ಹಾವೇರಿ19: ವಾತರ್ಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಆಯೋಜಿಸಲಾದ ಸರಕಾರದ ಅಭಿವೃದ್ದಿ ಕೆಲಸಗಳ ಛಾಯಾಚಿತ್ರ ಪ್ರದರ್ಶನಕ್ಕೆ ರಾಣೇಬೆನ್ನೂರು ತಾಲೂಕ ಪಂಚಾಯತ್ ಅಧ್ಯಕ್ಷೆ ಗೀತಾ ಲಮಾಣಿ ಅವರು ಚಾಲನೆ ನೀಡಿದರು.
ರಾಣೇಬೆನ್ನೂರು ನಗರದ ತಹಶೀಲ್ದಾರ ಕಚೇರಿ ಆವರಣದಲ್ಲಿ ಫೆ.19 ರಿಂದ 21ರವರೆಗೆ ಆಯೋಜಿಸಲಾದ ಛಾಯಾಚಿತ್ರ ಪ್ರದರ್ಶನ ಕಾರ್ಯಕ್ರಮಕ್ಕೆ ಬುಧವಾರ ಚಾಲನೆ ನೀಡಿದ ಅವರು ಛಾಯಾಚಿತ್ರಗಳ ವೀಕ್ಷಣೆ ಮಾಡಿದರು.
ವಿಶ್ವ ಆಥರ್ಿಕ ವೇದಿಕೆ ದಾವೋಸ್ ಯೋಜನೆ, ಪ್ರವಾಹ ಸಂತ್ರಸ್ತರಿಗೆ ಸಹಾಯ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸುಸ್ಥಿರ ಅಭಿವೃದ್ದಿಯ ಗುರಿಗಳು, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಕಲ್ಯಾಣ ಕನರ್ಾಟಕ ಪರ್ವಕ್ಕೆ ಚಾಲನೆ, ಜಲಾನಯನ ಅಭಿವೃದ್ಧಿ ಹಾಗೂ ಜಲಸಂಪನ್ಮೂಲ, ಸಣ್ಣ ನೀರಾವರಿ ಇಲಾಖೆ, ಪಶುಪಾಲನಾ ಇಲಾಖೆ, ಮೀನುಗಾರರ ಸಾಲಮನ್ನಾ, ಸಪ್ತಪದಿ ಸಾಮೂಹಿಕ ವಿವಾಹ, ತೋಟಗಾರಿಕೆ ಇಲಾಖೆ, ಬೆಂಗಳೂರು ಸರ್ಬನ್ ರೈಲು ಯೋಜನೆ, ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ, ಕಾಮರ್ಿಕ ಇಲಾಖೆ, ನೇಕಾರರ ಸಾಲಮನ್ನಾ, ಕೈಗಾರಿಕೆಗಳ ಉತ್ತೇಜನ, ಸಮಾಜ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹೀಗೆ ವಿವಿಧ ಪ್ರಯೋಜನಗಳು ಸಾರ್ವಜನಿಕರಿಗೆ ಕಲ್ಪಿಸುವಲ್ಲಿ ಛಾಯಾಚಿತ್ರಗಳ ಪ್ರದರ್ಶನ ಆಯೋಜಿಸಲಾಗಿದೆ.
ಜಿ.ಪಂ ಸದಸ್ಯೆ ಮಂಗಳಗೌರಿ ಪೂಜಾರ, ತಾ.ಪಂ ಸದಸ್ಯರಾದ ಭರಮಪ್ಪ ಉಮರ್ಿ, ನೀಲಕಂಠಪ್ಪ ಕೂಸಗೂರ, ನಗರಸಭೆ ಸದಸ್ಯ ಶಶಿಧರ ಬಸೆನಾಯಕರ್, ತಹಶೀಲ್ದಾರ್ ಬಸನಗೌಡ ಕೊಟೂರ, ವಾತರ್ಾಧಿಕಾರಿ ಡಾ.ಬಿ.ಆರ್ ರಂಗನಾಥ್, ಹಿರಿಯ ತೋಟಗಾರಿಕೆ ಸಹಾಯಕ ನಿದರ್ೆಶಕಿ ವಿಜಯಲಕ್ಷ್ಮಿ ಟಿ.ಎಸ್, ಪಂಚಾಯತ್ ರಾಜ್ ಕಾರ್ಯನಿವರ್ಾಹಕ ಅಭಿಯಂತರ ರಾಮಣ್ಣ ಬಜಾರಿ ಇತರರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ರಾಣೇಬೆನ್ನೂರ ತಾಲೂಕಿನ ಯಕಲಾಸಪುರ ಗ್ರಾಮದ ಜನನಿ ಜಾನಪದ ಕಲಾ ವೇದಿಕೆಯಿಂದ ಬೀದಿನಾಟಕ ಹಾಗೂ ಹಾವೇರಿ ತಾಲೂಕಿನ ಚಿಕ್ಕಲಿಂಗದಹಳ್ಳಿ ಗ್ರಾಮದ ಜೈ ಹನುಮಾನ ಕಲಾ ತಂಡದಿಂದ ಜಾನಪದ ಕಾರ್ಯಕ್ರಮದ ಮೂಲಕ ಸಕರ್ಾರದ ಯೋಜನೆಗಳು ಜಾಗೃತಿ ಮೂಡಿಸಲಾಯಿತು.