ಸಮಾಜಕ್ಕೆ ಡಾ.ಫ.ಗು.ಹಳಕಟ್ಟಿ ಕೊಡುಗೆ ದೊಡ್ಡದು

ಲೋಕದರ್ಶನ ವರದಿ

ವಿಜಯಪುರ 4: ಹಳಕಟ್ಟಿಯವರನ್ನು ನಾವು ಮರೆತರೆ ನಮ್ಮಂಥ ಕೃತಘ್ನರು ಬೇರೆ ಯಾರು ಅಲ್ಲ ಎಂದು ಗದುಗಿನ ಡಾ.ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಹೇಳಿದರು.

  ಬಿ.ಎಲ್.ಡಿ.ಇ ಸಂಸ್ಥೆಯ ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ಭವನಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಸ್ವಾತಂತ್ರ್ಯ ಪೂರ್ವದಲ್ಲಿ ವಕೀಲರಾಗಿದ್ದ ಹಳಕಟ್ಟಿಯವರು ಬ್ರಿಟಿಷ ಆಡಳಿತದಲ್ಲಿಯೇ ಸುಪ್ರಿಂ ಕೊಟರ್್ ನ್ಯಾಯಮೂತರ್ಿಗಳಾಗುತ್ತಿದ್ದರು. ಆದರೆ ಅದೆಲ್ಲವನ್ನು ತ್ಯಾಗ ಮಾಡಿ ಬರಿಗೈ ಫಕೀರನಂತೆ ವಚನ ಸಾಹಿತ್ಯ ಸಂಗ್ರಹ, ಅಧ್ಯಯನ, ಪ್ರಕಟಣೆಗೆ ತಮ್ಮ ಇಡೀ ಜೀವನವನ್ನು ಮೀಸಲಿಟ್ಟು, ಮುಂದಿನ ಸುಂದರ ಸಮಾಜಕ್ಕೆ ಭದ್ರ ಬುನಾದಿ ಹಾಕಿದ್ದಾರೆ ಎಂದರು.

  ನಾನು ವಿಜಯಪುರಕ್ಕೆ ಬಂದಾಗಲೆಲ್ಲ ಹಳಕಟ್ಟಿ ಭವನಕ್ಕೆ ಭೇಟಿ ನೀಡುತ್ತೇನೆ. ಇಲ್ಲಿನ ಕಾರ್ಯ ನನಗೆ ಅಚ್ಚುಮೆಚ್ಚು. ಹಳಕಟ್ಟಿಯವರು ಇಡೀ ಸಮಾಜಕ್ಕೆ ಮಾಡಿರುವ ಋಣವನ್ನು ನಮಗೆ ತೀರಿಸಲಾಗದು. ಅವರನ್ನು ನಾವು ಸದಾ ಸ್ಮರಿಸಬೇಕು. ನಮಗೆ ನಮ್ಮತನವನ್ನು ಕಲಿಸಿಕೊಟ್ಟವರು ಹಳಕಟ್ಟಿಯವರು. ಅವರನ್ನು ನಮ್ಮ ಸಮಾಜ ಮರೆತರೆ ಇದಕ್ಕಿಂತ ಕೃತಘ್ನ ಕಾರ್ಯ ಇಲ್ಲ ಎಂದು ಶ್ರೀಗಳ ಹೇಳಿದರು.

  ತೋಂಟದಾರ್ಯ ಅನುಭವ ಮಂಟಪದ ಎಂ.ಎಸ್.ರುದ್ರಗೌಡರ, ಸಂಜಯ ಪಾಟೀಲ ಕನಮಡಿ, ಎನ್.ಕೆ.ಕುಂಬಾರ, ಗಡಗಿ ಸಾಹುಕಾರ ಉಪಸ್ಥಿತರಿದ್ದರು. ಹಳಕಟ್ಟಿ ಸಂಶೋಧನಾ ಕೇಂದ್ರ ವತಿಯಿಂದ ಡಾ.ಎಂ.ಎಸ್.ಮದಭಾವಿ, ಡಾ.ಮಹಾಂತೇಶ ಬಿರಾದಾರ, ಡಾ.ವಿ.ಡಿ.ಐಹೊಳ್ಳಿ, ಎ.ಬಿ.ಬೂದಿಹಾಳ ಶ್ರೀಗಳನ್ನು ಈ ಸಮದರ್ಭದಲ್ಲಿ ಸನ್ಮಾನಿಸಿದರು.