ಜಮಖಂಡಿ 15: ನಗರದ ಡಾ. ಬಿ,ಆರ್, ಅಂಬೇಡ್ಕರ ವೃತ್ತದಲ್ಲಿರುವ ಡಾ, ಅಂಬೇಡ್ಕರ ಅವರ ಪುತ್ಥಳಿಗೆ ರುದ್ರಾವಧೂತ ಮಠದ ಪೀಠಾಧಿಕಾರಿ ಕೃಷ್ಣಾನಂದ ಅವಧೂತರು, ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ, ಉಪವಿಧಿಕಾರಿ, ತಹಶೀಲ್ದಾರ, ಹಾಗೂ ಪೋಲಿಸ್ ಇಲಾಖೆಯ ಅಧಿಕಾರಿ ಮತ್ತು ಗಣ್ಯರು ಪೂಜೆಯನ್ನು ಸಲಿಸಿ, ಬೃಹತ್ ಗಾತ್ರದ ಹೂವಿನ ಮಾಲೆಯನ್ನು ಹಾಕಿ ಗೌರವವನ್ನು ಸಲ್ಲಿಸಿದರು.
ಡಾ,ಬಿ,ಆರ್,ಅಂಬೇಡ್ಕರ್ ಅವರ ನೀಲಿಧ್ವಜಾರೋಹನವನ್ನು ಉಪವಿಭಾಗಾಧಿಕಾರಿಗಳು ನೇರವೇರಿಸಿದರು.
ಇದೇ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಪರಮಾನಂದ ಗವರೋಜಿ, ಯೋಜನಾ ಪ್ರಾಧಿಕಾರ ಅಧ್ಯಕ್ಷ ಅನ್ವರ ಮೋಮಿನ, ಸಿದ್ದು ಮೀಸಿ, ಶಾಮರಾವ ಘಾಟಗೆ, ಈಶ್ವರ ವಾಳೆನ್ನವರ, ಬಸವರಾಜ ನ್ಯಾಮಗೌಡ, ಮಹೇಶ ಕೋಳಿ, ಡಿ.ಆರ್ ಶಿರೋಳ, ಮುತ್ತಣ್ಣ ಮೇತ್ರಿ, ನಾಗಪ್ಪ ಹೆಗಡಿ, ಶಶಿಕಾಂತ ತೇರದಾಳ, ರವಿ ದೊಡಮನಿ, ರವಿ ಶಿಂಗೆ, ರಾಜುಕುಮಾರ ಪಾಟೀಲ, ರಮೇಶ ಆಲಬಾಳ, ಶ್ರೀನಾಥ ನವಣಿ, ಪರಶುರಾಮ ಕಾಂಬಳೆ, ಪ್ರಶಾಂತ ಶಂಕ್ರೆಪ್ಪಗೋಳ, ಕುಶಾಲ ವಾಗೋರೆ, ರವಿ ಯಡಹಳ್ಳಿ, ಶಶಿಧರ ದೊಡಮನಿ, ಯಮನೂರ ಮೂಲಂಗಿ, ಮಹೇಶ ಕೋಳಿ, ಸುರೇಶ ನಡುವಿನಮನಿ, ಸಂಗು ದಳವಾಯಿ, ಕಿರಣ ಪಿಸಾಳ, ಅಜೇಯ ಕಡಪಟ್ಟಿ, ಸುನೀಲ ಶಿಂಧೆ, ಸಂತೋಷ ತಳಕೇರಿ, ಬಿ.ಇ.ಓ ಎ.ಕೆ ಬಸಣ್ಣವರ, ಪೌರಾಯುಕ್ತ ಜ್ಯೋತಿಗೀರೀಶ ಎಸ್, ಡಾ.ಜಿ.ಎಸ್ ಗಲಗಲಿ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಪಾಸೋಡಿ, ಸಿಡಿಪಿಒ ಮ್ಯಾಗೇರಿ ಮತ್ತು ವಿವಿಧ ಇಲಾಖೆಯ ಅಧಿಕಾರಿಗಳು, ವಿವಿಧ ಸಂಘಟನೆಯ ಪದಾಧಿಕಾರಿಗಳು ಸೇರಿದಂತೆ ಅನೇಕರು ಇದ್ದರು.