ಹುನಗುಂದ06: ಹುಬ್ಬಳ್ಳಿಯ 'ಕರ್ನಾಟಕ ದರ್ಶನ ಸೇವಾಭಿವೃದ್ಧಿ ಸಂಘ'ದವರು ಪ್ರತಿವರ್ಷವು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಗುರುತಿಸಿ ಅವರಿಗೆ ರಾಷ್ಟ್ರೀಯ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುತ್ತಿದೆ. 2020ನೇ ಸಾಲಿನಲ್ಲಿ ಡಾ. ಮುರ್ತುಜಾ ಬ. ಒಂಟಿ ಅವರ ಶೈಕ್ಷಣಿಕ ಹಾಗೂ ಸಾಹಿತ್ಯಿಕ ಸೇವೆಯನ್ನು ಗಮನಿಸಿ ' ಜ್ಞಾನ ಭೂಷಣ ರಾಷ್ಟ್ರೀಯ ಪ್ರಶಸ್ತಿ'ಗೆ ಆಯ್ಕೆ ಮಾಡಿ ಫೆ. 02ರಂದು ಗದುಗಿನ ಕೆ.ಎಚ್ ಪಾಟೀಲ ಸಭಾಭವನದಲ್ಲಿ ಪರಮ ಪೂಜ್ಯ ಕಲ್ಲಯ್ಯಜ್ಜನವರು ವೀರೇಶ್ವರ ಪುಣ್ಯಾಶ್ರಮ ಗದಗ, ಮನಿಪ್ರ ಕಾಲಜ್ಞಾನಿ ಬ್ರಹ್ಮ ಸದ್ಗುರು ಶರಣಬಸವ ಮಹಾಸ್ವಾಮಿಗಳು ಗಜೇಂದ್ರಗಡ, ಶ್ರೀಮನಿಪ್ರ ಶಿವಾನಂದ ಚರಮೂರ್ತಿ ಶಾಂತರುದ್ರ ಮುನಿ ಮಹಾಸ್ವಾಮಿಗಳು ಕರಡಕಲ್ ಪೂಜ್ಯರ ದಿವ್ಯಸಾನಿದ್ಯ, ಕರ್ನಾಟಕ ಉಚ್ಛನ್ಯಾಯಾಲದ ವಿಶ್ರಾಂತ ನ್ಯಾಯಮೂರ್ತಿಗಳಾದ ಅರಳಿ ನಾಗರಾಜ ಅವರ ಸಮ್ಮುಖದಲ್ಲಿ ಜರುಗಿದ ಸಮಾರಂಭದಲ್ಲಿ ಡಾ. ಮುರ್ತುಜಾ ಬ. ಒಂಟಿ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಿ ಸತ್ಕರಿಸಲಾಯಿತು.