ಬಳ್ಳಾರಿ. 06: ನಗರದಲ್ಲಿ ಡಾ|| ಬಾಬು ಜಗಜೀವನ್ರಾಮ್ ಉದ್ಯಾನವನದಲ್ಲಿ 9 ಅಡಿ ಎತ್ತರದ ಕಂಚಿನ ಪುತ್ಧಳಿ ಅನಾವರಣಗೊಳಿಸಬೇಕೆಂದು ರಾಜ್ಯ ಡಾ||ಬಾಬು ಜಗಜೀವನ್ರಾಮ್ ಯುವ ಜನ ಜಾಗೃತಿ ವೇದಿಕೆ ಜಿಲ್ಲಾಡಳಿತಕ್ಕೆ ಒತ್ತಾಯಿಸಿದೆ. ಅವರು ಉದ್ಯಾನವನದಲ್ಲಿ ಡಾ|| ಬಾಬು ಜಗಜೀವನ್ರಾಮ್ ಭಾವಚಿತ್ರಕ್ಕೆ 32ನೇ ಪುಣ್ಯಸ್ಮರಣೆ ಅಂಗವಾಗಿ ಪುಷ್ಪ ಸಲ್ಲಿಸಿದ ವೇದಿಕೆಯ ರಾಜ್ಯಾಧ್ಯಕ್ಷ ಶ್ರೀನಿವಾಸ್ ಕಚರ್ೆಡು ಮತ್ತಿತರರ ಬೆಂಬಲಿಗರು ಉದ್ಯಾನವನಕ್ಕೆ ಕಾವಲುಗಾರನ ನೇಮಕ ಮಾಡಬೇಕು. ಹಾಗೆಯೇ ಬೊರ್ವೆಲ್ ಕೊರೆಸಿ ಗಿಡ-ಮರ ಹುಲ್ಲಿನ ಹಾಸಿಗೆಗೆ ನೀರು ಬಿಡಲು ಡಿ ಗೃಪ್ ನೌಕರರನ್ನು ನೇಮಿಸಿ ಉದ್ಯಾನವನದ ಸ್ವಚ್ಚತೆಗೆ ಆದ್ಯೆತೆ ನೀಡಬೇಕು. ಡಾ||ಬಾಬು ಜಗಜೀವನ್ರಾಮ್ ಅವರ ಭವನವನ್ನು ಶೀಘ್ರವಾಗಿ ಪೂರ್ಣಗೊಳಿಸಿ ಬಡಜನರಿಗೆ ವಿವಿಧ ಕಾರ್ಯಕ್ರಮಗಳನ್ನು ಮಾಡಲು ಅವಶ್ಯಕತೆ ಕಲ್ಪಿಸಿ ಕೊಡಬೇಕೆಂದು ರಾಜ್ಯಾಧ್ಯಕ್ಷ ಶ್ರೀನಿವಾಸ್ ಕಚರ್ೆಡು, ಕಾರ್ಯದಶರ್ಿ ಅರುಣಾಚಲಂ, ಜಿಲ್ಲಾಧ್ಯಕ್ಷ ಜೆ.ಸುಂಕಣ್ಣ, ಪಕಿರಯ್ಯ, ಹೆಚ್.ರಂಗಸ್ವಾಮಿ, ತಾಲೂಕು ಅಧ್ಯಕ್ಷ ವಿ.ಕೆ.ನಿಂಗಪ್ಪ, ನಾಗರಾಜು, ಜನಾರ್ಧನ, ದೇವಣ್ಣ, ರಾಜು, ಶೇಕಣ್ಣ, ಚಂದ್ರಶೇಖರ್, ಮುರುಗನ್, ಸುರೇಶ್, ಹನುಮಯ್ಯ ಮತ್ತಿತರರು ಹಾಜರಿದ್ದು ಜಿಲ್ಲಾಡಳಿತಕ್ಕೆ ಮನವಿ ಪತ್ರ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರಕ್ಕೆ ಜಿ.ಪಂ ಸಿಇಓ ರಾಜೇಂದ್ರ ಮತ್ತು ಜಿಲ್ಲಾ ಪೋಲಿಸ್ ವರಿಷ್ಟಾಧಿಕಾರಿ ಅರುಣ್ ರಂಗರಾಜನ್ ಚಾಲನೆ ನೀಡಿದರು.