ಆಸ್ಪತ್ರೆಗಳಿಗೆ ಅಗತ್ಯ ಸಿಬ್ಬಂದಿ, ಸೌಲಭ್ಯಗಳನ್ನು ಪೂರೈಸಲು ಸರ್ಕಾರಕ್ಕೆ ಪತ್ರ : ಡಾ.ನಾಗಲಕ್ಷ್ಮಿ ಚೌಧರಿ

ಆಸ್ಪತ್ರೆಗಳಿಗೆ ಅಗತ್ಯ ಸಿಬ್ಬಂದಿ, ಸೌಲಭ್ಯಗಳನ್ನು ಪೂರೈಸಲು ಸರ್ಕಾರಕ್ಕೆ ಪತ್ರ : ಡಾ.ನಾಗಲಕ್ಷ್ಮಿ ಚೌಧರಿ Dr. Nagalakshmi Chaudhary writes to the government to provide necessary staff and facilities to hosp

ಲೋಕದರ್ಶನ ವರದಿ 

ಧಾರವಾಡ 18: ಪ್ರತಿ ಜಿಲ್ಲೆಗೆ ಭೇಟಿ ನೀಡಿದಾಗ ಸಾರ್ವಜನಿಕರು, ಸಿಬ್ಬಂದಿಗಳು ಜಿಲ್ಲಾ ಆಸ್ಪತ್ರೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಬಗ್ಗೆ ಅನೇಕ ದೂರುಗಳನ್ನು ನೀಡುತ್ತಾರೆ. ಆದರೆ ಧಾರವಾಡ ಜಿಲ್ಲಾ ಆಸ್ಪತ್ರೆಗೆ ಇಂದು ಭೇಟಿ ನೀಡಿದಾಗ ಆಸ್ಪತ್ರೆ ಬಂದಿರುವ ಗ್ರಾಮೀಣ ಭಾಗದ ಅನೇಕ ಮಹಿಳಾ, ಪುರುಷ ರೋಗಿಗಳು ಮತ್ತು ಸಂಬಂಧಿಕರು ಜಿಲ್ಲಾ ಆಸ್ಪತ್ರೆಯ ಬಗ್ಗೆ, ಜಿಲ್ಲಾ ಶಸ್ತ್ರಚಿಕಿತ್ಸಕರ, ವೈದ್ಯಾಧಿಕಾರಿಗಳ ಬಗ್ಗೆ ಉತ್ತಮವಾದ ಅಭಿಪ್ರಾಯವನ್ನು  ನೀಡಿದ್ದಾರೆ. ಇದು ಅತ್ಯಂತ ಸಂತೋಷದ ಸಂಗತಿಯಾಗಿದ ಎಂದು ಧಾರವಾಡ ಜಿಲ್ಲಾ ಆಸ್ಪತ್ರೆಯ ಬಗ್ಗೆ ತಮ್ಮ ಮೆಚ್ಚುಗೆಯನ್ನು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಅವರು ವ್ಯಕ್ತಪಡಿಸಿದರು. ಅವರು ಇಂದು ಬೆಳಿಗ್ಗೆ ಧಾರವಾಡ ಜಿಲ್ಲಾ ಆಸ್ಪತ್ರೆಗೆ ಹಾಗೂ ಜಿಲ್ಲಾ ಆಸ್ಪತ್ರೆಯ ತಾಯಿ ಮಕ್ಕಳ ಆಸ್ಪತ್ರೆಗೆ ಭೇಟಿ ನೀಡಿ, ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. 

ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿದ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರು, ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆಗಾಗಿ ಆಗಮಿಸಿದ್ದ ಸಾರ್ವಜನಿಕರನ್ನು ಮಾತನಾಡಿಸಿ ಆಸ್ಪತ್ರೆಯಲ್ಲಿ ವೈಧ್ಯಕೀಯ ಸಿಬ್ಬಂದಿಗಳ ಸ್ಪಂಧನೆ, ಚಿಕಿತ್ಸೆ, ಉಚಿತ ಓಷಧಿ ವಿತರಣೆ ಕುರಿತು ಮಾಹಿತಿ ಪಡೆದುಕೊಂಡರು. ಆಸ್ಪತ್ರೆಯ ಹೆರಿಗೆ ವಿಭಾಗಕ್ಕೆ ಭೇಟಿ ನೀಡಿ, ಬಾಣಂತಿಯರನ್ನು ಮಾತನಾಡಿಸಿ, ಸೌಲಭ್ಯ ಹಾಗೂ ವೈದ್ಯರ ಚಿಕಿತ್ಸೆ ಸ್ಪಂದನೆ ಕುರಿತು ಅಭಿಪ್ರಾಯ ಸಂಗ್ರಹಿಸಿರುವದಾಗಿ ತಿಳಿಸಿದರು. ತಾಯಿ ಮತ್ತು ಮಗುವಿನ ಜೀವವನ್ನು ಉಳಿಸುವುದು ಮಹತ್ವದ ಕಾರ್ಯ. ಅದನ್ನು ಧಾರವಾಡ ಜಿಲ್ಲಾ ಆಸ್ಪತ್ರೆಯ ವೈದ್ಯರು ಅತ್ಯಂತ ಕಳಕಳಿಯಿಂದ ಮಾಡುತ್ತಿದ್ದಾರೆ. ಇದು ಶ್ಲಾಘನೀಯ ಕೆಲಸ, ಒಂದು ತಿಂಗಳಲ್ಲಿ 550 ಸುರಕ್ಷಿತ ಹೆರಿಗೆ ಮಾಡಿಸಿದ್ದಾರೆ. ಅದರಲ್ಲಿ 82 ಜನ ತುಂಬಾ ಸೀರಿಯಸ್ ಆಗಿರುವ ತಾಯಿ ಮತ್ತು ಮಗುವಿನ  ಜೀವವನ್ನು ಉಳಿಸಿದ್ದಾರೆ. ಇದು ತುಂಬಾ ಹೆಮ್ಮೆಯನ್ನಿಸುತ್ತದೆ. ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಅವರು ಹೇಳಿದರು. ಸಖಿ ಒನ್ ಕೇಂದ್ರಕ್ಕೆ ಭೇಟಿ ನೀಡಿ, ದಾಖಲಾತಿಗಳನ್ನು ಪರೀಶೀಲಿಸಿ, ಸಾರ್ವಜನಿಕರ ಸ್ಪಂದನೆ ಹಾಗೂ ಅರಿವು ಮೂಡಿಸುವ ಕುರಿತು ಸಿಬ್ಬಂದಿಗಳೊಂದಿಗೆ ಚರ್ಚಿಸಿ, ಮಾಹಿತಿ ಪಡೆಯಲಾಗಿದೆ  ಮುಂದಿನ ದಿನಗಳಲ್ಲಿ ಸಾರ್ವಜನಿಕರಿಗೆ ಸಖಿ ಒನ್ ಕೇಂದ್ರದ ಕುರಿತು ಅರಿವು ಕಾರ್ಯಕ್ರಮಗಳನ್ನು ಆಯೋಜಿಸಲು ಕ್ರಮವಹಿಸಲಾಗುವುದೆಂದು ಅವರು ತಿಳಿಸಿದರು. 

ಕಳೆದ 3 ವರ್ಷಗಳಲ್ಲಿ 18 ವರ್ಷ ಕಡಿಮೆ ಇರುವ ಮಕ್ಕಳ 83 ಪೋಕ್ಸೋ ಕೇಸ್ ಪ್ರಕರಣಗಳು ದಾಖಲಾಗಿವೆ. ಸಖಿ ಒನ್ ಸ್ಟಾಪ್ ಕೇಂದ್ರದಿಂದ ದಾಖಲೆಗಳನ್ನು ತೆಗೆದುಕೊಂಡಿದ್ದೇನೆ. ಇದರಲ್ಲಿ 12 ಜನ ಮಕ್ಕಳಿಗೆ ಬಾಲ್ಯವಿವಾಹ ಆಗಿ ಗರ್ಭಿಣಿ ಆಗಿದ್ದಾರೆ, 33 ಜನ ಅಪ್ರಾಪ್ತ ಹೆಣ್ಣು ಮಕ್ಕಳು ಅತ್ಯಾಚಾರಕ್ಕೆ ಒಳಪಟ್ಟು ತಾಯಿ ಆಗಿದ್ದಾರೆ, ಮತ್ತು 22 ಜನ ಮಕ್ಕಳು ಬೇಡ ಎಂದು ಸ್ವ-ಇಚ್ಛೆಯಿಂದ ಗರ್ಭಪಾತಕ್ಕೆ ಒಳಪಟ್ಟಿದ್ದಾರೆ. ಇಂತಹ ಅಮಾನವಿಯ ಪ್ರಕರಣಗಳು ನಡೆಯುತ್ತಿರುವುದು ದೊಡ್ಡ ದುರಂತ ಮತ್ತು ಆಂತಕ ಪಡುವ ಬೆಳವಣಿಗೆ ಆಗಿದೆ ಎಂದು ಅವರು ಹೇಳಿದರು. ಕರ್ನಾಟಕ ರಾಜ್ಯದಲ್ಲಿ ಡಿ.ಗ್ರೂಪ್, ನರ್ಸ್‌, ಡಾಕ್ಟರ​‍್ಸ‌ ಕೊರತೆ ಇದೆ ಮಾಹಿತಿ ಪಡೆದುಕೊಂಡಿದ್ದೇನೆ. ಮತ್ತು ಒಖಋ ಸ್ಕ್ಯಾನಿಂಗ್ ಕೊರತೆ ಇದೆ ಇದನ್ನು ರಾಜ್ಯ ಸರ್ಕಾರದ ಗಮನಕ್ಕೆ ತರುತ್ತೇನೆ  ಎಂದು ಅವರು ಹೇಳಿದರು. ಜಿಲ್ಲಾ ಆಸ್ಪತ್ರೆಯ ಭೇಟಿ ಸಂದರ್ಭದಲ್ಲಿ ಅನೇಕ ಸಾರ್ವಜನಿಕರು ತಮ್ಮ ಮನವಿಗಳನ್ನು ಸಲ್ಲಿಸಿದ್ದು, ಈ ಕುರಿತು ಪರೀಶೀಲಿಸಿ ಸಂಬಂಧ ಪಟ್ಟ ಇಲಾಖೆಗಳಿಗೆ ಪತ್ರ ಬರೆದು ಕ್ರಮ ವಹಿಸಲಾಗುವುದೆಂದು ಅವರು ತಿಳಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಆಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಸಂಗಪ್ಪ ಗಾಬಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ಡಾ. ಎಚ್‌.ಎಚ್‌.ಕುಕನೂರ, ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಎಸ್‌.ಎಂ.ಹೊನಕೇರಿ ಸೇರಿದಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವಿವಿಧ ಅಧಿಕಾರಿಗಳು, ಜಿಲ್ಲಾ ಆಸ್ಪತ್ರೆಯ ವೈದ್ಯಾಧಿಕಾರಿಗಳು, ವೈದ್ಯಕೀಯ ಸಿಬ್ಬಂದಿಗಳು ಉಪಸ್ಥಿತರಿದ್ದರು.