ಸಮತಾ ಸೈನಿಕ ದಳದ ರಾಜ್ಯ ಉಪಾಧ್ಯಕ್ಷರಾಗಿ ಡಾ.ವಿಶ್ವನಾಥ ಆಯ್ಕೆ

Dr. Vishwanath elected as State Vice President of Samata Sainik Dal

ಸಮತಾ ಸೈನಿಕ ದಳದ ರಾಜ್ಯ ಉಪಾಧ್ಯಕ್ಷರಾಗಿ ಡಾ.ವಿಶ್ವನಾಥ ಆಯ್ಕೆ

ಧಾರವಾಡ 03:   ಬಾಬಾಸಾಹೇಬ ಡಾ.ಬಿ.ಆರ್‌.ಅಂಬೇಡ್ಕರ ಅವರು 1926ರಲ್ಲಿ ಸ್ಥಾಪಿಸಿದ ರಾಷ್ಟ್ರೀಯ ಸಂಘಟನೆ ಸಮತಾ ಸೈನಿಕ ದಳದ ರಾಜ್ಯ ಉಪಾಧ್ಯಕ್ಷರಾಗಿ ಡಾ.ವಿಶ್ವನಾಥ ವೈ. ಚಿಂತಾಮಣಿ ಅವರನ್ನು ಆಯ್ಕೆ ಮಾಡಲಾಗಿದೆ. ಸಮತಾ ಸೈನಿಕ ದಳದ ರಾಷ್ಟ್ರೀಯ ಅಧ್ಯಕ್ಷರು ಸಮಾಜ ಭೂಷಣ   ಕಾಕಾಸಾಹೇಬ ಖಂಬಾಳಕರ ಅವರ ಆದೇಶದ ಮೇರೆಗೆ ಕರ್ನಾಟಕ ರಾಜ್ಯಾಧ್ಯಕ್ಷರು   ಎಸ್‌.ಜಿ. ಸಣ್ಣಕ್ಕಿ ಅವರು ಡಾ.ವಿಶ್ವನಾಥ ಚಿಂತಾಮಣಿ ಅವರ ಸಮಾಜಪರ ಕಾರ್ಯಗಳನ್ನು ಪರಿಗಣಿಸಿ ಈ ಆದೇಶ ಪತ್ರವನ್ನು 3 ವರ್ಷದ ಅವಧಿಗೆ ನೀಡಿ ಆದೇಶಿಸಿದ್ದಾರೆ. ಡಾ.ವಿಶ್ವನಾಥ ವೈ. ಚಿಂತಾಮಣಿ ಅವರು ಪ್ರಸ್ತುತ ಕರ್ನಾಟಕ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ಸಹಾಯಕ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದು, ಸಮತಾ ಸೈನಿಕ ದಳದ ಸಂಘಟನೆ ಹಾಗೂ ಶೋಷಿತ, ಹಿಂದೂಳಿದ ವರ್ಗದವರ ಅಭಿವೃದ್ಧಿಪರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳಲಿದ್ದಾರೆ ಎಂದು ತಿಳಿಸಲಾಗಿದೆ.