ಲೋಕದರ್ಶನ ವರದಿ
ರಾಯಬಾಗ 20: ತಾ.ಪಂ.ಅನುದಾನದಲ್ಲಿ ಮಂಜೂರಾದ ತಾಲೂಕಿನ ಹೊಸ ದಿಗ್ಗೇವಾಡಿ ಗ್ರಾಮದ ಅಂಬೇಡ್ಕರ್ ನಗರದಲ್ಲಿ ಸಿಸಿ ರಸ್ತೆ, ಕೋಳಿ ಗಲ್ಲಿಯಲ್ಲಿ ಚರಂಡಿ ನಿರ್ಮಾಣ ಮತ್ತು ಮುಸ್ಲಿಂ ಸಮುದಾಯದ ಸ್ಮಶಾನ ಭೂಮಿಯಲ್ಲಿ ಹೈಮಾಸ್ ವಿದ್ಯುತ್ ದೀಪ ಅಳವಡಿಕೆ ಹಾಗೂ ಹಳೆ ದಿಗ್ಗೇವಾಡಿಯ ಬನ್ನಿಗಿಡದಿಂದ ಲಗಮಣ್ಣಾಜ್ಜ ಗುಡಿವರೆಗೆ ರಸ್ತೆ ಖಡೀಕರಣ ಕಾಮಗಾರಿಗಳಿಗೆ ತಾ.ಪಂ.ಸದಸ್ಯ ನಾಮದೇವ ಕಾಂಬಳೆ ಬುಧವಾರದಂದು ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ತಾ.ಪಂ.ಯಲ್ಲಿನ ಅನುದಾನದಲ್ಲಿ ದಿಗ್ಗೇವಾಡಿ ತಾ.ಪಂ.ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.
ಜಿ.ಪಂ.ಸದಸ್ಯೆ ಜಯಶ್ರೀ ಮೊಹಿತೆ, ಮಹಾದೇವ ಗಂಗಾಯಿ, ದಾಮೋದ ಜಮಾದಾರ, ಕೇದಾರಿ ಫುಂಡಿಪಲ್ಲೆ, ಮಲ್ಲಯ್ಯ ಸ್ವಾಮಿ, ದೀಪಕ ಜೋಡಟ್ಟಿ, ಗುಂಡು ಕಾಂಬಳೆ, ಸುಭಾಷ ಚೌಗಲಾ, ರಮೇಶ ಬೆಳಗಲಿ, ಗಂಗಾಧರ ಕಾಂಬಳೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.