ಡಾ.ಬಿ.ಆರ್ ಅಂಬೇಡ್ಕರ್ ಓದು ಕಾರ್ಯಕ್ರಮ

ಲೋಕದರ್ಶನ ವರದಿ

ಬೆಳಗಾವಿ 17: ಬೆಳಗಾವಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಖಾನಾಪುರ ಕೆಎಲ್ಇ ವಾಣಿಜ್ಯ ಮಹಾವಿದ್ಯಾಲಯ ಹಾಗೂ ಕಾಮಸಿನಕೊಪ್ಪ ಕರ್ನಾಟಕ ಗ್ರಾಮೀಣ ಅಭಿವೃದ್ಧಿ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ಖಾನಾಪುರ ಕೆಎಲ್ಇ ವಾಣಿಜ್ಯ ಮಹಾವಿದ್ಯಾಲಯದ ಸಭಾಭವನದಲ್ಲಿ ಸೋಮವಾರ ಭಾರತರತ್ನ ಡಾ.ಬಿ.ಆರ್ ಅಂಬೇಡ್ಕರ್ ಓದು ಕಾರ್ಯಕ್ರಮ 2019-20 ಅಂಗವಾಗಿ, ರಸಪ್ರಶ್ನೆ, ಪ್ರಬಂಧ, ಆಶುಭಾಷಣ,ಕವನ ವಾಚನ ಕಾಲೇಜು ವಿದ್ಯಾರ್ಥಿಗಳಿಗೆ ಸ್ಪರ್ಧೆ  ಏರ್ಪಡಿಸಲಾಗಿತ್ತು. ಖಾನಾಪುರ ಘಟಕದ ಕ.ಸಾ.ಪ.ಅಧ್ಯಕ್ಷ ವಿ.ವಿ.ಬಡಿಗೇರ ಉದ್ಘಾಟಿಸಿ ಭಾರತ ರತ್ನ ಡಾ.ಬಾಬಾ ಸಾಹೇಬ ಅಂಬೇಡಕರ ಜೀವನ ಚರಿತ್ರೆ, ಅವರ ಸಾಧನೆ, ಸಂವಿಧಾನ ಕುರಿತು ವಿದ್ಯಾರ್ಥಿಗಳು ಓದಬೇಕು. ಅವರ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ಕೊಟ್ಟರು. ಖಾನಾಪುರ ಕೆಎಲ್ಇ ಮಹಾವಿದ್ಯಾಲಯ ದ ಪ್ರಿನ್ಸಿಪಾಲ್ ವಿಜಯ ಪೂಜಾರ ಅಧ್ಯಕ್ಷತೆ ವಹಿಸಿದ್ದರು. ಖಾನಾಪುರ ಪಿಡಿಒ ಹಾಸ್ಯ ಕಲಾವಿದ ಆನಂದ ಬಿಂಗೆ ಹಾಗೂ ಬೆಳಗಾವಿ ಯುವ ಸಾಹಿತಿ ಯುವರಂಗ ಬಸವರಾಜ ತಳವಾರ ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಕ್ಕೆ ಮಾರಹೋಗದೆ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಉಪನ್ಯಾಸ ನೀಡಿದರು. ಕಾಮಸಿನಕೊಪ್ಪದ ಮಂಜುನಾಥ ಹಣಬರ ಗೀತಗಾಯನದಲ್ಲಿ ಕ್ರಾಂತಿ ಗೀತೆಗಳನ್ನು ನಡೆಸಿಕೊಟ್ಟರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ಧೆಶಕಿ ವಿದ್ಯಾವತಿ ತಾವು ಬೆಳೆಯುವುದರ ಜೊತೆಗೆ ಇತರರನ್ನು ಬೆಳೆಸಬೇಕು. ಅಂಬೇಡಕರ ಜೀವನ ಸಾಧನೆಗಳನ್ನು ಮೈಗೂಡಿಸಿಕೊಳ್ಳಬೇಕು ಎಂದರು. 

ವಿವಿಧ ಸ್ಪರ್ಧೆಯಲ್ಲಿಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. 

ಕ.ಗ್ರಾ.ಅ.ಸಂಘದ ಅಧ್ಯಕ್ಷ ನಾಗೇಂದ್ರ ಚೌಗುಲಾ ಸ್ವಾಗತಿಸಿದರು.ವಿದ್ಯಾ ಕಾಮೋಜಿ ನಿರೂಪಿಸಿದರು. ಪೂನಂ ಅವರು ವಂದಿಸಿದರು.