ಬೆಳಗಾವಿ 5-ಪ್ರಕೃತಿ ವಿಕೋಪಗಳಲ್ಲಿ ಮೂರು ವಿಧಗಳು. ದೇಹದಲ್ಲಿಯೇ ಉತ್ಪತ್ತಿಯಾಗುವ ವಿಕೋಪಗಳು, ಪ್ರಾಣಿ ಪಕ್ಷಿಗಳಿಂದಾಗುವ ವಿಕೋಪಗಳು ಹಾಗೂ ಭೂಕಂಪ, ಜ್ವಾಲಾಮುಖಿ ಮುಂತಾದ ನೈಸಗರ್ಿಕ ವಿಕೋಪಗಳು. ಇತ್ತೀಚೆಗೆ ಸಂಭವಿಸಿದ ನೆರೆಹಾವಳಿಯಿಂದ ಸಾವಿರಾರು ಜನ ಮನೆಮಠಗಳನ್ನು ಕಳೆದುಕೊಂಡಿದ್ದಾರೆ. ರೋಗಗಳು ಹಬ್ಬಿಕೊಳ್ಳತ್ತಲಿವೆ ಪಡಬಾರದ ಸಂಕಷ್ಟಗಳನ್ನು ಪಡುತ್ತಿದ್ದಾರೆ. ಮರುನಿಮರ್ಾಣಗೊಳ್ಳಲು ಕನಿಷ್ಠ ಹತ್ತು ವರ್ಷಗಳಾದರೂ ಬೇಕಾಗುತ್ತದೆ. ಡ್ಯಾಂಗಳು ಜಲಬಾಂಬಗಳು ಇದ್ದ ಹಾಗೆ ಎಂದು ನಿಸರ್ಗ ಚಿಕಿತ್ಸಕರಾದ ಡಾ. ಹನುಮಂತ ಮಳಲಿ ಇಂದಿಲ್ಲಿ ಹೇಳಿದರು.
92 ನೇ ನಾಡಹಬ್ಬ ಉತ್ಸವ ಸಮಿತಿ ಬೆಳಗಾವಿ ಇವರು ಇದೆ ದಿ.1 ರಿಂದ ದಿ. 5 ಶನಿವಾರದವರೆ ಚನ್ನಮ್ಮ ವೃತ್ತದ ಬಳಿಯಿರುವ ಸಾಹಿತ್ಯ ಭವನ ಹೊರ ಆವರಣ ಮಂಟಪದಲ್ಲಿ ನಾಡಹಬ್ಬ ಉತ್ಸವವನ್ನು ಹಮ್ಮಿಕೊಂಡಿದ್ದಾರೆ. ನಾಲ್ಕನೇ ದಿನವಾದ ಇಂದು 'ಪ್ರಕೃತಿ ವಿಕೋಪ ಹಾಗೂ ನೆರೆ ಸಂತ್ರಸ್ತರ ಬದುಕು ಬವಣೆೆ ಎಂಬ ವಿಷಯದ ಗೋಷ್ಠಿಯ ಮುಖ್ಯ ಅತಿಥಿ ಉಪನ್ಯಾಸಕರಾಗಿ ಆಗಮಿಸಿದ್ದ ಡಾ. ಹನುಮಂತ ಮಳಲಿ ಅವರು ಮೇಲಿನಂತೆ ಅಭಿಪ್ರಾಯ ಪಟ್ಟರು.
ಮುಂದೆ ಮಾತನಾಡುತ್ತ ಡಾ. ಮಳಲಿಯವರು ನೆರೆಹಾವಳಿಯು ಮನುಷ್ಯ ನೀರಿಗೆ ತೋರುತ್ತಿರುವ ಅಗೌರವವನ್ನು ಅದು ವ್ಯಕ್ತ ಪಡಿಸುತ್ತಿದೆ. ನೆರೆಹಾವಳಿ ಕೇವಲ ಕೆಟ್ಟದ್ದನ್ನೇ ಮಾಡಿದೆ ಎಂದು ನಾನು ಹೇಳುವುದಿಲ್ಲ. ಇದರಿಂದ ಸಾಕಷ್ಟು ಒಳ್ಳೆಯ ಅಂಶಗಳನ್ನು ನಾನು ಕಂಡುಕೊಂಡಿದ್ದೇನೆ. ಅದೆಂದರೆ ಜಾತಿ ಮತ ಪಂತ, ಅಂತಸ್ತುಗಳನ್ನು ಬಿಟ್ಟು ಎಲ್ಲರೂ ಒತ್ತಟ್ಟಿಗೆ ಎಲ್ಲರನ್ನೂ ಸೇರುವಂತೆ ಮಾಡಿತು. ಎಲ್ಲರೂ ಒದೆಡೆ ಊಟ ಮಾಡುವ ಸಾಮರಸ್ಯವನ್ನು ತಂದುಕೊಟ್ಟಿತು. ಅಣ್ಣ ತಮ್ಮಂದಿರು ಬಡದಾಡಿ ವೈರಿಗಳಾದವರನ್ನು ಮತ್ತೆ ವೈಮನಸ್ಸನ್ನು ಮರೆತು ಕೂಡಿಸಿದೆ ಎಂದು ಹೇಳಿದರು.
ಮುಂದೆ ಕನ್ನಡ ಭಾಷೆ ಇಂದಿನಿ ಶಿಕ್ಷಣ ಕುರಿತು ಹೇಳುತ್ತ ಡಾ. ಮಳಲಿಯವರು ಕನ್ನಡ ಹೃದಯವನ್ನು ಮುಟ್ಟುವ ಭಾಷೆಯೆಂದು ಸ್ವಾಮಿ ವಿವೇಕಾನಂದರು ಹೇಳಿದ್ದಾರೆ. ರಾಮಾಯಣ ಕಾಲದಿಂದಲೂ ಕನ್ನಡ ಭಾಷೆಯಿತ್ತು ಎಂದು ಹೇಳಿದ ಅವರು ಮೊದಲು ಜೀವನ ಶಿಕ್ಷಣವಿತ್ತು. ಮನುಷ್ಯ ಜೀವನದಲ್ಲಿ ಹೇಗೆ ಬದುಕಬೇಕು, ಬಾಳಬೇಕು. ಜೀವನದಲ್ಲಿ ಎಷ್ಟೇ ಕಷ್ಟ ಬಂದರೂ ಹೇಗೆ ದೈರ್ಯದಿಂದ ಎದುರಿಸಬೇಕೆಂಬುದನ್ನು ಶಿಕ್ಷಣ ಹೇಳಿಕೊಡುತ್ತಿತ್ತು. ಆದರಿಂದು ಉಪಜೀವನದ ಶಿಕ್ಷಣವಾಗಿದೆ. ಹಣಕ್ಕಾಗಿ, ಅಂತಸ್ತಿಗಾಗಿ ಶಿಕ್ಷಣಗಳು ಮಾರ್ಪಟ್ಟಿವೆ ಎಂದು ಅವರು ಹೇಳಿದರು.
ಡಾ. ಎಚ್. ಬಿ. ರಾಜಶೇಖರ ಅವರು ಮಾತನಾಡಿ ಮನುಷ್ಯ ತಾನು ಸಂತೋಷ ಪಡುವುದರ ಜೊತೆ ಬೇರೆಯವರನ್ನು ಸಂತೋಷ ಪಡಿಸಬೇಕು. ನಾಡಹಬ್ಬ ಉತ್ಸವ ಸಮಿತಿಯು ಪ್ರತಿವರ್ಷವೂ ಸಾಹಿತ್ಯ ಸಂಗೀತ ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ನೀಡುತ್ತ ಬಂದಿದೆ. ಹೊಸ ಹೊಸ ಉಪನ್ಯಾಸಕರನ್ನು ಕರೆದು ಅವರ ಅದ್ಭುತ ವಿಚಾರಗಳನ್ನು ತಿಳಿಸುತ್ತ ಬಂದಿದೆ. ಎಂದು ಹೇಳಿದರು.
ಪುಷ್ಪಾ ಹುಬ್ಬಳ್ಳಿ, ಈರಣ್ಣ ದೇಯಣ್ಣವರ, ವಿ.ಕೆ.ಪಾಟೀಲ, ರಾಜೇಶ್ವರಿ ಹಿರೇಮಠ, ಸರಳಾ ಹೇರೇಕರ, ಜ್ಯೋತಿ ಬದಾಮಿ ಮುಂತಾದವರು ಉಪಸ್ಥಿತರಿದ್ದರು.
. ಡಾ. ಸ್ವಪ್ನಾ ಕುಲಕಣರ್ಿ ಅವರು ಹಾಡಿದ ನಾಡಗೀತೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಡಾ. ಸಿದ್ಧನಗೌಡ ಪಾಟೀಲ ಅಧ್ಯಕ್ಷತೆಯನ್ನು ವಹಿಸಿದ್ದರು. ಡಾ. ಸಿ. ಕೆ. ಜೋರಾಪೂರ ಸ್ವಾಗತಿಸಿದರು ಎಲ್. ವಿ. ಪಾಟೀಲ ನಿರೂಪಿಸಿದರು. ಆರ್. ಪಿ. ಪಾಟೀಲ ವಂದಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮ: ಗೋಕಾಕದ ಶ್ರೀಮತಿ ರಜನಿ ಜಿರಗ್ಯಾಳರವರ ಅಮ್ಮಾಜಿ ನೃತ್ಯಶಾಲೆ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಇದರಲ್ಲಿ ಡಿ. ಎಸ್. ಕಕರ್ಿಯವರ ಹಚ್ಚೆವು ಕನ್ನಡದ ದೀಪ... ಹಾಡಿಗೆ ಹೆಜ್ಜೆ ಹಾಕಿದ ಕು. ನಿತ್ಯಾ ಹುಣಶಿಗಿಡದ ಪುಟ್ಟ ಬಾಲಕಿ ಅದ್ಭುತ ನೃತ್ಯ ಮಾಡಿ ಪ್ರೇಕ್ಷಕರ ಗಮನ ಸೆಳೆದಳು. ಪಲ್ಲವಿ ಮತ್ತು ತಂಡದವರು ಉದಯವಾಗಲಿ ನಮ್ಮ ಚಲುವ ಕನ್ನಡನಾಡು.., ಸರಸ್ವತಿ ಹಾಗೂ ತಂಡದವರು ಜಯ ಗಣೇಶ... ಜಯ ಗಣೇಶ ಹಾಡಿಗೆ ನೃತ್ಯ ಮಾಡುವುದರ ಮೂಲಕ ತಮ್ಮ ಅದ್ಭುತ ಪ್ರತಿಭೆಯನ್ನು ತೋರಿಸಿ ಚಪ್ಪಾಳೆ ಗಿಟ್ಟಿಸಿಕೊಂಡರು. ಒಟ್ಟಿನಲ್ಲಿ ಇದೊಂದು ಸುಂದರೆ ಸಂಜೆಯಾಗಿತ್ತು.