ಡಾ. ಆರ್.ಎಂ.ಕುಬೇರಪ್ಪ ರಾಷ್ಟ್ರಮಟ್ಟದ ಕಾರ್ಯದರ್ಶಿಯಾಗಿ ನೇಮಕ

ರಾಣೇಬೆನ್ನೂರು08: ಇಲ್ಲಿನ ಪ್ರತಿಷ್ಠಿತ ಬಿಎಜೆಎಸ್ಎಸ್ ಸಮೂಹ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಡಾ|| ಆರ್.ಎಂ.ಕುಬೇರಪ್ಪ ಅವರು ರಾಷ್ಟ್ರಮಟ್ಟದ ಸೇವಾ ಸಂಸ್ಥೆಯಾಗಿರುವ ಭಾರತೀಯ ಆದಿಮ ಜಾತಿ ಸೇವಕ ಸಂಘದ ರಾಷ್ಟ್ರೀಯ ಕಾರ್ಯಕಾರಣಿ ಸದಸ್ಯರಾಗಿ ಪುನರಾಯ್ಕೆಯಾಗಿದ್ದಾರೆ. 

ಡಾ|| ಕುಬೇರಪ್ಪ ಅವರು ಕಳೆದ 5-6ವರ್ಷಗಳಿಂದ ರಾಷ್ಟ್ರೀಯ ಕಾರ್ಯಕಾರಣಿ ಸದಸ್ಯರಾಗಿ ಕನರ್ಾಟಕ ರಾಜ್ಯವನ್ನು ಪ್ರತಿನಿಧಿಸುತ್ತಿದ್ದರು.  ನವದೆಹಲಿಯಲ್ಲಿ ಇತ್ತೀಚಿಗೆ ನಡೆದ ರಾಷ್ಟ್ರೀಯ ವಾಷರ್ಿಕ ಸಭೆಯಲ್ಲಿ ಅವರನ್ನು ರಾಷ್ಟ್ರೀಯ ಕಾರ್ಯಕಾರಣಿ ಸದಸ್ಯರಾಗಿ ಪುನರಾಯ್ಕೆಯಾಗಿದ್ದು ಅಲ್ಲದೇ, ಅವರ ಅತ್ಯುತ್ತಮ ಕಾರ್ಯಕ್ಷಮತೆಯನ್ನು ಪರಿಗಣಿಸಿದ ರಾಷ್ಟ್ರೀಯ ಅಧ್ಯಕ್ಷ ಎನ್.ಸಿ. ಹೆಂಬ್ರಮ್ ಅವರು ಹೆಚ್ಚುವರಿಯಾಗಿ ಕಾರ್ಯದಶರ್ಿಯಾಗಿ ನೇಮಕಾತಿಗೊಳಿಸಿದ್ದಾರೆ. 

ಮಹಾತ್ಮಾ ಗಾಂಧೀಜಿಯ ಸಹಚರರಾದ ಠಕ್ಕರಭಾಪಾ ಮೊದಲಾದವರು 1949 ರಲ್ಲಿಯೇ ಸ್ಪಾಪನೆ ಮಾಡಿದ ಈ ಮಹಾಸಂಸ್ಥೆಯು ಭಾರತದ ಎಲ್ಲಾ ರಾಜ್ಯಗಳಲ್ಲಿ ತನ್ನ ಧ್ಯೇಯೋದ್ದೇಶದ ಶಿಕ್ಷಣ ಹಾಗೂ ಇತರೆ ಸೇವಾ ಸಂಸ್ಥೆಗಳ ಚಟುವಟಿಕೆಗಳನ್ನು ನಡೆಸುತ್ತಿದ್ದು, ದೇಶದ ಎಲ್ಲಾ ರಾಜ್ಯಗಳಿಂದ ಪ್ರತಿನಿಧಿಸುವ ರಾಷ್ಟ್ರೀಯ ಕಾರ್ಯಕಾರಿಣಿಯು ದೇಶದ ಏಳ್ಗೆ ಹಾಗೂ ಅಭಿವೃದ್ದಿಗಾಗಿ ಕೆಲಸ ಮಾಡುತ್ತಿದ್ದು, ಡಾ|| ಬಾಬುರಾಜೆಂದ್ರ ಪ್ರಸಾದ್, ಶ್ರೀ ಮೊರಾಜರ್ಿ ದೇಸಾಯಿಯಂತಹ ರಾಷ್ಟ್ರ ನಾಯಕರುಗಳು ಈ ಸಂಸ್ಥೆಯ ರಾಷ್ಟೀಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.  ಈ ಸಂಸ್ಥೆಯಡಿಯಲ್ಲಿ ರಾಣೇಬೆನ್ನೂರು ನಗರದಲ್ಲಿ ಬಿಎಜೆಎಸ್ಎಸ್ ಸಂಸ್ಥೆಯು ಹಲವಾರು ಶಿಕ್ಷಣ ಸಂಸ್ಥೆಗಳು ನಡೆಸುತ್ತಿವೆ.  ಅಧ್ಯಕ್ಷರಾಗಿ ಮಾಜಿ ಸಚಿವ ರುದ್ರಪ್ಪ ಲಮಾಣಿ ಆಡಳಿತಾಧಿಕಾರಿಯಾಗಿ ಡಾ|| ಆರ್.ಎಂ.ಕುಬೇರಪ್ಪ ಅವರು ಸೇವೆ ಸಲ್ಲಿಸುತ್ತಿದ್ದಾರೆ. 

ಬಿಎಜೆಎಸ್ಎಸ್ ರಾಷ್ಟ್ರೀಯ ಸಂಸ್ಥೆಗೆ ರಾಷ್ಟ್ರಮಟ್ಟದ ಕಾರ್ಯದರ್ಶಿ ಯಾಗಿ ಆಯ್ಕೆಗೊಂಡ ಡಾ|| ಕುಬೇರಪ್ಪ ಅವರಿಗೆ ಸ್ಥಳೀಯ ಸಂಸ್ಥೆಯ ಅಧ್ಯಕ್ಷ  ರುದ್ರಪ್ಪ ಲಮಾಣಿ, ಸಂಸ್ಥೆಯ ಎಲ್ಲಾ ಶಾಲಾ-ಕಾಲೇಜು ಮುಖ್ಯಸ್ಥರು ಮತ್ತು ಸಂಘ-ಸಂಸ್ಥೆಗಳ ಮುಖಂಡರು, ಗಣ್ಯರು, ಉಪನ್ಯಾಸಕರ ಹಾಧರ್ಿಕವಾಗಿ ಅಭಿನಂದಿಸಿದ್ದಾರೆ.