ಡಾ. ಪ್ರಭಾಕರ ಕೋರೆ ಕೋ-ಆಫ್‌ೆ ಕ್ರೇಡಿಟ್ ಸೊಸಾಯಿಟಿಗೆ ರೂ 25.30 ಕೋಟಿ ಲಾಭ

Dr. Prabhakar Kore Co-operative Credit Society earns Rs 25.30 crore profit

ಲೋಕದರ್ಶನ ವರದಿ 

ಡಾ. ಪ್ರಭಾಕರ ಕೋರೆ ಕೋ-ಆಫ್‌ೆ ಕ್ರೇಡಿಟ್ ಸೊಸಾಯಿಟಿಗೆ ರೂ 25.30 ಕೋಟಿ ಲಾಭ  

ಮಾಂಜರಿ, 16: ಅಂಕಲಿ ಗ್ರಾಮದ ಡಾ. ಪ್ರಭಾಕರ ಕೋರೆ ಕೋ-ಆಫ್ ಕ್ರೇಡಿಟ ಸೊಸಾಯಿಟಿ ನಿ., ಅಂಕಲಿ (ಬಹು ರಾಜ್ಯ) ರಾಜ್ಯಾದ್ಯಂತ 55 ಶಾಖೆಗಳನ್ನು ಹೊಂದಿದ್ದು. ಸನ್ 2024-25 ಸಾಲಿನಲ್ಲಿ ಸಾಲ ಶೇ 92ಅ ವಸುಲಾತಿ ಮಾಡಿ ರೂ 25.30 ಕೋಟಿ ನಿವ್ವಳ ಲಾಭ ಗಳಿಸಿದೆ ಎಂದು ಸಂಸ್ಥೆಯ ಅಧ್ಯಕ್ಷರಾದ ಮಾಹಾಂತೇಶ ಲಿ ಪಾಟೀಲ ಇವರು ತಿಳಿಸಿದರು 

        ಸಂಸ್ಥೆಯು 1989 ರಲ್ಲಿ ವಿಜಯಪೂರದ ಜ್ಞಾನಯೋಗಾಶ್ರಮದ ಲಿಂಗೈಕ್ಯ ಪರಮಪೂಜ್ಯ ಶ್ರೀ ಸಿದ್ದೇಶ್ವರ ಮಾಹಾಸ್ವಾಮಿಗಳ ಅಮೃತ ಹಸ್ತದಿಂದ ಪ್ರಾರಂಭವಾಗಿ ಸಂಸ್ಥಾಪಕರಾದ ಸನ್ಮಾನ್ಯ ಡಾ. ಪ್ರಭಾಕರ ಕೋರೆಯವರ ಮಾರ್ಗದರ್ಶನದಲ್ಲಿ ಮತ್ತು ಶ್ರೀ ಅಮೀತ ಕೋರೆ ಹಾಗೂ ಸೌ ಪ್ರೀತಿ ದೊಡವಾಡ ಇವರ ನೆತೃತ್ವದಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದರು ಬುಧವಾರದಂದು ಸಂಸ್ಥೆಯ ಆಡಳಿತ ಕಛೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಸ್ಥೆಯ ಒಟ್ಟು 55 ಶಾಖೆಗಳು ಕಾರ್ಯನಿರ್ವಹಿಸುತ್ತಿದ್ದು. ಸಂಸ್ಥೆಯು ಗ್ರಾಮೀಣ ಭಾಗದ ಶಾಖೆಗಳಿಂದ ರೈತಾಪಿ ವರ್ಗದವರಿಗೆ ತನ್ನ ಅಧುನಿಕ ತಂತ್ರಜ್ಞಾನದ   ಮೂಲಕ ತ್ವರಿತ ಸೇವೆಗಳನ್ನು ನೀಡುತ್ತಿದ್ದು. ವಾರ್ಷಾಂತ್ಯಕ್ಕೆ 97727 ಸದಸ್ಯರನ್ನು ಹೊಂದಿದೆ. ರೂ 4 ಕೋಟಿಗೂ ಮಿಕ್ಕಿ ಶೇರು ಬಂಡವಾಳ ಹೊಂದಿ 141 ಕೋಟಿಗೂ ಮಿಕ್ಕಿ ನಿಧಿಗಳನ್ನು ಸಂಗ್ರಹಿಸಿ 1511 ಕೋಟಿಗೂ ಮಿಕ್ಕಿ  ಠೇವು ಸಂಗ್ರಹಿಸಿರುತ್ತದೆ. 1064 ಕೋಟಿಗೂ ಅಧಿಕ ಸಾಲ ವಿತರಿಸಿರುತ್ತದೆ. 580 ಕೋಟಿಗೂ ಮಿಕ್ಕಿ ಗುಂತಾವಣಿಗಳನ್ನು ಹೊಂದಿರುತ್ತದೆ. 1657 ಕೋಟಿಗೂ ಮಿಕ್ಕಿ ದುಡಿಯುವ ಬಂಡವಾಳ ಹೊಂದಿ 22076 ಕೋಟಿಗೂ ಮಿಕ್ಕಿ ವಾರ್ಷಿಕ ವಹಿವಾಟು ಮಾಡಿದೆ, ಸಂಸ್ಥೆಯು ರೂ 25 ಕೋಟಿ ಮೌಲ್ಯದ 8 ಸ್ವಂತ ಕಟ್ಟಡಗಳನ್ನು ಹೊಂದಿರುತ್ತದೆ ಮತ್ತು ಭವಿಷ್ಯದಲ್ಲಿ ಶಾಖೆಗಳಿಗೆ ಸ್ವಂತ ನೀವೇಶನ ಹಾಗೂ ಕಟ್ಟಡಗಳನ್ನು ಖರೀದಿಸುವ ಗುರಿ ಹೊಂದಲಾಗಿದೆ ಎಂದರು,ಸಾರ್ವಜನಿಕ ವಲಯದ ರಾಷ್ಟ್ರಿಕೃತ ಬ್ಯಾಂಕುಗಳ ಸಾಲ ಮತ್ತು ಠೇವಣಿಗಳ ಬಡ್ಡಿದರಗಳಿಗೆ ಸ್ಪರ್ದಾತ್ಮಕ ರೀತಿಯಲ್ಲಿ ಠೇವಣಿ ಮತ್ತು ಸಾಲದ ಬಡ್ಡಿದರಗಳನ್ನು ಸಂಸ್ಥೆಯು ಅಳವಡಿಸಿಕೊಂಡಿರುತ್ತದೆ. ಸುಮಾರು  200 ಪವರ್‌ ಕಾರ್ಟಗಳಿಗೆ, 5 ಬೃಹತ ಕಬ್ಬು ಕಟಾವು ಯಂತ್ರಗಳಿಗೆ, ಶಾಲಾ ಬಸ್ಸು ಮತ್ತು ನಾಲ್ಕು ಚಕ್ರ ವಾಹನ ಹಾಗೂ ಇತರೆ ವಾಹನಗಳಿಗೆ ಅತಿ  ಕಡಿಮೆ ಬಡ್ಡಿ ದರದಲ್ಲಿ ವಾಹನಸಾಲ, ಸದಸ್ಯರ ಅನೂಕುಲಕ್ಕಾಗಿ ಗೃಹ ಸಾಲ, ಅತ್ಯಂತ ಕಡಿಮೆ ಬಡ್ಡಿದರದಲ್ಲಿ ಸುಮಾರು 1200 ಎಕರೆ ಭೂಮಿಗೆ 900 ಫಲಾನುಭವಿ ರೈತ ಸದಸ್ಯರಿಗೆ ಏತ ನೀರಾವರಿ ಸಾಲ ನೀಡಿದ್ದೇವೆ. ಅದೆ ರೀತಿ ಬಂಗಾರ ಸಾಲವನ್ನು ತ್ವರಿತವಾಗಿ ಅತಿ ಕಡಿಮೆ ಬಡ್ಡಿದರದಲ್ಲಿ ವಿತರಿಸುತ್ತಿದ್ದೇವೆ. ಸಂಸ್ಥೆಯು ತನ್ನ ಸದಸ್ಯ ಬಾಂಧವರಿಗೆ ಸೇಫ್ ಲಾಕರ್ ವ್ಯವಸ್ಥೆ, ಮೊಬೈಲ ರಿಚಾರ್ಜ, ಪ್ಯಾನ ಕಾರ್ಡ, ಪಾಸಪೊರ್ಟ್‌, ಇ-ಸ್ಟಾ-್ಯಂಪ, ಆರ್ ಟಿ ಸಿ (ಉತಾರ), ಬಸ್ ರೈಲು ಹಗೂ ವಿಮಾನ ಟಿಕೆಟ ಕಾಯ್ದಿರುಸುವಿಕ, ಇತರೆೆ ಬ್ಯಾಂಕುಗಳ ಸಹಯೊಗದೊಂದಿಗೆ ಆರ್ ಟಿ ಜಿ ಎಸ್ ಮತ್ತು ಎನ್ ಇ ಎಫ್ ಟಿ ಸೌಲಭ್ಯ. 

            ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಶಾಖೆಗಳು ಲಾಭದಲ್ಲಿದ್ದು ಸಂಸ್ಥೆಯ  ಆಡಳಿತ ಮಂಡಳಿಯ, ಶಾಖೆಗಳ ಸಲಹಾ ಸಮಿತಿಗಳ ನಿಸ್ವಾರ್ಥ ಸೇವೆ ಸಿಬ್ಬಂದಿ ವರ್ಗದವರ ಸತತ ಪ್ರಯತ್ನ ಹಾಗೂ ಸಂಸ್ಥೆಯ ಸದಸ್ಯರ ಸಹಕಾರವೆ ಈ ಯಶಸ್ಸಿಗೆ ಕಾರಣ. ಸಂಸ್ಥೆಯು ತನ್ನ ಸದಸ್ಯರನ್ನು ರೂ 1 ಲಕ್ಷದವರೆಗೆ ಅಫಘಾತ ವಿಮೆಗೆ ಒಳಪಡಿಸಿರುತ್ತದೆ.ಅದೆ ರೀತಿ ಸಂಸ್ಥೆಯು ಸಾಮನ್ಯ  ಆರೋಗ್ಯ ಮತ್ತು ಜೀವ ವಿಮೆ ಕಂಪನಿಗಳೊಂದಿಗೆ ಒಡಂಬಡಿಕೆ ಮಾಡಿಕೊಂಡು ಸದಸ್ಯರಿಗೆ ಸೇವೆಯನ್ನು ನೀಡುತ್ತಿದೆ. ಆರ್ಥಿಕ ವರ್ಷದಲ್ಲಿ ಸುಮಾರು 5000 ಮಿಕ್ಕಿ ಜೀವ ಮತ್ತು ಸಾಮನ್ಯ ವಿಮೆಯ ಪಾಲಿಸಿಗಳ ಮಾರಾಟ ಮಾಡಿ ಇದರಲ್ಲಿ 68 ಕ್ಕೂ ಅಧಿಕ ವಿಮೆದಾರರಿಗೆ ರೂ 19 ಲಕ್ಷಕ್ಕೂ ಮೀರಿ ಪರಿಹಾರ ನೀಡಿರುತ್ತೇವೆ. ಅದೇ ರೀತಿ ಸಂಸ್ಥೆಯು ಸಾಮಾನ್ಯ ಮತ್ತು ಜೀವ ವಿಮೆ ಸೌಲಭ್ಯವನ್ನು ತನ್ನ ಸದಸ್ಯರಿಗೆ ನೀಡುತ್ತಿದೆ ಈ ಸೌಲಭ್ಯವನ್ನು ಸದಸ್ಯರು ಸದೂಪಯೋಗ ಪಡಿಸಿಕೊಳ್ಳಬೇಕು ಸಂಸ್ಥೆಯೂ ತನ್ನ ಸಿಬ್ಬಂದಿ ವರ್ಗದವರಿಗೆ ಖಾಸಗಿ ಪಿಂಚಣಿ ಯೋಜನೆಯನ್ನು ಅಳವಡಿಸಿರುತ್ತದೆ ಸಂಸ್ಥೆಯಲ್ಲಿ ವರ್ಷಂತ್ಯಕ್ಕೆ ಸುಮಾರು 360 ಅಧಿಕ ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದು ಇದರಲ್ಲಿ 200ಕ್ಕೂ ಅಧಿಕ ಸಿಬ್ಬಂದಿ ವೇತನ ಶ್ರೇಣಿ ಖಾಯಂಗೊಳಿಸಲಾಗಿದೆ, ಸಂಸ್ಥೆಯು ಸಿಬ್ಬಂದಿಗಳಿಗೆ ಸಾಮನ್ಯ ಮತ್ತು ಆರೋಗ್ಯ ವಿಮೆ ಸೌಲಭ್ಯವನ್ನು ಒದಗಿಸಿರುತ್ತದೆ ಹಾಗು ಸಂಸ್ಥೆಯಲ್ಲಿ ಒಟ್ಟು 64 ಜನ ಪಿಗ್ಮಿ ಸಂಗ್ರಹಕರು ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು, 

     ಅತಿ ಶೀಘ್ರದಲ್ಲಿ ಸಂಸ್ಥೆಯು ಗಡಿರಾಜ್ಯವಾದ ಮಾಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ  30ಕ್ಕೂ ಅಧಿಕ ಶಾಖೆಗಳನ್ನು ಪ್ರಾರಂಭಿಸಲಿದೆ ಹಾಗೂ ತನ್ನ ಕಾರ್ಯವ್ಯಾಪ್ತಿಯನ್ನು ಗೋವಾ ರಾಜ್ಯಕ್ಕೂ ವಿಸ್ತರಿಸಿಕೊಳ್ಳಲಿದೆ ಎಂದರು ಈ ಸಮಯದಲ್ಲಿ ಸಂಸ್ಥೆಯ ಉಪಾಧ್ಯಕ್ಷರಾದ ಸಿದ್ದಗೌಡಾ ಮಗದುಮ, ನಿರ್ದೇಶಿಕಿಯಾದ ಪ್ರೀತಿ ದೊಡವಾಡ, ನಿರ್ದೇಶಕರಾದ ಮಲ್ಲಿಕಾರ್ಜುನ ಕೋರೆ,ಅಣ್ಣಾಸಾಬ ಸಂಕೇಶ್ವರಿ,ಬಸನಗೌಡಾ ಆಸಂಗಿ, ಸುಕುಮಾರ ಚೌಗಲೆ, ಪಿಂಟು ಹಿರೇಕುರಬರ, ಅಮಿತ ಜಾಧವ, ಪ್ರಫುಲ ಶೆಟ್ಟಿ, ಅಶೋಕ ಚೌಗಲಾ, ಬಾಳಪ್ಪಾ ಉಮರಾಣೆ, ಅನೀಲ ಪಾಟೀಲ,ಶೋಭಾ ಜಕಾತೆ, ಶೈಲಜಾ ಪಾಟೀಲ, ಪಾರ್ವತಿ ಧರನಾಯಕ, ಜಯಶ್ರೀ ಮೇದಾರ, ಶ್ರೀಕಾಂತ ಉಮರಾಣೆ, ವಿವೇಕಾನಂದ ಕಮತೆ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ದೇವೆಂದ್ರ ಕರೋಶಿ ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು