಾಂಡ್, ಹಾಗೂ ಇತ್ಯಾದಿ ಅವಶ್ಯಕ ವಸ್ತುಗಳ ಖರೀದಿಗೆ ತೋಟಗಾರಿಕೆ ಇಲಾಖೆ ವತಿಯಿಂದ ನೀಡುವ ಸಹಾಯಧನ ಕುರಿತಾದ ಮಾಹಿತಿಯು ಸಹ ಮೇಳದಲ್ಲಿ ಪಡೆಯಬಹುದಾಗಿದೆ.