ಡಾ. ಶ್ಯಾಮ್ ಪ್ರಸಾದ್ ಮುಖರ್ಜಿ ಜನ್ಮದಿನ ಆಚರಣೆ

ಡಾ. ಶ್ಯಾಮ್ ಪ್ರಸಾದ್ ಮುಖರ್ಜಿ ಜನ್ಮದಿನ ಆಚರಣೆ  Dr. Syama Prasad Mookerjee Birth Anniversary Celebration

ಲೋಕದರ್ಶನ ವರದಿ 

ಕಂಪ್ಲಿ, ಜು.6: ಪಟ್ಟಣದ ಕೊಟ್ಟಾಳ ರಸ್ತೆದಲ್ಲಿರುವ ಮಾಜಿ ಶಾಸಕ ಟಿ.ಎಚ್‌. ಸುರೇಶ್ ಬಾಬು ಅವರ ನಿವಾಸದ ತುಂಗಭದ್ರ ಕಾರ್ಯಾಲಯದಲ್ಲಿ ಭಾರತೀಯ ಜನತಾ ಪಕ್ಷದ ಸಂಸ್ಥಾಪಕರಲ್ಲಿ ಒಬ್ಬರಾದ ಡಾ. ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಜನ್ಮದಿನವನ್ನು ಸೋಮವಾರ ಅರ್ಥಪೂರ್ಣವಾಗಿ ಆಚರಿಸಲಾಯಿತು.  

ಈ ಸಂದರ್ಭದಲ್ಲಿ ಬಿಜೆಪಿ ಬಿಎಲ್‌ಎ-1 ಪ್ರಮುಖ ಶ್ರೀನಿವಾಸ್ ಮಾತನಾಡಿ, ಡಾ. ಶ್ಯಾಮ್ ಪ್ರಸಾದ್ ಮುಖರ್ಜಿ ದೇಶದ ಏಕತೆ, ಶಿಕ್ಷಣ ಹಾಗೂ ರಾಷ್ಟ್ರಭಕ್ತಿಗೆ ನೀಡಿದ ಕೊಡುಗೆ ಅಪಾರವಾಗಿದೆ ಎಂದು ಹೇಳಿದರು. ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಕರೆ ನೀಡಿದರು.  

ಮುಖರ್ಜಿ ಅವರು ಶಿಕ್ಷಣತಜ್ಞ, ನ್ಯಾಯವಾದಿ ಹಾಗೂ ರಾಷ್ಟ್ರನಾಯಕನಾಗಿ ದೇಶದ ಅಭಿವೃದ್ಧಿಗೆ ಮಹತ್ವದ ಸೇವೆ ಸಲ್ಲಿಸಿದ್ದು, ಅವರ ವಿಚಾರಧಾರೆ ಇಂದಿಗೂ ಯುವಜನತೆಗೆ ಪ್ರೇರಣೆಯಾಗಿವೆ ಎಂದು ಅಭಿಪ್ರಾಯಪಟ್ಟರು.  

ಕಾರ್ಯಕ್ರಮದಲ್ಲಿ ಡಾ. ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ, ಪುಷ್ಪನಮನ ಅರ​‍್ಿಸಲಾಯಿತು.  ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷ ಸಿ.ಡಿ. ಮಹಾದೇವ, ಅಳ್ಳಳ್ಳಿ ವೀರೇಶ್, ಎಸ್‌. ಚಂದ್ರಶೇಖರಗೌಡ, ಮನೋಜ್ ಗೌಡ, ಪಕ್ಕೀರ​‍್ಪ, ಪ್ರಶಾಂತ್, ಬಸವಪ್ರಭು, ಕಟ್ಟೆ ವಿಶ್ವ, ಮುರಳಿರೆಡ್ಡಿ, ಎಸ್‌.ಆರ್‌. ಕಾರ್ತಿಕ್, ಭಾಸ್ಕರ್, ವಿರೂಪಾಕ್ಷಿ ಸೇರಿದಂತೆ ಅನೇಕ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.