ವಿವಿಧ ಅಭಿವೃದ್ಧಿ ಕಾಮಗಾರಿಗೆ ಮಹಾದೇವ ಚಾಲನೆ

ಲೋಕದರ್ಶನ ವರದಿ

ಅಥಣಿ 02: ಕಾಗವಾಡ ಮತಕ್ಷೇತ್ರದಲ್ಲಿ ವಿವಿಧ ಜನಪರ ಹಾಗೂ ಅಭಿವೃದ್ಧಿ ಕಾಮಗಾರಿಗಳಿಗಾಗಿ  ಇದೇ ಪ್ರಥಮ ಬಾರಿಗೆ 40 ಕೋಟಿಗೂ ಹೆಚ್ಚು ಅನುದಾನ ಬಿಡುಗಡೆಯಾಗಿದ್ದು, ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ಬಿಜೆಪಿ ಮುಖಂಡ ಮಹಾದೇವ ಕೋರೆ ಹೇಳಿದರು. ಅವರು ಮದಭಾವಿ ಜಿಲ್ಲಾ ಪಂಚಾಯತ ಕ್ಷೇತ್ರ ವ್ಯಾಪ್ತಿಯಲ್ಲಿ ಹಮ್ಮಿಕೊಂಡಿದ್ದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡುತ್ತಿದ್ದರು.  

       ಇಲ್ಲಿಯವರೆಗೂ ಕಾಗವಾಡ ಕ್ಷೇತ್ರದಲ್ಲಿ ಮುಖ್ಯ ರಸ್ತೆಗಳ ಅಭಿವೃದ್ಧಿಗೆ ಮಾತ್ರ ಅನುದಾನ ಬಿಡುಗಡೆಯಾಗುತ್ತಿತ್ತು ಆದರೆ ಸ್ವಾತಂತ್ರ್ಯದ ನಂತರದಿಂದ ಇಲ್ಲಿಯವರೆಗೂ ಕಾಗವಾಡ ಕ್ಷೇತ್ರದ  ತೋಟದ ರಸ್ತೆಗಳು ಡಾಂಬರೀಕರಣವನ್ನೇ ಕಂಡಿರಲಿಲ್ಲ ಹೀಗಾಗಿ ಮಳಗಾಲದ ಸಂದರ್ಭದಲ್ಲಿ  ತೋಟದ ವಸತಿಯಲ್ಲಿರುವ ರೈತರಿಗೆ ಹೋರಗೆ ಬರಲು ಸಾಧ್ಯವೇ ಆಗುತ್ತಿತಲಿಲ್ಲ  ಎಂದ ಅವರು ಶ್ರೀಮಂತ ಪಾಟೀಲರು ತೋಟದ ವಸತಿಗೆ ಸಂಪರ್ಕ ಸಾಧಿಸುವ ಎಲ್ಲ ರಸ್ತೆಗಳ ಅಭಿವೃದ್ಧಿ ಪಡಿಸಬೇಕು ಎಂದು ನಿರ್ಧರಿಸಿ  ತೋಟದ ವಸತಿಗಳ ಸಂಪರ್ಕ ರಸ್ತೆಗಳಿಗೆ ಅನುದಾನ ಬಿಡುಗಡೆಗೊಳಿಸಿದ್ದಾರೆ ಎಂದು ತಿಳಿಸಿದರು.  ಮದಭಾವಿ ಜಿ.ಪಂ ಸದಸ್ಯ ಆರ್.ಎಮ್.ಪಾಟೀಲ ಮಾತನಾಡಿ, ಮದಭಾವಿ ಗ್ರಾಮದ ವಡ್ಡರ ವಸತಿಗೆ ಕುಡಿಯುವ ನೀರು ಪೂರೈಕೆ ಮಾಡುವ 30 ಲಕ್ಷ ಯೋಜನೆಗೆ, ಕೌಲಗುಡ್ಡ ಗ್ರಾಮದ ನೀರಿನ ಟ್ಯಾಂಕ ನಿರ್ಮಿಸಿ ಕುಡಿಯುವ ನೀರು ಪೂರೈಕೆ ಯೋಜನೆಗೆ ಮತ್ತು ನಾಗನೂರ ಪಿ.ಎ.ಗ್ರಾಮದ ಪವಾರ ವಸ್ತಿಯಲ್ಲಿ 25 ರೂ ವೆಚ್ಚದಲ್ಲಿ ನೀರು ಪೂರೈಕೆ ಮಾಡುವ ಕಾಮಗಾರಿಗೆ ಮತ್ತು ಪಾಂಡೆಗಾಂವ ಹತ್ತಿರದ ಚವ್ಹಾಣ ತೋಟವನ್ಬು ಸಂಪಕರ್ಿಸುವ ತೋಟದ ರಸ್ತೆಗೆ ಚಾಲನೆ ನೀಡಿದ್ದೇವೆ ಎಂದು ಹೇಳಿದ ಅವರು  ಇದೇ ರೀತಿ ಮುಂದಿನ ದಿನಗಳಲ್ಲಿಯೂ ಜವಳಿ ಮತ್ತು ಅಲ್ಪಸಂಖ್ಯಾತ ಸಚಿವರಾದ ಶ್ರೀಮಂತ ಪಾಟೀಲ ನೇತೃತ್ವದಲ್ಲಿ ಅಭಿವೃದ್ಧಿ ಮತ್ತು ಜನಪರ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವುದಾಗಿ ಹೇಳಿದರು. ಮುಖಂಡರಾದ ವಿನಾಯಕ ಬಾಗಡಿ, ಈಶ್ವರ ಕುಂಬಾರೆ,  ಅಪ್ಪಣ್ಣ ಮಗದುಮ, ಮಹಾದೇವ ಕಾಂಬಳೆ, ಸಂಜೀವ ಅದಾಟೆ, ಶಿವಾಜಿ ಗಾಡಿವಡ್ಡರ, ರಾಜು ಮಾನೆ, ಗ್ರಾಮೀಣ ಕುಡಿಯುವ ನೀರು ಇಲಾಖೆಯ ವೀರಣ್ಣಾ ವಾಲಿ, ಗ್ರಾಮ ಪಂಚಾಯತ ಅಧ್ಯಕ್ಷ ಉಪಸ್ಥಿತರಿದ್ದರು.