ಲೋಕದರ್ಶನವರದಿ
ರಾಣೇಬೆನ್ನೂರು ೧೫: ಕೊಲ್ಕತ್ತದ ಎನ್ ಆರ್ ಎಸ್ ವೈದ್ಯಕೀಯ ಸಂಸ್ಥೆಯ ಕಿರಿಯ ವೈದ್ಯ ಡಾ||ಪರಿಭಾ ಮುಖಜರ್ಿ ಮೇಲೆ ರೋಗಿಯ ಸಂಭಂದಿಕರು ನಡೆಸಿದ ಮಾರಣಾಂತಿಕ ಹಲ್ಲೆಯನ್ನು ಖಂಡಿಸಿ ಸ್ಥಳೀಯ ಭಾರತೀಯ ವೈದ್ಯಕೀಯ ಸಂಘದ ಪದಾಧಿಕಾರಿಗಳು ಮತ್ತು ಶುಕ್ರವಾರದಂದು ವೈದ್ಯರು ಕಪ್ಪು ಬಟ್ಟೆ ಧರಿಸುವುದರ ಜೊತೆಗೆ ಪ್ರತಿಭಟನೆ ನಡೆಸಿ ಶಿರಸ್ತೇದಾರ ಎಂಎನ್ ಹಾದಿಮನಿಯವರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು.
ಸಂಘದ ಅಧ್ಯಕ್ಷ ಡಾ.ನಾಗರಾಜ ದೊಡ್ಮನಿ ಮಾತನಾಡಿ ವೈದ್ಯರ ಮೇಲೆ ನಡೆದ ಘಟನೆಯನ್ನು ವೈದ್ಯಕೀಯ ಸಂಘವು ಪ್ರಭಲವಾಗಿ ಖಂಡಿಸುತ್ತದೆ, ಘಟನೆಯ ಕುರಿತು ಕೂಲಂಕುಷವಾಗಿ ತನಿಖೆ ಮಾಡಬೇಕು. ತಪ್ಪಿತಸ್ಥ ಅಪರಾಧಿಗಳನ್ನು ತ್ವರಿತವಾಗಿ ಬಂಧಿಸಿ ಕಠಿಣವಾದ ಶಿಕ್ಷೆಯನ್ನು ವಿಧಿಸಬೇಕು. ಹಲ್ಲೆಗೊಳಗಾದ ವೈದ್ಯರಿಗೆ ಹಾಗೂ ಕಿರಿಯ ವೈದ್ಯರಿಗೂ ನೈತಿಕ ಬೆಂಬಲವನ್ನು ಸಂಸ್ಥೆಯು ಸೂಚಿಸುತ್ತದೆ ಎಂದರು.
ಈ ಘಟನೆಯನ್ನು ಖಂಡಿಸಿ ಭಾರತೀಯ ವೈದ್ಯಕೀಯ ಸಂಘದವರು ದೇಶಾದ್ಯಂತ ಇಂದು ಪ್ರತಿಭಟನೆ ನಡೆಸಿ ಸಂಭಂಧಿಸಿದವರಿಗೆ ಮನವಿ ಪತ್ರ ಅಪರ್ಿಸುವ ಕಾರ್ಯಕ್ರಮವು ನಡೆಯುತ್ತಲಿದೆ, ವೈದ್ಯರ ಮತ್ತು ವೈದ್ಯಕೀಯೇತರ ಸಿಬ್ಬಂದಿಗಳ ಮೇಲೆ ನೆಡೆಯುವ ಹಲ್ಲೆ ಮತ್ತಿತರ ಮಾರಣಾಂತಿಕ ಘಟನೆಗಳನ್ನು ತಡೆಗಟ್ಟಲು ಕೇಂದ್ರ ಹಾಗೂ ರಾಜ್ಯ ಸರಕಾರಗಳು ರಾಷ್ಟ್ರಮಟ್ಟದಲ್ಲಿ ಕಠಿಣವಾದ ಕಾನೂನನ್ನು ಜಾರಿಗೊಳಿಸಬೇಕು ಎಂದರು.
ರಾಜ್ಯದಲ್ಲಿ ಕಳೆದ 10 ವರ್ಷಗಳಿಂದ ಜಾರಿಯಲ್ಲಿರುವ 2009ರ ಕಾನೂನಿನ ಆಧಾರದಲ್ಲಿ ಇವರೆಗೂ ಯಾರೊಬ್ಬರ ಮೇಲೂ ಶಿಕ್ಷ ನೀಡಿಲ್ಲ. ಈ ಕಾನೂನನ್ನು ಇನ್ನಷ್ಟು ಗಟ್ಟಿಗೊಳಿಸಿ ಅಪರಾಧಿಗಳಿಗೆ ಜಾಮೀನು ಸಿಗದ ರೀತಿಯಲ್ಲಿ ಕ್ರಮ ಕೈಗೊಳ್ಳಬೇಕು.
ಕರ್ತವ್ಯನಿರತ ವೈದ್ಯರಿಗೆ ಮಾನಸಿಕ ಹಾಗೂ ದೈಹಿಕವಾಗಿ ಹಲ್ಲೆಯಾಗದಂತೆ ನೋಡಿಕೊಳ್ಳುವ ಗುರುತರವಾದ ಜವಾಬ್ದಾರಿ ಊಬಯ ಸರಕಾರಗಳ ಮೇಲೆ ಅವಲಂಭಿತವಾಗಿದೆ ಎಂದರು.
ಸಂಘದ ಕಾರ್ಯದಶರ್ಿ ಡಾ.ರವಿ ಕುಲಕಣರ್ಿ, ಡಾ.ಬಸವರಾಜ ಕೇಲಗಾರ, ಡಾ.ವಿದ್ಯಾ ವಾಸುದೇವಮೂತರ್ಿ, ಅಭಿನಂದನ ಸಾವಕಾರ, ಡಾ.ವಿದ್ಯಾ ಕೇಲಗಾರ, ಡಾ.ಪ್ರವೀಣ ಖನ್ನೂರ, ಡಾ. ಆರ್ಬಿ ಮುಡದೇವಣ್ಣನವರ, ಡಾ.ಶೈಲಶ್ರೀ ಖನ್ನೂರ, ಡಾ.ಚಂದ್ರಶೇಖರ ಕೇಲಗಾರ, ಡಾ.ವೀಣಾ ಗೀರೀಶ ಕೆಂಚಪ್ಪನವರ, ಡಾ. ಎಟಿ ಬೆನ್ನೂರ್, ಡಾ.ಹೇಮಾ ಪಾಟೀಲ ಡಾ.ಅನಿತಾ ಕೇಲಗಾರ, ಡಾ.ಶಿವಪ್ರಕಾಶ ತಂಡಿ, ಡಾ.ರಂಜನಾ ನಾಯಕ, ಡಾ.ಆನಂದ ಇಂಗಳಗೊಂದಿ, ಡಾ.ನಿರಂಜನ ಮಿಜರ್ಿ, ಡಾ.ಯಮುನಾ , ಡಾ.ವಿರುಪಾಕ್ಷಪ್ಪ, ಪ್ರಸನ್ನ ಸೇರಿದಂತೆ ಸಂಘದ ಪದಾಧಿಕಾರಿಗಳು ಮತ್ತಿತರ ವೈದ್ಯರು ಪ್ರತಿಭಟನೆಯಲ್ಲಿ ಇದ್ದರು.