ವ್ಯಾಸ ಮತ್ತು ವಾಲ್ಮೀಕಿಯರ ಸರಿ ಸಮಾನರು ಡಾ. ಎಸ್. ಎಲ್. ಭೈರ್ಪ : ಸುಧೀರಸಿಂಹ ಘೋರೆ್ಡ
Dr. S. L. Bhairava is equal to Vyasa and Valmiki: Sudhirasimha Ghoreda
ಲೋಕದರ್ಶನ ವರದಿ
ವ್ಯಾಸ ಮತ್ತು ವಾಲ್ಮೀಕಿಯರ ಸರಿ ಸಮಾನರು ಡಾ. ಎಸ್. ಎಲ್. ಭೈರ್ಪ : ಸುಧೀರಸಿಂಹ ಘೋರೆ್ಡ
ಗದಗ 15 : ಭೈರ್ಪನವರ ಸಾಹಿತ್ಯವೆಂದರೆ ಅದು ಒಂದು ಉನ್ನತ ಅಧ್ಯಯನದ ಮೊತ್ತ. ಅವರೆಂದೂ ಓಲೈಕೆಗಾಗಿ ಸಾಹಿತ್ಯ ಬರೆದವರಲ್ಲ. ಕಟುವಾದರೂ ಸರಿ, ಸತ್ಯ ಮತ್ತೂ ವಾಸ್ತವದ ಹೊರತೂ ಮತ್ತೇನನ್ನೂ ಬರೆಯಲಾರೆ ಎಂಬಂತೆ ಬೈರ್ಪನವರು ಬದುಕಿದ್ದರು. ಜನಪ್ರಿಯತೆಯಲ್ಲಿ ಡಾ.ಎಸ್.ಎಲ್.ಭೈರ್ಪನವರು ವ್ಯಾಸ ಮತ್ತು ವಾಲ್ಮೀಕಿ ಅವರ ಸರಿ ಸಮಾನವಾಗಿ ನಿಲ್ಲುತ್ತಾರೆ ಎಂದು ಹಿರಿಯ ನ್ಯಾಯವಾದಿಗಳಾದ ಸುಧೀರಸಿಂಹ ಘೋರೆ್ಡಯವರು ತಿಳಿಸಿದರು.
ನಗರದ ಕೆ.ಎಲ್ ಸಂಸ್ಥೆಯ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಕನ್ನಡ ವಿಭಾಗವು ?ಬಹುರೂಪಿ ಡಾ. ಎಸ್. ಎಲ್. ಬೈರ್ಪ'ೆ ಎನ್ನುವ ವಿಶಿಷ್ಟ ಕಾರ್ಯಕ್ರಮವನ್ನು ಏರಿ್ಡಸಿತ್ತು. ಕಾರ್ಯಕ್ರಮದ ಅಂಗವಾಗಿ ವಿಶೇಷ ಉಪನ್ಯಾಸ, ವಿದ್ಯಾರ್ಥಿಗಳೊಂದಿಗೆ ಸಂವಾದ ಮತ್ತು ಸಾಕ್ಷ್ಯಚಿತ್ರ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿದ ಹಿರಿಯ ನ್ಯಾಯವಾದಿಗಳಾದ ಸುಧೀರಸಿಂಹ ಘೋರೆ್ಡಯವರು ನಮ್ಮ ದೇಶದ ಜನರಲ್ಲಿ ನಾಗರಿಕತೆ, ಸಂಸ್ಕೃತಿ, ಸಂಪ್ರದಾಯ ಉಳಿದಿದೆ ಎಂದರೆ ಅದಕ್ಕೆ ಕಾರಣ ಸಾಹಿತ್ಯ ಮಾತ್ರ. ಅಂತಹ ಸಾಹಿತ್ಯ ರಚನಾಕಾರರಲ್ಲಿ ಡಾ.ಎಸ್. ಎಲ್. ಭೈರ್ಪ ಪ್ರಮುಖರು. ಭೈರ್ಪ ಅವರು ಹದಿಮೂರನೆಯ ವಯಸ್ಸಿನಲ್ಲಿಯೇ ಸ್ವಾತಂತ್ರ್ಯ ಸಂಗ್ರಾಮಕ್ಕೆ ಧುಮುಕಿದವರು. ಅವರ ಜೀವನದಲ್ಲಿ ಬಹಳ ಕಷ್ಟ ಪಟ್ಟಿದ್ದಾರೆ. ಕಷ್ಟಪಟ್ಟರೆ ಮಾತ್ರ ಯಶಸ್ಸು ಸಿಗುತ್ತದೆ ಎನ್ನುವುದಕ್ಕೆ ಭೈರ್ಪ ಪ್ರತ್ಯಕ್ಷ ಸಾಕ್ಷಿಯಾಗಿದ್ದಾರೆ. ವಿದ್ಯಾರ್ಥಿಗಳು ಕೂಡ ಅವರಂತೆಯೇ ಉನ್ನತ ಸ್ಥಾನಕ್ಕೇರಲು ಪ್ರಯತ್ನ ಪಡಬೇಕು. ಶ್ರೀಗಂಧವನ್ನು ತೇಯ್ದಾಗ ಮಾತ್ರ ಅದರ ಘಮ ಹೊರಬರುತ್ತದೆ. ಹಾಗೆಯೇ ಪ್ರಯತ್ನ ಪಟ್ಟಾಗ ಮಾತ್ರ ಜೀವನದಲ್ಲಿ ಉತ್ತುಂಗಕ್ಕೆ ಏರಲು ಸಾಧ್ಯ ಎಂದರು.
ಕಾರ್ಯಕ್ರಮದ ಪ್ರಾರಂಭದಲ್ಲಿ ಮಹಾವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಅಂದಯ್ಯ ಅರವಟಗಿಮಠರವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಭೈರ್ಪನವರು ಕೆಲ ವರ್ಷಗಳ ಕಾಲ ಕೆ.ಎಲ್.ಇ ಸಂಸ್ಥೆಯ ಉಪನ್ಯಾಸಕರಾಗಿದ್ದರು ಎನ್ನುವುದು ನಮಗೆಲ್ಲ ಹೆಮ್ಮೆಯ ಸಂಗತಿ. ಒಂದು ಕೃತಿ ರಚನೆಗೂ ಮುನ್ನ ಆ ಕುರಿತು ಸಂಶೋಧನೆ ಹಾಗೂ ಕ್ಷೇತ್ರಕಾರ್ಯ ಮಾಡುತ್ತಿದ್ದಂತಹ ಅಪರೂಪದ ಸಾಹಿತಿ ಭೈರ್ಪನವರು. ಅವರ ನಾಯಿನೆರಳು, ಧರ್ಮಶ್ರೀ, ಗೃಹಭಂಗ, ಗ್ರಹಣ, ದೂರ ಸರಿದವರು, ಮತದಾನ ಸೇರಿದಂತೆ ನಾನಾ ಕಾದಂಬರಿಗಳು ನಲವತ್ತು ಬಾರಿ ಮರು ಮುದ್ರಣವಾಗಿವೆ. ಹಿಂದಿ, ಮರಾಠಿ, ತೆಲುಗು ಸೇರಿದಂತೆ ನಾನಾ ಭಾಷೆಗಳಿಗೆ ಭಾಷಾಂತರಗೊಂಡಿವೆ. ದೇಶವ್ಯಾಪ್ತಿ ಖ್ಯಾತರಾಗಿರುವ ಭೈರ್ಪನವರಿಗೆ ಬಹಳ ಹಿಂದೆಯೇ ಜ್ಞಾನಪೀಠ ಪ್ರಶಸ್ತಿ ಸಲ್ಲಬೇಕಿತ್ತು. ಮರಣೋತ್ತರವಾಗಿಯಾದರೂ ಜ್ಞಾನಪೀಠ ಪ್ರಶಸ್ತಿ ಬಂದರೆ ಆ ಪ್ರಶಸ್ತಿಗೆ ಹೆಚ್ಚಿನ ಗೌರವ, ಮಹತ್ವ ಬರುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಚಾರ್ಯರಾದ ಡಾ. ಎ.ಕೆ.ಮಠ ಮಾತನಾಡಿ ಭೈರ್ಪ ಸಾಹಿತ್ಯವು ಕೇವಲ ಪಠ್ಯಪುಸ್ತಕದ ವಿಷಯವಲ್ಲ, ಅದು ಜೀವನದ ಪಾಠ. ವಿದ್ಯಾರ್ಥಿಗಳು ಸಾಹಿತ್ಯಾಭ್ಯಾಸದ ಜತೆಗೆ ಕಥೆ, ಕಾದಂಬರಿ, ವಿಮರ್ಶಾತ್ಮಕ ಕೃತಿಗಳ ಅಧ್ಯಯನಕ್ಕೂ ಸಮಯ ಮೀಸಲಿಡಬೇಕು, ಯಾವುದೇ ವಯೋಮಾನದ ವ್ಯಕ್ತಿ ಸಾಹಿತ್ಯದ ಬಗ್ಗೆ ಅಭಿರುಚಿ ಹೊಂದಿರುತ್ತಾನೋ ಆತನ ಜೀವನದಲ್ಲಿ ಶಿಸ್ತು, ಸಂತೋಷ ಮತ್ತು ತೃಪ್ತಿಯ ನಡೆ ಸಾಧ್ಯ ಎಂದರು.
ಕಾರ್ಯಕ್ರಮದ ಪ್ರಾರಂಭದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ನಿರ್ಮಿಸಿದ, ಪಿ ಶೇಷಾದ್ರಿ ನಿರ್ದೇಶಿಸಿದ ‘ಡಾ. ಎಸ್. ಎಲ್. ಭೈರ್ಪನವರ ಜೀವನ ಮತ್ತು ಕೃತಿಗಳು' ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲಾಯಿತು. ಕಾರ್ಯಕ್ರಮದ ನಿರ್ವಹಣೆಯನ್ನು ಡಾ. ರಾಮಚಂದ್ರ ಪಡೇಸೂರ ನೆರವೇರಿಸಿದರು. ಪ್ರೊ. ಗೌರ ಯಳಮಲಿ ವಂದಿಸಿದರು. ಪ್ರೊ. ಜಿ.ಟಿ.ನಾಯಕ, ಡಾ. ವಿಠ್ಠಲ ಕೋಳಿ, ಪ್ರೊ. ಶ್ವೇತಾ ರಾಚಯ್ಯನವರ ಒಳಗೊಂಡಂತೆ ಮಹಾವಿದ್ಯಾಲಯದ ಎಲ್ಲ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಹಾಜರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 