ಡಾ. ಸುಮತೀಂದ್ರ ನಾಡಿಗ ಇನ್ನಿಲ್ಲ


ಬೆಳಗಾವಿ 07: ಪ್ರಖ್ಯಾತ ಸಾಹಿತಿಗಳೂ, ಭಾರತೀಯ ರಾಷ್ಟ್ರೀಯ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷರಾಗಿದ್ದ ಡಾ. ಸುಮತೀಂದ್ರ ನಾಡಿಗ (83) ಅವರು ಮಂಗಳವಾರ ಬೆಳಿಗ್ಗೆ ಬೆಂಗಳೂರಿನ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ. 

ಡಾ. ಸುಮತೀಂದ್ರ ನಾಡಿಗ ಅವರನ್ನು ಬೆಂಗಳೂರಿನ ಆಸ್ಪತ್ರೆಯಲ್ಲಿ ಕಳೆದ ಮೂರು ದಿನಗಳ ಹಿಂದೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಮೃತರು ಪತ್ನಿ, ಮಗ, ಮಗಳನ್ನು ಅಗಲಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಕಳಸ ಗ್ರಾಮದವರಾದ ಅವರು ತಮ್ಮ 21ನೇ ವಯಸ್ಸಿನಲ್ಲಿ ಮೈಸೂರು ವಿಶ್ವ ವಿದ್ಯಾಲಯದಿಂದ ಇಂಗ್ಲೀಷನಲ್ಲಿ ಎಂ.ಎ ಪದವಿಯನ್ನು ಪಡೆದು ಬೆಳಗಾವಿಯ ಲಿಂಗರಾಜ ಕಾಲೇಜಿನಲ್ಲಿ ಇಂಗ್ಲೀಷ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು. ಡಾ. ನಾಡಿಗ ಅವರ ಕಾಲಕ್ಕೆ ಲಿಂಗರಾಜ ಕಾಲೇಜಿನ ಇಂಗ್ಲೀಷ ವಿಭಾಗದಲ್ಲಿ ಇದ್ದಾಗ ಪ್ರೊ. ರಾಮಾನುಜನ್. ಪ್ರೊ. ಆಚ್. ಪ್ರೊ ಶ್ರೀನಿವಾಸರಾವ್ ಹಾಗೂ ಪ್ರೊ. ವ್ಹಿ.ಡಿ.ಕುಲಕಣರ್ಿ ಇವರಂತಹ ಘಟಾನುಘಟಿಗಳು ಇದ್ದರು ಎನ್ನುವದನ್ನು ಇಂದಿಗೂ ನೆನೆಪಿಸಬಹುದಾಗಿದೆ.

ಪ್ರೊ. ನಾಡಿಗ ಗೋವಾ ರಾಜ್ಯ ಮಾಪ್ಸಾ ನಗರದಲ್ಲಿ ಸೆಂಟ್ ಜುನಿಯಸರ್್ ಕಾಲೇಜಿನಲ್ಲಿ ಇಂಗ್ಲೀಷ ವಿಭಾಗದ ಮುಖ್ಯಸ್ಥರಾಗಿ 1971ರಲ್ಲಿ ಅಮೇರಿಕಾದ ಫಿಲಿಡೆಲ್ಫಿಯಾದ ಚೆಂಪಲ್ ವಿ.ವಿಯಲ್ಲಿ ಪಿ.ಎಚ್.ಡಿ ವಿದ್ಯಾಥರ್ಿಯಾಗಿ ಸೇರಿಕೊಂಡರು 1985ರಲ್ಲಿ ಮಂಗಳೂರು ವಿವಿಯಲ್ಲಿ ಕನ್ನಡ ವಿಭಾಗದಲ್ಲಿ ಇಂಗ್ಲೀಷ್ ರೀಡರ್ ಆಗಿ ನಿವೃತ್ತಿ ಹೊಂದಿದರು. 1925ರಲ್ಲಿ ಬೆಂಗಳೂರ ವಿ.ವಿಯಲ್ಲಿ ಪಿ.ಎಚ್.ಡಿ ಪಡೆದರು. ಅರಿಸ್ಟಾಟದ ಕಾಂಗರಿ ವಿವಿಯ ಆಸರರಿ ಡಿ.ಲಿಟ್ ಪದವಿ ಅವರಿಗೆ ದೊರೆಯಿತು.

ನಿಮ್ಮ ಪ್ರೇಮಕುಮಾರಿಯ ಜಾತಕ, ಕಪ್ಪುದೇವತೆ, ಉದ್ಘಾಟನೆ, ಭಾವಲೋಕ, ದಾಂಪತ್ಯಗೀತೆ, ತಮಾಳು ಪದ್ಯಗಳು, ಕುಹ್ಯ ಗೀತೆ ಹಾಗೂ ನಟರಾಜ ಕಂಡ ಕಾಮನಬಿಲ್ಲು ಮುಂತಾದ ಕವನ ಸಂಗ್ರಹಗಳನ್ನು ಡಾ. ನಾಡಿಗರು ರಚಿಸಿದ್ದಾರೆ. ವಿಮಶರ್ೆಯ ವಿಭಾಗದಲ್ಲಿ ಅವರ ಕಾಣಿಕೆ ದೊಡ್ಡದು, ಅಡಿಸರಿ ಕಾವ್ಯ, ಬೇಂದ್ರೆ ಕಾವ್ಯದ ವಿಭಿನ್ನ ಸೆಲೆಗಳು, ವಿಮಶರ್ೆಯ ದಾರಿ, ಕಾವ್ಯವೇಂದರೇನು, ಹಿಂಗೊಂದು ಸಾಹಿತ್ಯ ಚರಿತ್ರೆ, ಮರೆಯಾದ ಅವರ ಕೃತಿಗಳು ಪಂಡಿತರ ಪ್ರಶಂಸೆ ಗಳಿಸಿವೆ. ಅಲ್ಲದೆ ಶಿಸು ಸಾಹಿತ್ಯ, ಸಣ್ಣ ಕತೆಗಳು, ಬಂಗಾಳಿಯಿಂದ ಕನ್ನಡಕ್ಕೆ ಹಾಗೂ ಕನ್ನಡದಿಂದ ಇಂಗ್ಲೀಷಗೆ ಅನೇಕ ಅನುವಾದಗಳನ್ನು ಮಾಡಿದ್ದಾರೆ.

ರಾಜ್ಯ ಸಾಹಿತ್ಯ ಅಕೆಡೆಮಿ, ದಿನಕರ ಪ್ರತಿಷ್ಠಾನ ಪ್ರಶಸ್ತಿ, ರಾಜ್ಸೋತ್ಸವ ಪ್ರಶಸ್ತಿ ಮೊದಲಾದವು ಡಾ. ನಾಡಿಗ ಅವರಿಗೆ ಲಭಿಸಿವೆ. ಕಲ್ಕತ್ತಾದ ಜಾಧವಪುರ ವಿಶ್ವವಿದ್ಯಾಲಯ ಹಾಗೂ ವಿಶ್ವಭಾರತಿ ವಿ.ವಿ ಶಾಂತಿನಿಕೇತನಗಳಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ ಕಾರ್ಯ ಮಾಡಿದ್ದರು.