ಜಿಲ್ಲಾ ಉದ್ಯೋಗ ಮೇಳ ವೆಬ್ಸೈಟ್ಗೆ ಜಿಲ್ಲಾಧಿಕಾರಿಗಳಿಂದ ಚಾಲನೆ

ಹಾವೇರಿ ಫೆ.7: ನಗರದಲ್ಲಿ ಫೆಬ್ರುವರಿ 22  ಹಾಗೂ 23 ರಂದು ಆಯೋಜಿಸಲಾದ ಜಿಲ್ಲಾ ಮಟ್ಟದ ಉದ್ಯೋಗ ಮೇಳದ ವೆಬ್ಸೈಟ್ಗೆ  ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಅವರು  ಚಾಲನೆ ನೀಡಿದರು.

ಕನರ್ಾಟಕ ರಾಜ್ಯ ನಿದರ್ೇಶನದಂತೆ ಕೌಶಲ್ಯಾಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾಡಳಿತ ಸಹಯೋಗದಲ್ಲಿ ನಗರದ ಹುಕ್ಕೇರಿಮಠದ ಮಹಿಳಾ ಕಾಲೇಜು ಆವರಣದಲ್ಲಿ ಜಿಲ್ಲಾ ಮಟ್ಟದ ಉದ್ಯೋಗ ಮೇಳವನ್ನು ಹಮ್ಮಿಕೊಳ್ಳಲಾಗಿದೆ. ಉದ್ಯೋಗ ಮೇಳದ ಕಾಯರ್ಾಕಾರಿ ಸಮಿತಿ ತಿಮರ್ಾನದಂತೆ ಉದ್ಯೋಗ ಮೇಳದ ಪ್ರತ್ಯೇಕವಾದ ಅಂತಜರ್ಾಲ ವಿಳಾಸವನ್ನು ಶುಕ್ರವಾರ ಉದ್ಘಾಟಿಸಿದರು.

ಜಿಲ್ಲಾ ಮಟ್ಟದ ಉದ್ಯೋಗ ಮೇಳದಲ್ಲಿ  ಭಾಗವಹಿಸಲು ಆಸಕ್ತಿಯುಳ್ಳ ನಿರುದ್ಯೋಗಿಗಳು ಹಾಗೂ ಉದ್ಯೋಗದಾತರು ತಮ್ಮ ಸಂಪೂರ್ಣ ಮಾಹಿತಿಯನ್ನು ಣಣಠಿ://ಚಿತಜಡಿಣಜಥಿಠರಚಿಟಜಟಚಿ.ಟಿ/ ಈ ಅಂತಜರ್ಾಲ ಸಂಪಕರ್ಿಸಿ ಉದ್ಯೋಗ ಮೇಳದಲ್ಲಿ ಭಾಗವಹಿಸಲು ಉಚಿತವಾಗಿ ನೊಂದಾಣಿ ಮಾಡಿಕೊಳ್ಳಬಹುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಯೋಗೇಶ್ವರ, ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಸುಭಾಸ ಗೌಡರ, ಅಭಿಯಾನ ವ್ಯವಸ್ಥಾಪಕ ಸಂಜಯ ಕೋರೆ ಹಾಗೂ ರೋಮನ್ ಟೆಕ್ನಾಲಜಿ ಸಿದ್ದು ಹಿರೇಮಠ ಉಪಸ್ಥಿತರಿದ್ದರು.

    ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ; 08375-249291 ಹಾಗೂ ಜ-ಟಚಿಟ: ಜಜಜಚಿತಜಡಿ@ರಟಚಿಟ.ಛಿಠಟ ಸಂಪಕರ್ಿಸಲು  ಕೋರಲಾಗಿದೆ.