ಜನರ ಆರೋಗ್ಯ ದೃಷ್ಟಿಕೋನ ಇಟ್ಟು ಸೇವಾ ಭಾವ ವೃತ್ತಿಯಿಂದ ತಮ್ಮ ವೈದ್ಯಕೀಯ ರಂಗವನ್ನು ಸಮಾಜದ ಕೊಡುಗೆ ನೀಡಬೇಕೆಂದು: ಡಾಕ್ಟರ್ ವಿಠ್ಠಲ್ ಶಿಂಧೆ ಹೇಳಿದರು
ಮಾಂಜರಿ 25: ಇಂದು ವೈದೀಕೀಯ ರಂಗದಲ್ಲಿ ಹಲವಾರು ಸಂಶೋಧನಾ ಮತ್ತು ಆಧುನಿಕ ತಂತ್ರಜ್ಞಾನ ಜೊತೆಗೆ ಆರೋಗ್ಯಕರ ಹೆಚ್ಚಿನ ನಿಗಾ ವಹಿಸಲಾಗಿದೆ ಆದರೂ ಕೂಡ ಇನ್ನುವರೆಗೆ ಗ್ರಾಮೀಣ ಭಾಗದ ಜನರಿಗೆ ಯೋಗ್ಯವಾದ ಆರೋಗ್ಯ ಸೌಲಭ್ಯಗಳು ಸಿಗುತ್ತಿಲ್ಲ ಆದ್ದರಿಂದ ವೈದಿಕೆಯ ರಂಗದಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯರು ಗ್ರಾಮೀಣ ಭಾಗದ ಜನರ ಆರೋಗ್ಯ ದೃಷ್ಟಿಕೋನ ಇಟ್ಟು ಸೇವಾ ಭಾವ ವೃತ್ತಿಯಿಂದ ತಮ್ಮ ವೈದ್ಯಕೀಯ ರಂಗವನ್ನು ಸಮಾಜದ ಕೊಡುಗೆ ನೀಡಬೇಕೆಂದು ಬೆಳಗಾವ್ ಜಿಲ್ಲಾ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಗಳಾದ ಡಾಕ್ಟರ್ ವಿಠ್ಠಲ್ ಶಿಂಧೆ ಹೇಳಿದರು
ಅವರು ಶನಿವಾರರಂದು ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದ ಗೋಮ್ಮಟೇಶ್ ಶಿಕ್ಷಣ ಸಂಸ್ಥೆಯ ಮೊದಲನೆಯ ದಿನವಾದ ಗುಮ್ಮಟ್ ಉತ್ಸವದ ಅಂಗವಾಗಿ ಡಾ ಎನ್ ಎ ಮಗುದುನ್ ಆಯುರ್ವೇದಿಕ್ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರದ ಮನೆಯ ಬ್ಯಾಚಿನ ಬಿಎಎಂಎಸ್ ವಿದ್ಯಾರ್ಥಿಗಳ ಪದವಿದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡುತ್ತಿದ್ದರು ಈ ಸಮಾರಂಭದ ಅಧ್ಯಕ್ಷ್ಯಯನ್ನು ಸಂಸ್ಥೆಯ ಅಧ್ಯಕ್ಷರಾದ ಡಾ ಎನ್ ಎ ಮಗುದುನ್ವಹಿಸಿದ್ದರು ಅತಿಥಿಯಾಗಿ ಜಿಲ್ಲಾ ಆರೋಗ್ಯ ಅಧಿಕಾರಿಗಳಾದ ಡಾ. ವೈ ಎಸ್ ಗಡಾದ್ ಶಾಸಕ ಗಣೇಶ್ ಹುಕ್ಕೇರಿ ಬಿ ಎ ಪೂಜಾರಿ ಸುರೇಶ್ ಚೌಗುಲಾ ಬೆಳಗಾವಿಯ ಎಸ್ ಬಿ ಘಾಟಗೆ ಆಯುರ್ವೇದಿಕ್ ವೇದಿಕೆಯ ಮಹಾವಿದ್ಯಾಲಯದ ಪ್ರಾಚಾರ್ಯರ ಹಾಗೂ ಲಲಿತಾ ಮಗದುಮ್ ಹಾಜರಿದ್ದರು
ಈ ವೇಳೆ ನಿವೃತ್ ಪ್ರಾಚಾರ್ಯ ಬಿ.ಎ ಪೂಜಾರಿ ಮಾತನಾಡಿ ಇಂದು ಪದವಿ ಪಡೆದ ಎಲ್ಲ ವಿದ್ಯಾರ್ಥಿಗಳು ತಮ್ಮ ವೃತ್ತಿ ಭಾಂದವಕ್ಕೆ ಚುಕ್ಕಿ ಬರಬಾರದಂದ ಕೆಲಸ ಮಾಡಿ ಸಮಾಜದ ಕೆಟ್ಟ ಕಡೆಯ ಜನತೆಗೆ ತಮ್ಮ ಆರೋಗ್ಯ ಸೇವೆಯನ್ನು ಒದಗಿಸಿ ಸದೃಢ ಸಮಾಜ ನಿರ್ಮಾಣಕ್ಕಾಗಿ ಕೈಜೋಡಿಸಬೇಕೆಂದು ಅವರು ಸಲಹೆ ನೀಡಿದರು ಈ ವರ್ಷ ಪದವಿ ಪಡೆದ ಬಿಎ ಎಂಎಸ್ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಮತ್ತು ನಗದು ಬಹುಮಾನ ಮತ್ತು ವಿಶೇಷ ಬಹುಮಾನನ್ನು ಉಪಸ್ಥಿತ ಗಣ್ಯರಿಂದ ನೀಡಲಾಯಿತು ಈ ವೇಳೆ ಡಾ. ಎನ ಎ ಮುಗದುಮ ಲಲಿತಾ ಮಗದುಮ್ ಶಾಸಕ ಗಣೇಶ್ ಹುಕ್ಕೇರಿ ಹಾಗೂ ಇನ್ನಿತರರು ಮತ್ತು ವಿದ್ಯಾರ್ಥಿಗಳು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದ್ದರು ಸ್ವಾಗತ ಪ್ರಾಚಾರ್ಯರಾದ ಡಾಕ್ಟರ್ ಪ್ರಸನ್ನ ಸವನೂರ್ ಮಾಡಿ ರಾಮಗೌಡ ಪಾಟೀಲ್ ವಂದಿಸಿದರು