ನಾಟಕಗಳು ಸಾಮಾಜಿಕ ಮೌಲ್ಯ ಕಾಪಾಡುವ ಸಾಧನಗಳು: ಹೊನಕಟ್ಟಿ

Dramas are tools to preserve social values: Honakatti

ತಾಂಬಾ 12:  ನಾಟಕಗಳು ಸಾಮಾಜಿಕ ಮೌಲ್ಯ ಕಾಪಾಡುವ ಸಾಧನಗಳು. ಆಧುನಿಕ ತಂತ್ರಜ್ಞಾನದ ಯುಗದಲ್ಲಿಯೂ ಗುಣಮಟ್ಟದ ನಾಟಕಗಳಿಗೆ ಪ್ರೇಕ್ಷಕರ ಬೆಂಬಲ ದೊರಕುತ್ತದೆ ಎಂದು ಪೋಲಿಸ  ವೃತ್ತ ನೀರೀಕ್ಷಕ ಡಾ ಜ್ಯೋತಿಲಿಂಗ ಹೊನಕಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದರು.  

ಹರಳಯ್ಯನಹಟ್ಟಿ ಗ್ರಾಮದ  ಏಳುಮಕ್ಕಳ ತಾಯಿ ಜಾತ್ರೆಯ ನಿಮಿತ್ತ ರೆಬಿನಾಳ  ಗ್ರಾಮದ ಶ್ರೀ ಬಸವೇಶ್ವರ ಕಲಾ ಸಂಘ ಅಭಿನಯಿಸಿದ ಶಿವಶರಣೆ ಮಹಾಸಾದ್ವಿ  ಹೇಮರೆಡ್ಡಿ ಮಲ್ಲಮ್ಮ  ನಾಟಕವನ್ನು ಉದ್ಘಾಟಿಸಿ ಮಾತನಾಡಿದ ಅವರು ಇತ್ತಿಚಿಗೆ ನಾಟಕಗಳ ಪ್ರದರ್ಶನ ಕುಂಠಿತಗೊಳ್ಳುತ್ತಿವೆ. ಇಂದು ನಾಟಕಗಳಿಗೆ ಸಾವ9ಜನಿಕರು ಪ್ರೋತ್ಸಾಹಿಸುವ ಅವಶ್ಯಕತೆಯಿದೆ ಆದುನಿಕ ಯುಗದಲ್ಲಿ ಟಿವಿ ಮಾದ್ಯಮಗಳಿಂದ ರಂಗಭೂಮಿ ನಾಟಕಗಳು ನಶಿಸಿ ಹೊಗುತ್ತಿವೆ ಹೀಗಾಗಿ ರಂಗಭೂಮಿಯನ್ನೆ ನಂಬಿ ನಾಟಕದಿಂದ ಬದುಕು ಕಟ್ಟಿಕೊಳ್ಳುವ ನಿಜವಾದ ಕಲಾವಿದರ ಜೀವನ ಸಂಕಷ್ಟಕ್ಕೆ ಸಿಲುಕಿದೆ ಎಂದರು.  

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹಾಸಿಂಪೀರ ವಾಲಿಕಾರ ಮಾತನಾಡಿ ಹಿಂದಿನ ಕಾಲದಿಂದಲೂ ನಡೆಸಿಕೊಂಡು ಬರುತ್ತಿರುವ ನಾಟಕಗಳು ಗ್ರಾಮೀಣ ಭಾಗದಲ್ಲಿ ಇಂದಿಗೂ ಸಹ ತನ್ನ ಅಸ್ಥಿತ್ವ ಉಳಿಸಿಕೊಂಡು ಬಂದಿದೆ ಆದರೆ ರಂಗಭೂಮಿಯ ಕಲಾವೀದರ ಬದುಕಿಗಾಗಿ ಸರಕಾರಗಳ ಸುಕ್ತವಾದ ಕ್ರಮಕೈಗೊಂಡಿಲ್ಲಾ. ಇಂತಹ ಕಲಾವಿದರ ಕುಟುಂಬಗಳಿಗೆ ಸರಕಾರ ಸಾಹಾಯ ಹಸ್ತ ತೊರಬೇಕಿದೆ ನಾಟ್ಯರಂಗ ಇದು ಕುಡಾ ಜಾನಪದದಲ್ಲಿರುವ ಮತ್ತೊಂದು ಅಂಗವಾಗಿದೆ ಸಿನಿಮಾ ಕಲಾವಿದರು ರಂಗಭೂಮಿಯಿಂದಲೇ ಬೆಳೆದು ಹಣ ಕಿರ್ತಿ ಗಳಿಸಿದ್ದಾರೆ. ಒಬ್ಬ ನಿಜವಾದ ಕಲಾವಿದನನ್ನು ಕಾಣಬೇಕಾದರೆ ಅದು ನಾಟಕಗಳಿಂದ ಮಾತ್ರ ಸಾದ್ಯ ಎಂದರು. 

ಮಹಾದೇವ ಬಿರಾದಾರ. ಸ್ವಾಮಿಗೌಡ ಬಿರಾದಾರ. ಸಿದ್ರಾಮಯ್ಯ ಮೇತ್ರಿ. ಶಿವಪ್ಪ  ಹೊನಕಟ್ಟಿ. ಜಠ್ಠೆಪ್ಪ ಮೇತ್ರಿ ಮುಂತಾದವರು ವೇದಿಕೆಯ  ಮೇಲಿದ್ದರು. ವಿಶ್ವನಾಥ ಹೊನಕಟ್ಟಿ ರಾಹುಲ ಚವ್ವಾಣ. ಅಪ್ಪು ಇಂಡಿ. ಮುತಾದವರು ಉಪಸ್ಥಿತರಿದ್ದರು