ಲೋಕದರ್ಶನವರದಿ
ಶಿಗ್ಗಾವಿ : ಬಿಸನಳ್ಳಿ ಗ್ರಾಮದ ಜ.ಪಂ.ವೇದ, ಆಗಮ, ಸಂಸ್ಕೃತ, ಸಂಗೀತ, ಯೋಗ ಪಾಠಶಾಲೆ ಆವರಣದಲ್ಲಿ ನ.27 ರಿಂದ ಡಿ.1 ರವರೆಗೆ ಲೋಕ ಕಲ್ಯಾಣಾರ್ಥವಾಗಿ ನಡೆಯಲಿರುವ ಇಷ್ಠಲಿಂಗ ಮಹಾಪೂಜೆ, ಧರ್ಮ ಸಮಾರಂಭ, ಉಚಿತ ಸಾಮೂಹಿಕ ವಿವಾಹಗಳ ಭಿತ್ತಿಪತ್ರಗಳನ್ನು ಕಾಶಿ ಜ್ಞಾನ ಸಿಂಹಾಶನಾಧೀಶ್ವರ ಡಾ. ಚಂದ್ರಶೇಖರ ಶಿವಾಚಾರ್ಯ ಶ್ರೀ ಬಿಡುಗಡೆಗೊಳಿಸಿದರು.
ನಂತರ ಆಶೀರ್ವಚನ ನೀಡಿದ ಅವರು ಪ್ರತಿವರ್ಷದ ಪದ್ಧತಿಯಂತೆ ಈ ವರ್ಷವೂ ಕೂಡಾ ನ. 27 ರಿಂದ ಡಿ. 1 ರ ವರೆಗೆ ನಾಡಿನ ಹರ, ಗುರು ಚರಮೂತರ್ಿಗಳ ಸಮ್ಮುಖದಲ್ಲಿ ಪ್ರಾಥ:ಕಾಲ ಇಷ್ಠಲಿಂಗ ಮಹಾ ಪೂಜೆ, ಸಂಜೆ ಸಿದ್ಧಾಂತ ಶಿಖಾಮಣಿ ಆಧ್ಯಾತ್ಮಿಕ ಆಶೀರ್ವಚನ ಕಾರ್ಯಕ್ರಮ ನಡೆಯಲಿವೆ.
ನ.30 ರಂದು 101 ಜಂಗಮ ವಟುಗಳ ಆರಾಧನೆ, ವೃದ್ಧ ದಂಪತಿಗಳ ಪಾದಪೂಜೆ ಕಾರ್ಯಕ್ರಮ ನಡೆಯಲಿದೆ. ಡಿ. 1 ರಂದು ಹೈದ್ರಾಬಾದ ಬಲಕಂಪೇಟೆಯ ರಾಷ್ಟ್ರ ವೀರಶೈವ ಸಮಾಜದವರಿಂದ ಉಚಿತ ಸಾಮೂಹಿಕ ವಿವಾಹಗಳು ಜರುಗಲಿವೆ. ವಿವಾಹ ವಾಗುವ ದಂಪತಿಗಳಿಗೆ ಬಟ್ಟೆ, ಬಾಸಿಂಗ್, ತಾಳಿ, ಕಾಲುಂಗರಗಳನ್ನು ಬಲಕಂಪೇಟೆಯ ಭಕ್ತರು ಉಚಿತವಾಗಿ ನೀಡಿ ವಿವಾಹ ಮಹೋತ್ಸವವನ್ನು ನಡೆಸಿಕೊಡಲಿದ್ದಾರೆ ಎಂದು ಹೇಳಿದರು.
ಭಕ್ತರ ಭಕ್ತಿಯೆ ಮಠಕ್ಕೆ ಶಕ್ತಿಯಾಗಿ ವರ್ಷದಿಂದ ವರ್ಷಕ್ಕೆ ಶ್ರೀಮಠ ಅಭಿವೃದ್ಧಿ ಹೊಂದುತ್ತಲಿದೆ. ಬೆರಳೆಣಿಕೆ ಮಕ್ಕಳಿಂದ ಪ್ರಾರಂಭವಾದ ವೇದ, ಸಂಗೀತ, ಸಂಸ್ಕೃತ ಪಾಠಶಾಲೆ ಈಗ 150 ಕ್ಕಿಂತಲೂ ಅಧಿಕ ಮಕ್ಕಳ ಸಂಖ್ಯೆಯನ್ನು ಹೋಂದಿ ಮುನ್ನಡೆಯುತ್ತಲಿದೆ. ಇದಕ್ಕೆಲ್ಲಾ ಭಕ್ತರ ಭಕ್ತಿಯೆ ಕಾರಣವಾಗಿದೆ. ಬಿಸನಳ್ಳಿ ಕಾಶಿ ಶಾಖಾ ಮಠದ ಸೇವಾಥರ್ಿಗಳ ನಿಸ್ವಾರ್ಥ ಸೇವೆಯ ಪ್ರತಿಫಲವಾಗಿ ಭಕ್ತರು ಶ್ರೀಮಠಕ್ಕೆ ನೀಡಿದ ದಾನ ಧರ್ಮ ಸತ್ಫಾತ್ರದ ಕಾರ್ಯಗಳಿಗೆ ಸಲ್ಲುತ್ತಿದ್ದು, ಸಮಾಜದ ಒಳಿತಿಗಾಗಿಯೇ ಶ್ರೀಮಠ ಹಗಲಿರುಳೆನ್ನದೆ ಶ್ರಮಿಸುತ್ತಿದೆ ಎಂದು ಹೇಳಿದರು.
ಭಕ್ತರು ನೀಡಿದ ದೇಣಿಗೆಯಿಂದ ನಿಮರ್ಾಣಗೊಳ್ಳುತ್ತಿರುವ ಮೊದಲನೆ ಮಹಡಿಯ ಕಟ್ಟಡವನ್ನು ಶ್ರೀಗಳು ವೀಕ್ಷಿಸಿ ಮೆಚ್ಚುಗೆ ವ್ಯೆಕ್ತಪಡೆಸಿದರು. ವಿವಾಹವಾಗುವವರು ಹಾಗೂ ಅಯ್ಯಾಚಾರ ದಿಕ್ಷಾ ಪಡೆಯುವವರು ಹೆಚ್ಚಿನ ಮಾಹಿತಿಗಾಗಿ ಮೊ. 8495920018, 9620041436 ಸಂಖ್ಯೆಗೆ ಸಂಪಕರ್ಿಸಲು ಕೊರಲಾಗಿದೆ.
ಪಾಠಶಾಲೆಯ ಉಪಾಧ್ಯಕ್ಷ ಶಂಬಣ್ಣ ಮಾ.ಪ.ಶೆಟ್ಟರ, ಜಿ.ಐ.ಸಜ್ಜನಗೌಡ್ರ, ಕಲ್ಲಪ್ಪ ಆಜೂರ, ಉಮೇಶ ಅಂಗಡಿ, ಮಲ್ಲೇಶಪ್ಪ ಮಾಳಗಿಮನಿ, ಸಂಗಪ್ಪ ಮೊರಬದ, ಗದಿಗಯ್ಯ ಹಿರೇಮಠ, ಗುರುಶಾಂತಪ್ಪ ನರೇಗಲ್, ಗಂಗಾಧರ ಬಡ್ಡಿ, ಗದಿಗೇಪ್ಪ ಮಾ.ಪ.ಶೆಟ್ಟರ, ನಿಂಗಪ್ಪ ಹೊಸಮನಿ, ವಿರೇಶ ಆಜೂರ, ಶಿವು ಅಂಗಡಿ, ನಿಂಗನಗೌಡ್ರ ಪಾಟೀಲ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.