ಶಿಗ್ಗಾವಿ 13: ಕರ್ನಾಟಕ ದಲ್ಲಿ ಖಾಸಗಿ ಸಂಸ್ಥೆ ಹಾಗೂ ಐಟಿಬಿಟಿ ಕಂಪನಿಗಳಲ್ಲಿ ಕನ್ನಡಿಗರಿಗೆ 80 ಪಸರ್ೆಂಟ್ ಉದ್ಯೋಗ ಕಲ್ಪಿಸಲು ಡಾಕ್ಟರ ಸರೋಜಿನಿ ಮಹಿಷಿಯವರ ವರದಿ ಸರಿಯಾಗಿ 35 ವರ್ಷ ಕಳೆದರೂ ಇನ್ನೂ ಅನುಷ್ಠಾನಕ್ಕೆ ತರದೇ ಎಲ್ಲ ಸಕರ್ಾರಗಳು ಕನ್ನಡಿಗರಿಗೆ ಅನ್ಯಾಯ ಮಾಡುತ್ತಾ ಬಂದಿವೆ ಎಂದು ಬೆಂಗಳೂರಿನ ರಾಮ ಭಕ್ತ ಮಂಜುನಾಥ್ ಅವರು ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದ ಬಳಿ ಬೆಂಗಳೂರಿನಿಂದ ಪಾದಯಾತ್ರೆ ಮೂಲಕ ಆಗಮಿಸಿ ವರದಿಗಾರರೊಂದಿಂಗೆ ಮಾತನಾಡಿದ ಅವರು, ಡಾ. ಸರೋಜಿನಿ ಮಹಿಷಿಯವರ ವರದಿಯನ್ನು ಕೂಡಲೇ ಅನುಷ್ಠಾನ ತರಬೇಕು ಎಂದು ಆಗ್ರಹಿಸಿ ತಮ್ಮ ನೇತೃತ್ವದಲ್ಲಿ ಬೆಂಗಳೂರಿನ ಹೂಡಿ ಗ್ರಾಮದಿಂದ ಬೆಳಗಾವಿಯ ಸುವರ್ಣಸೌಧದ ವರೆಗೂ ಸುಮಾರು 520 ಕೀ ಮಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ, ಫೆ. 2 ರಂದು ಬೆಂಗಳೂರಿನಿಂದ ಪ್ರಾರಂಭವಾದ ಈ ಪಾದಯಾತ್ರೆ ದಿನಕ್ಕೆ 40 ರಿಂದ 45 ಕೀ ಮೀ ಕಾಲ್ನಡಿಗೆಯಲ್ಲಿಯೇ ಸಾಗಲಿದೆ ಆದರಿಂದ ಈ ಹೋರಾಟಕ್ಕೆ ಬೆಂಬಲಿಸಲು ಶುಲ್ಕರಹಿತ 9319464683 ಸಂಖ್ಯೆಗೆ ಕರೆ ಮಾಡುವ ಮೂಲಕ ಬೆಂಬಲಿಸಲು ತಿಳಿಸಿ ಹುಬ್ಬಳ್ಳಿಯತ್ತ ಪಾದಯಾತ್ರೆಯನ್ನು ಮುಂದುವರೆಸಿದರು.
ಪಾದಯಾತ್ರೆಯಲ್ಲಿ ಕರವೇ ಗಜಸೇನೆಯ ರಾಜ್ಯ ಉಪಾಧ್ಯಕ್ಷ ದೀಲಿಪ್ ಕುಮಾರ, ಕಾರ್ಯಕರ್ತರಾದ ಆಂಜಿ, ಮುನಿಕೃಷ್ಣ, ದಿನೇಶ, ಲಿಂಗರಾಜ ಮುಂತಾದವರು ಇದ್ದರು.