ಬೆಳಗಾವಿ 11
: ಡಾ. ಸಿದ್ದಯ್ಯ ಪುರಾಣಿಕ ಅವರದ್ದು ಅಪೂರೂಪದ ವ್ಯಕ್ತಿತ್ವ. ಶರಣ
ಸಾಹಿತ್ಯ ಕುರಿತು ವಿಶೇಷ ಅಭ್ಯಾಸ ಮಾಡಿದ ಅವರು 'ಶರಣ ಚರಿತಾಮೃತ'
ಎಂಬ ಮಹತ್ತರ ಕೃತಿಯನ್ನು ನೀಡಿದ್ದಾರೆ. ಇವರ
ವಚನಗಳು ಸಾಮಾಜಿಕ,
ಕೌಟುಂಬಿಕ ಜೀವನದಲ್ಲಿ ಬರುವ ಹಲವಾರು ಸಮಸ್ಯೆಗಳಿಗೆ
ಪರಿಹಾರವಾಗಿದ್ದವು. ಏನಾದರೂ ಆಗು ಮೊದಲು
ಮಾನವನಾಗು ಎಂಬ ಇವರ ನುಡಿ
ವಿಶ್ವೇಶ್ವರಯ್ಯ ತಾಂತ್ರಕ ವಿಶ್ವವಿದ್ಯಾಲಯದ
ಘೋಷವಾಕ್ಯವಾಗಿರುವುದು ಹೆಮ್ಮೆಯ ವಿಷಯವಾಗಿದೆ. ಡಾ. ಪುರಾಣಿಕರದು ಮೇರು
ವ್ಯಕ್ತಿತ್ವ. ಸಹೃದಯ ಸಂಪನ್ನರು ಎಂದು ನಿವೃತ್ತ ಪ್ರಾಂಶುಪಾಲರಾದ
ಡಾ. ಬಸವರಾಜ ಜಗಜಂಪಿ ಅವರು ಹೇಳಿದರು.
ಜಾಗತಿಕ
ಲಿಂಗಾಯಿತ ಮಹಾಸಭೆ(ರಿ) ಜಿಲ್ಲಾ ಘಟಕ
ಹಾಗೂ ಬೆಳಗಾವಿಯ ರಾಷ್ಟ್ರೀಯ ಬಸವಸೇನಾ ಜಿಲ್ಲಾ ಘಟಕ ಸಂಯುಕ್ತ ಆಶ್ರಯದಲ್ಲಿ
ಅಮವಾಸ್ಯೆ ಅನುಭಾವ ಸತ್ಸಂಗ ಕಾರ್ಯಕ್ರಮದಲ್ಲಿ ಡಾ.
ಸಿದ್ದಯ ಪುರಾಣಿಕರ ಶತಮಾನೋತ್ಸವ ವಿಶೇಷ ಉಪನ್ಯಾಸ ಹಾಗೂ ಡಾ. ಆರ್.
ಎಸ್. ಚಾಪಗಾವಿ
ವಿರಚಿತ ಅಲಕ್ಷಿತ ಶರಣರು ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ 'ಡಾ.ಸಿದ್ದಯ್ಯ
ಪುರಾಣಿಕರ ವಚನಗಳಲ್ಲಿ ಸಂದೇಶ' ವಿಷಯ ಕುರಿತಂತೆ ವಿಶೇಷ
ಉಪನ್ಯಾಸ ನೀಡಿದ ಡಾ. ಬಸವರಾಜ ಜಗಜಂಪಿಯವರು
ಮೇಲಿನಂತೆ ಅಭಿಪ್ರಾಯ ಪಟ್ಟರು.
ಸಾನಿಧ್ಯ ವಹಿಸಿದ್ದ ನಾಗನೂರು
ಶ್ರೀ ರದ್ರಾಕ್ಷಿ ಮಠದ ಡಾ.
ಸಿದ್ಧರಾಮ ಮಹಾಸ್ವಾಮಿಗಳು ತಮ್ಮ
ಆಶಿರ್ವಚನದಲ್ಲಿ ಅತಿ
ಉನ್ನತ ಹದ್ದೆಯಲ್ಲಿದ್ದ ಡಾ.
ಸಿದ್ದಯ್ಯ ಪುರಾಣಿರು ಅತ್ಯಂತ
ಸರಳ ವ್ಯಕ್ತಿತ್ವ ಹೊಂದಿದವರಾಗಿದ್ದರು. ಶರಣ ಸಾಹಿತ್ಯಕ್ಕೆ
ಅವರ ಕೊಡುಗೆ ಅಪಾರ ಎಂದು ಹೇಳಿದರು.
ಅಕ್ಕಮಹಾದೇವಿ ಅರಳಿ ಸ್ವಾಗತಿಸಿದರು. ಶಂಕರ
ಗುಡುಸ ಪ್ರಸ್ತಾವಿಕ ನುಡಿಗಳನ್ನಾಡಿದರು., ಶ್ರೀದೇವಿ ನರಗುಂದ ನಿರೂಪಿಸಿದರು. ಶ್ರೀಮತಿ ಜ್ಯೋತಿ ಬದಾಮಿ ನಿರೂಪಿಸಿದರು.
ಈ ಸಂದರ್ಭದಲ್ಲಿ ಬಸವರಾಜ ಶೆಟ್ಟರ್, ಬಸವರಾಜ ಭಾಗೋಜಿ, ಎಸ್. ಜಿ. ಸಿದ್ನಾಳ,
ಎ. ಆರ್. ಬೆಂಡಿಗೇರಿ, ಆನಂದ
ಕಿಕರ್ಿ, ಸದಾಶಿವ ಬಸೆಟ್ಟಿ, ದೀಪಾ ತೋಲಗಿ, ಸುನಂದ
ಎಮ್ಮಿ, ದಾಕ್ಷಾಯಿಣಿ
ಪೂಜೇರಿ, ವೀಣಾ
ನಾಗಮೂತಿ, ಜಯಶ್ರೀ ನಸ್ಪೆ, ಸುಲೋಚನಾ
ವಸ್ತ್ರದ, ಜಯಶ್ರೀ
ಚೌಲಗಿ, ವಿದ್ಯಾ ಕಡ್ಲೆಪ್ಪನವರ, ಮಂಗಲಾ ಕಾಕತಿಕರ, ಪ್ರೇಮಾ ಚಿನಿವಾರ, ಸುವರ್ಣ ಗುಡುಸ, ಅನ್ನಪೂಣರ್ಾ ಮಳಗಲಿ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.