ಡಾ. ನಿಂಗಪ್ಪ ಮತ್ತು ಲಕ್ಷ್ಮಿ ಮುದೇನೂರು ದಂಪತಿಗಳಿಗೆ “ಸಾಹಿತ್ಯ ದಂಪತಿ ಪ್ರಶಸ್ತಿ-2026”
Dr. Ningappa and Lakshmi Mudenur couple to receive “Literary Couple Award-2026”
ಧಾರವಾಡ 02: ಕರ್ನಾಟಕ ವಿದ್ಯಾವರ್ಧಕ ಸಂಘವು, ಲಲಿತಾ ಮತ್ತು ಪ್ರೊ. ಸಿ. ವಿ. ಕೆರಿಮನಿ ದತ್ತಿ ಅಂಗವಾಗಿ ದಿನಾಂಕ: 4-1-2026 ರಂದು ಸಂಜೆ 6 ಗಂಟೆಗೆ ಸಂಘದ ರಾ.ಹ. ದೇಶಪಾಂಡೆ ಸಭಾಭವನದಲ್ಲಿ “ಸಾಹಿತ್ಯ ದಂಪತಿ ಪ್ರಶಸ್ತಿ-2026”ನ್ನು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿಶೇಷವಾಗಿ ಕೃಷಿ ಮಾಡಿದ ಮತ್ತು ಮಾಡುತ್ತಿರುವ ಡಾ. ನಿಂಗಪ್ಪ ಮತ್ತು ಲಕ್ಷ್ಮಿ ಮುದೇನೂರು ದಂಪತಿಗಳಿಗೆ ಪ್ರಶಸ್ತಿಯನ್ನು ನೀಡಲು ಸಂಘವು ನಿರ್ಧರಿಸಿದೆ. ಈ ಪ್ರಶಸ್ತಿಯು 10 ಸಾವಿರ ನಗದು ಬಹುಮಾನ ಮತ್ತು ಪ್ರಶಸ್ತಿ ಫಲಕವನ್ನು ಒಳಗೊಂಡಿರುತ್ತದೆ. ಮಾಜಿ ಸಂಸದರಾದ ಪ್ರೊ. ಆಯ್. ಜಿ. ಸನದಿ ಅವರು ಪ್ರಶಸ್ತಿಪ್ರದಾನವನ್ನು ಮಾಡುವರು ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಪ್ರಕಟಣೆಯಲ್ಲಿ ಕೋರಿದ್ದಾರೆ.
ಡಾ. ನಿಂಗಪ್ಪ ಮತ್ತು ಲಕ್ಷ್ಮಿ ಮುದೇನೂರ ದಂಪತಿಗಳು ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ತಾಲ್ಲೂಕು ಮುದೇನೂರು ಗ್ರಾಮದಲ್ಲಿ 01-06-1970 ರಂದು ಜನಿಸಿದ ಇವರು ಕಾವ್ಯ, ನಾಟಕ, ವಿಮರ್ಶೆ, ಸಂಶೋಧನೆ, ಆತ್ಮಕಥನ, ಸಂಪಾದನೆ ಈ ಪ್ರಕಾರಗಳಲ್ಲಿ ಇಪ್ಪತ್ತಕ್ಕೂ ಹೆಚ್ಚು ಕೃತಿಗಳು ಪ್ರಕಟಗೊಳಿಸಿದ್ದಾರೆ. ಕೊಯಿಮತ್ತೂರು ಮತ್ತು ತಿರುಪತಿಯಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ, ನವದೆಹಲಿ ಆಯೋಜಿಸಿದ್ದ ‘ಪೊಯಿಟ್ರಿ ಫೆಸ್ಟಿವಲ್’ ನಲ್ಲಿ ಕರ್ನಾಟಕದಿಂದ ಪ್ರತಿನಿಧಿಸಿ ಮತ್ತು ಮೈಸೂರು ದಸರಾ, ಹಂಪಿ ಉತ್ಸವ, ರನ್ನ ಉತ್ಸವ, ಲಕ್ಕುಂಡಿ ಉತ್ಸವಗಳಲ್ಲಿ; ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಕವಿತೆ ವಾಚಿಸಿರುವರು. ಕರ್ನಾಟಕ ಸಾಹಿತ್ಯ ಅಕಾಡೆಮಿ, ಜಾನಪದ ಅಕಾಡೆಮಿ, ಕನ್ನಡ ಸಾಹಿತ್ಯ ಪರಿಷತ್ತು ಹಾಗೇ ಹಲವು ವಿಶ್ವವಿದ್ಯಾಲಯಗಳ ಮುಖ್ಯ ಉಪನ್ಯಾಸಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ವಿಷಯ ಮಂಡಿಸಿರುವರು.
ಇವರು ಹಲವು ಬರಹಗಳು ವಿಶ್ವವಿದ್ಯಾಲಯಗಳ ಪದವಿಗೆ ಪಠ್ಯಗಳಾಗಿವೆ. ಕರ್ನಾಟಕ ಭಾರತಿ, ವಿದ್ಯಾರ್ಥಿ ಭಾರತಿ, ಕನ್ನಡ ಭಾರತಿ, ಅರಿವು ಅಸ್ಮಿತೆ, ಸುಗತ ಸಂಚಿಕೆಗಳ ಸಂಪಾದಕೀಯ ಮಂಡಳಿ ಸದಸ್ಯರಾಗಿರುವಿರಿ. 2005ರ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ‘ಬುರ್ರಕಥಾ ಈರಮ್ಮ : ಅಲೆಮಾರಿಯ ಆತ್ಮಕಥನ’ ಕೃತಿ ತೆಲುಗಿಗೂ ಅನುವಾದಗೊಂಡು ಪ್ರಕಟವಾಗಿದೆ.
ಡಾ. ನಿಂಗಪ್ಪ ಮುದೇನೂರ ಸಾಹಿತ್ಯಿಕ, ಸಾಂಸ್ಕೃತಿಕ, ಸಾಂಘಿಕ ಕಾರ್ಯಗಳ ಹಿಂದೆ ಅವರ ಬೆನ್ನ ಹಿಂದಿನ ಬೆಳಕಾಗಿ ದುಡಿಯುತ್ತಿರುವವರು ಅವರ ಪತ್ನಿ ವರಮಹಾಲಕ್ಷ್ಮಿ ಬಿ.ಎಂ ಅವರು ಮೂಲತಃ ದಾವಣಗೆರೆಯವರು. ಹುಟ್ಟಿದ್ದು ಆಗಸ್ಟ್ 02,1974. ‘ಲಕ್ಷ್ಮಿ ಮುದೇನೂರು’ ಎಂಬುವ ಕಾವ್ಯನಾಮದಿಂದ ಈಗಾಗಲೇ ಹಲವು ಕವಿತೆಗಳನ್ನು ಬರೆದು ನಾಡಿಗೆ ಪರಿಚಿತರಾದವರು. ಇಂತಿ ನಿನ್ನ ಹಕ್ಕಿ, ಬೆಳಕಿನ ಹಾಡುಗಳು, ನನ್ನೆದೆಯ ಕೊಳಲು ಪ್ರಕಟಿತ ಕವನ ಸಂಕಲನಗಳು. ‘ಇಂತಿ ನಿನ್ನ ಹಕ್ಕಿಗೆ’ 2021 ನೇ ಸಾಲಿನ ಗುಲ್ಬರ್ಗಾ ವಿಶ್ವವಿದ್ಯಾಲಯದ ರಾಜ್ಯೋತ್ಸವ ಪುಸ್ತಕ ಬಹುಮಾನವು ಸಂದಿದೆ. ‘ಬೆಳಕಿನ ಹಾಡುಗಳು’ ಸಂಕಲನಕ್ಕೆ ಧಾರವಾಡ ಬೇಂದ್ರೆ ನುಡಿಸಿರಿ ಪುಸ್ತಕ ಬಹುಮಾನ ಸಂದಿದೆ. ವಿಜ್ಞಾನ ಮತ್ತು ಪತ್ರಿಕೋದ್ಯಮದಲ್ಲಿ ಬಿ.ಎಸ್.ಸಿ ಮತ್ತು ಸ್ನಾತಕೋತ್ತರ ಡಿಪ್ಲೋಮಾ ಪದವೀಧರೆಯಾಗಿದ್ದಾರೆ.
ಸಮಾಜಕ್ಕೆ ಆದರ್ಶ ದಂಪತಿಗಳು ಎನಿಸಿದ ಇವರಿಗೆ ಲಲಿತಾ ಮತ್ತು ಪ್ರೊ. ಸಿ.ವ್ಹಿ. ಕೆರಿಮನಿ ದಂಪತಿಗಳ ಹೆಸರಿನಲ್ಲಿ ನೀಡುತ್ತಿರುವ ಸಾಹಿತ್ಯ ದಂಪತಿ ಪ್ರಶಸ್ತಿಗೆ ಕರ್ನಾಟಕ ವಿದ್ಯಾವರ್ಧಕ ಸಂಘ ಇವರನ್ನು ಆಯ್ಕೆ ಮಾಡಿ 4-1-2026 ರಂದು ದತ್ತಿ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 