ನಾಟಕ ಬದುಕಿನ ಮೌಲ್ಯಗಳ ವಿಶಿಷ್ಟ ಕಲೆ

ಲೋಕದರ್ಶನವರದಿ

ಗುಳೇದಗುಡ್ಡ: ನಮ್ಮ ದೇಶದ ಇತಿಹಾಸದಲ್ಲಿ ರಂಗ ಪರಂಪರೆಗೆ ಇತಿಹಾಸವೇ ಇದೆ. ನಮ್ಮ ಹಿರಿಯರು ಮಾನವೀಯ ಮೌಲ್ಯಗಳನ್ನು ಬೆಳೆಸಲು ನಾಟಕ ಪ್ರಕಾರವನ್ನು ಹುಟ್ಟು ಹಾಕಿ ಅದೆ ಮುಖಾಂತರ ಜನರಿಗೆ ಕಲಾತ್ಮಕ ಪರಿಚಯದ ಜೊತೆಗೆ  ನಮ್ಮ ಬದುಕಿನ ಒಳ-ಹೊರಗುಗಳನ್ನು ತೆರೆದಿಟ್ಟು, ನಮ್ಮನ್ನು ಸರಿದಾರಿಗೆ ತರುವಂತೆ ಮಾಡಿದ ವಿಶಿಷ್ಟ ಕಲೆ ಎಂದು ಎಂದು ಜಗದ್ಗುರು ಗುರುಸಿದ್ದೇಶ್ವರ ಬೃಹನ್ಮಠದ ಶ್ರೀ ಜಗದ್ಗುರು ಬಸವರಾಜ ಪಟ್ಟದಾರ್ಯ ಶ್ರೀಗಳು ಹೇಳಿದರು. 

      ಅವರು ಮಂಗಳವಾರ ರಾತ್ರಿ ಇಲ್ಲಿನ ಸಂಗಮೇಶ್ವರ ನಾಟ್ಯ ಸಂಘ ತಿಪ್ಪಾಪೇಟೆದ ಬಸವೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಮಧುರಖಂಡಿಯ ಮಲ್ಲಿಕಾಜರ್ುನ ನಾಟ್ಯ ಸಂಘದ ವತಿಯಿಂದ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ನಾಟಕ ಪ್ರದರ್ಶನ ಉದ್ಘಾಟಿಸಿ ಮಾತನಾಡಿ, ಉತ್ತಮ ನಾಟಕ ಸಂಸ್ಕೃತಿ ಇಂದು ನಶಿಸಿ ಹೋಗುತ್ತಿದೆ. 

    ಯುವ ಪೀಳಿಗೆ ನಾಟಕ ಕಲೆಯನ್ನು ಕೇವಲ ಮನರಂಜನೆಗೆ ಬಳಸುತ್ತಿದ್ದಾರೆ. ಇದರಿಂದ ಮೌಲ್ಯಗಳು ಅರ್ಥ ಕಳೆದುಕೊಳ್ಳುತ್ತಿವೆ. ಪೌರಾಣಿಕ,ಧಾನರ್ಿಕ ನಾಟಕಗಳ ಪ್ರದರ್ಶನ ಕಡಿಮೆಯಾಗುತ್ತಿದೆ. ಯುವಕರು ಅಂತಹ ನಾಟಕ ಸಂಸ್ಕೃತಿಯಿಂದ ದೂರ ಸರಿಯುತ್ತಿದ್ದಾರೆ. 

     ಗುಳೇದಗುಡ್ಡ ನಾಟಕ ಕಲೆಯ ಪರಂಪರೆಗೆ ಹೆಸರಾದ ಊರು. ಇಲ್ಲಿರುವಷ್ಟು ನಾಟ್ಯ ಸಂಘಗಳ ಸಂಖ್ಯೆ 36. ಇಲ್ಲಿಯ ಜಾತ್ರೆ, ಉತ್ಸವಗಳ ಸಂಖ್ಯೆ  ಬೇರೆಲ್ಲೂ ಕಾಣಲು ಸಿಗುವುದಿಲ್ಲ. ಈ ಕಲೆ, ಸಂಪ್ರದಾಯಗಳನ್ನು ಉಳಿಸಿ ಬೆಳೆಸಬೇಕಾಗಿದೆ ಎಂದರು.  

  ಸಂಗಮೇಶ್ವರ ನಾಟ್ಯ ಸಂಘದ ಅಧ್ಯಕ್ಷ ಚಂದ್ರಶೇಖರ ತಿಪ್ಪಾಗೌಡ್ರ ಅಧ್ಯಕ್ಷತೆ ವಹಿಸಿದ್ದರು. ಪುರಸಭೆ ಸದಸ್ಯ ಉಮೇಶ ಹುನಗುಂದ, ನೇಕಾರ ಪತ್ತಿನ ಸಹಕಾರಿ ಸಂಘದ ಗುಳೇದಗುಡ್ಡ ಶಾಖೆಯ ಸಲಹಾ ಸಮಿತಿ ಅಧ್ಯಕ್ಷ ಸಿ.ಎಂ.ಚಿಂದಿ, ಆನಂದ ತಿಪ್ಪಾ, ಶಿವಾನಂದ ಮಳ್ಳಿಮಠ, ಮಲ್ಲಿಕಾಜರ್ುನ ನಾಟ್ಯ ಸಂಘದ ಲಕ್ಷ್ಮಣ ದೇಸಾಯಿಹಟ್ಟಿ, ಮಂಜುನಾಥ ತಿಪ್ಪಾ, ಸುರೇಶ ತಿಪ್ಪಾ, ಶೇಖರಪ್ಪ ಅರುಟಗಿ, ಚನಬಸಪ್ಪ ಮಾಮಣ್ಣಿ, ಮಲ್ಲಿಕಾಜರ್ುನ ಕೆಲೂಡಿ, ಸಂತೋಷ ತಿಪ್ಪಾ, ವಿಶ್ವನಾಥ ತಿಪ್ಪಾ, ಅಶೋಕ ರೋಜಿ, ವೀರಬಸಪ್ಪ ತಿಪ್ಪಾ, ಈರಣ್ಣ ತಿಪ್ಪಾ ಮತ್ತಿತರರು ಇದ್ದರು.

ನಂತರ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಭಕ್ತಿ ಪ್ರಧಾನ ನಾಟಕ ಪ್ರದರ್ಶನ ನಡೆಯಿತು. ಶ್ರೀಕಾಂತ ಹುನಗುಂದ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಲ್ಲಿಕಾಜರ್ುನ ರಾಜನಾಳ ನಿರೂಪಿಸಿ, ವಂದಿಸಿದರು.