ಕರ್ಮಭೂಮಿ ಕಾಗಿನೆಲೆ ಗ್ರಾಮಕ್ಕೆ ಡಾ.ವಿರೇಂದ್ರ ಹೆಗ್ಗಡೆ ಭೇಟಿ

ಬ್ಯಾಡಗಿ೨೫: ಧರ್ಮಸ್ಥಳದ ಧರ್ಮಧಿಕಾರಿ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಮುಖ್ಯಸ್ಥ ಡಾ.ವಿರೇಂದ್ರ ಹೆಗ್ಗಡೆ ಇವರು ಜೂ.27 ರಂದು  ತಾಲೂಕಿನ ಕನಕದಾಸರ ಕರ್ಮಭೂಮಿ ಕಾಗಿನೆಲೆ ಗ್ರಾಮಕ್ಕೆ ಭೇಟಿ ನೀಡಲಿದ್ದಾರೆ.

   ಕನಕಭವನದಲ್ಲಿ ಬೆಳಿಗ್ಗೆ 9 ಗಂಟೆಗೆ ಆರಂಭವಾಗಲಿರುವ ಕಾರ್ಯಕ್ರಮದಲ್ಲಿ ಧಾರವಾಡ ಪ್ರಾದೇಶಿಕ ವ್ಯಾಪ್ತಿಯಲ್ಲಿ ಪ್ರಸ್ತುತ  ಆರ್ಥಿಕ ವರ್ಷದಲ್ಲಿ ರಚಿಸಲಾದ 5555 ಸ್ವ ಸಹಾಯ ಸಂಘಗಳ ಉದ್ಘಾಟಿಸಲಿದ್ದಾರೆ. ಅಲ್ಲದೇ ವಿಶೇಷಚೇತನ ಫಲಾನುಭವಿಗಳಿಗೆ ವಿವಿಧ ಸಲಕರಣೆಗಳ ವಿತರಣೆ ಹಾಗೂ ಪೌರಕಾರ್ಮಿಕರಿಗೆ  ಸನ್ಮಾನ ಕಾರ್ಯಕ್ರಮವೂ ಕೂಡ ಇದೇ ಸಂದರ್ಭದಲ್ಲಿ ನೆರವೇರಲಿದೆ. 

 ಹಾವೇರಿ ಹೊಸಮಠದ ಶಾಂತಲಿಂಗಶ್ರೀಳು ದಿವ್ಯಸಾನಿಧ್ಯ ವಹಿಸಲಿದ್ದು, ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಅಧ್ಯಕ್ಷತೆ ವಹಿಸಿಕೊಳ್ಳಲಿದ್ದಾರೆ, ಜಿ.ಪಂ.ಅಧ್ಯಕ್ಷ ಎಸ್.ಕೆ.ಕರಿಯಣ್ಣನವರ ರಾಜ್ಯಮಟ್ಟದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.

 ಐಡಿಬಿಐ ಬ್ಯಾಂಕ್ ಬೆಳಗಾವಿ ಪ್ರಾದೇಶಿಕ ಕಛೇರಿಯ ಜನರಲ್ ಮ್ಯಾನೇಜರ್ ವಿ.ವಾಸುದೇವನ್ ಸಂಘದ ಸದಸ್ಯರಿಗೆ ದಾಖಲಾತಿಗಳನ್ನು ಹಸ್ತಾಂತರಿಸಲಿದ್ದಾರೆ. ಇನ್ನುಳಿದಂತೆ ಕಾರ್ಯಕ್ರಮದಲ್ಲಿ ಧಾರವಾಡ ಕೆಎಂಎಫ್ ಅಧ್ಯಕ್ಷ ಬಸವರಾಜ ಅರಬಗೊಂಡ, ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಮಲ್ಲೇಶಪ್ಪ ಹೊರಪೇಟಿ, ಅಖಿಲ ಕನರ್ಾಟಕ ಜನಜಾಗೃತಿ ಅಧ್ಯಕ್ಷ ಸತೀಶ ಹೊನ್ನವಳ್ಳಿ, ಗ್ರಾ.ಪಂ.ಅಧ್ಯಕ್ಷೆ ಹಯಾತ್ಬಿ ಮತ್ತೀಹಳ್ಳಿ, ಬ್ಯಾಡಗಿ ಪುರಸಭೆ ಮುಖ್ಯಾಧಿಕಾರಿ ವಿ.ಎಂ.ಪೂಜಾರ, ಜನಜಾಗೃತಿ ಜಿಲ್ಲಾಧ್ಯಕ್ಷ ಮುತ್ತಣ್ಣ ಎಲಿಗಾರ ಉಪಸ್ಥಿತರಿರುವುದಾಗಿ ಸ್ವಾಗತ ಸಮಿತಿ ಗೌರವಾಧ್ಯಕ್ಷ ಮುರಿಗೆಪ್ಪ ಶೆಟ್ಟರ ಹಾಗೂ ವನಿತ ಗುತ್ತಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.