ಮುಧೋಳದ ಖ್ಯಾತ ವೈದ್ಯ ಡಾ. ನಾಯಿಕ ಅವರಿಗೆ ಸನ್ಮಾನ

ಲೋಕದರ್ಶನವರದಿ

ಮುಧೋಳ-ನಗರದ ಖ್ಯಾತ ಹೃದಯ ರೋಗ ತಜ್ಞ ವೈದ್ಯ ಐ.ಎಂ.ಎ. ಮಾಜಿ ಅಧ್ಯಕ್ಷ ಡಾ.ವ್ಹಿ.ಎನ್.ನಾಯಿಕ ಅವರು ವೈದ್ಯಕೀಯ ರಂಗದಲ್ಲಿ ಸಲ್ಲಿಸುತ್ತಿರುವ ಧೀಘರ್ಾವದಿ ಹಾಗೂ ದಕ್ಷ ಪ್ರಾಮಾಣಿಕ ಸೇವೆಯನ್ನು ಗಮನಿಸಿ  ಚಾಮರಾಜನಗರದಲ್ಲಿ ಇತ್ತೀಚೆಗೆ ನಡೆದ ಭಾರತಿಯ ವೈದ್ಯಕೀಯ ಸಂಘದ 85 ನೇ ವಾಷರ್ಿಕ ವಿಶೇಷ ಸಮಾರಂಭದಲ್ಲಿ ಪ್ರತಿಷ್ಠಿತ ಆದರ್ಶ ವೈದ್ಯ   ಪ್ರಶಸ್ತಿ ಪುರಸ್ಕಾರವನ್ನು ನೀಡಿ ರಾಜ್ಯ ಶಿಕ್ಷಣ ಸಚಿವ ಸುರೇಶಕುಮಾರ ಅವರು ಗೌರವಿಸಿ ಸನ್ಮಾನಿಸಿದರು.

 ಡಾ.ನಾಯಿಕ ಸೇರಿದಂತೆ ಸನ್ಮಾನಿತಗೊಂಡ ವೈದ್ಯರನ್ನುದ್ದೇಶಿಸಿ ಮಾತನಾಡಿದ ಸುರೇಶಕುಮಾರ  ರಾಜ್ಯದಲ್ಲಿ ಕೆಲವು ವೈದ್ಯರು ರೋಗಿಗಳ ಸೇವೆಯಲ್ಲಿಯೇ ಸಂತೃಪ್ತಿಯನ್ನು ಕಾಣುತ್ತಿದ್ದಾರೆ. ಇಂತಹ ಮಾದರಿ ವೈದ್ಯರನ್ನು ಸನ್ಮಾನಿಸಲು ಅಭಿಮಾನ ಎನಿಸುತ್ತಿದೆಂದು ಹೇಳಿ ಪ್ರತಿಯೊಬ್ಬ ವೈದ್ಯನಲ್ಲಿ ಮಾನವಿಯ ಗುಣಗಳು ಅವಶ್ಯವಾಗಿರಬೇಕು. ರೋಗಿಗಳ ಸೇವೆ ದೇವರ ಸೇವೆ ಅಂತಾ ತಿಳಿದು ವೈದ್ಯರು ಸೇವೆ ಮಾಡಬೇಕೆಂದು ಹೇಳಿದರು. 

ಐ.ಎಂ.ಎ. ರಾಜ್ಯ ಅಧ್ಯಕ್ಷ ಡಾ.ಅನ್ನದಾನಿ, ಸೇರಿದಂತೆ ರಾಜ್ಯ ಹಾಗೂ ಎಲ್ಲ ಜಿಲ್ಲೆಯ ಐ.ಎಂ.ಎ.ಪದಾಧಿಕಾರಿಗಳು ಸರ್ವ ಸದಸ್ಯರು ವೈದ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು.