ನಾಟಕ ಎಲ್ಲ ಕಲೆಗಳ ತವರು

ಧಾರವಾಡ 19: ನಾಟಕವು ಎಲ್ಲ ಕಲೆಗಳ ತವರು ಆಗಿದೆ. ನಾಟಕದ ಮುಖೇನ ಸಮಾಜದ ಸ್ವಾಸ್ಥ್ಯವನ್ನು ಕಾಯ್ದುಕೊಳ್ಳಲು ಸಾಧ್ಯ ಎಂದು ಮಕ್ಕಳ ಸಾಹಿತಿ ಕೆ.ಎಚ್.ನಾಯಕ ಹೇಳಿದರು.

 ಧಾರವಾಡ ರಂಗಾಯಣದ ರೆಪರ್ಟರಿ ಕಲಾವಿದರು ಅಭಿನಯಿಸಿದ ವಾರಾಂತ್ಯ ನಾಟಕವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

 ಧಾರವಾಡದ ರಂಗಾಯಣವು ಉತ್ತರ ಕರ್ನಾ ಟಕದ ಏಳು ಜಿಲ್ಲೆಗಳಲ್ಲಿ ರಂಗ ಕ್ರಾಂತಿಯನ್ನು ಉಂಟುಮಾಡುತ್ತದೆ. ಈ ಭಾಗದ ರಂಗ ಕಲಾವಿದರನ್ನು ಗುತರ್ಿಸಿ ಪ್ರೋತ್ಸಾಹಿಸುವ ಕಾರ್ಯ ನಿರಂತರವಾಗಿ ಸಾಗಲಿ ಎಂದು ಹಾರೈಸಿದರು.

ಅತಿಥಿಗಳಾಗಿ ಭಾಗವಹಿಸಿದ್ದ ಖ್ಯಾತ ಹಾಸ್ಯ ಕಲಾವಿದ ಮಲ್ಲಪ್ಪ ಹೊಂಗಲ ಮಾತನಾಡುತ್ತ ರಂಗಾಯಣದಲ್ಲಿ ಪ್ರತಿ ಶನಿವಾರ ನಾಟಕವನ್ನು ನೀಡಿ ಧಾರವಾಡ ರಂಗಾಸಕ್ತರಿಗೆ ಮತ್ತು ವಿಶೇಷವಾಗಿ ಮಕ್ಕಳಿಗೆ ರಂಗಾಸಕ್ತಿಯನ್ನು ಬೆಳೆಸುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ. ಮಕ್ಕಳಲ್ಲಿ ಇತ್ತೀಚೆಗೆ ಮೊಬೈಲ ಬಳಕೆ ಹೆಚ್ಚಾಗುತ್ತಿದ್ದು ಅವುಗಳಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ನಾಟಕದ ಮುಖಾಂತರ ತಿಳಿಸಿ ಕೊಡುವ ಪ್ರಯತ್ನ ನಡೆಯಲಿ ಎಂದರು.

ಅಧ್ಯಕ್ಷತೆ ವಹಿಸಿದ್ದ ಮಹಾದೇವ ದೊಡಮನಿ ತಮ್ಮ ಅಧ್ಯಕ್ಷೀಯ ಮಾತುಗಳನಾಡುತ್ತ ಧಾರವಾಡ ರಂಗಾಯಣಕ್ಕೆ ಹೊಸ ನಿರ್ದೇ ಶಕರಾಗಿ ರಮೇಶ ಪರವಿನಾಯ್ಕರ ಅವರು ಬಂದಿದ್ದು ಈ ರಂಗಾಯಣದ ಭಾಗ್ಯ ಎಂದೇ ಹೇಳಬೇಕು. ಅವರು ತರುಣ, ಉತ್ಸಾಹಿ ಕಲಾವಿದರಷ್ಟೇ ಅಲ್ಲ ಒಳ್ಳೆಯ ಸಂಘಟನಾಕಾರರು ಅವರಿಂದ ಧಾರವಾಡ ರಂಗಾಯಣಕ್ಕೆ ಶಾಶ್ವತವಾದ ನೆಲೆ ಸಿಗುತ್ತದೆ ಎಂಬ ನಂಬಿಕೆಯಿದೆ. ಆ ದಿಶೆಯಲ್ಲಿ ಅವರು ಸಾಧಿಸಲಿ ಅವರ ಜೊತೆಗೆ ಎಲ್ಲ ಹಿರಿಯ ರಂಗಾಸಾಕ್ತರು ಇದ್ದಾರೆ ಎಂದು ಹೇಳಿದರು.  

ರಂಗಾಯಣದ ಕಲಾವಿದ ಮಹಾತೇಂಶ ಇವರು ಸ್ವಾಗತ ಹಾಗೂ ವಂದಣಾರ್ಪಣೆ ಮಾಡಿದರು. ತದನಂತರ  ರೆಪರ್ಟರಿ ಕಲಾವಿದರಿಂದ "ಅಣ್ಣಾ ಸಾಹೇಬ" ನಾಟಕ ಪ್ರದರ್ಶನಗೊಂಡಿತು.