ಗದಗ 04: ಕೊರೊನಾ ವೈರಸ್ ಶಂಕಿತ ಪ್ರಕರಣಗಳ ಪರೀಕ್ಷೆ ಹಾಗೂ ವೈದ್ಯಕೀಯ ಚಿಕಿತ್ಸೆಯ ಕಾರ್ಯನಿರ್ವಹಿಸುತ್ತಿರುವ ವೈದ್ಯರು, ನರ್ಸ ಹಾಗೂ ಪ್ಯಾರಾ ಮೆಡಿಕಲ್ ಸಿಬ್ಬಂದಿಗಳ ಸುರಕ್ಷತೆಗಾಗಿ ಗದಗ ನಗರದ ಡಾ. ಸಂಕನೂರ ಆಸ್ಪತ್ರೆಯಿಂದ ತಯಾರಿಸಲಾದ ಮಾಸ್ಕ ಶೀಲ್ಡಗಳನ್ನು ಗದಗ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ಜಿಲ್ಲಾಡಳಿತ ಭವನದಲ್ಲಿ ವಿತರಿಸಿದರು.
ವಿಧಾನ ಪರಿಷತ ಸದಸ್ಯ ಎಸ್.ವಿ.ಸಂಕನೂರ ಮಾತನಾಡಿ ಡಾ. ಸಂಕನೂರ ಆಸ್ಪತ್ರೆಯಿಂದ ಮಾಸ್ಕ ಶೀಲ್ಡಗಳನ್ನು ಉಚಿತವಾಗಿ ವಿತರಿಸಲಾಗುತ್ತಿದೆ. ಡಾ. ಪ್ರಕಾಶ ಸಂಕನೂರ, ಸಂಕನೂರ ನಸರ್ಿಂಗ ಅಧೀಕ್ಷಕ ವಿನ್ಸೆಂಟ ಇವರ ಮಾರ್ಗದರ್ಶನದಲ್ಲಿ ಆಸ್ಪತ್ರೆಯ ಸಿಬ್ಬಂದಿಗಳು ಈ ಮಾಸ್ಕಗಳನ್ನು ತಯಾರಿಸುತ್ತಿದ್ದು 1000 ಮಾಸ್ಕಗಳ ವಿತರಿಸುವ ಗುರಿ ಇದ್ದು ಆ ಪೈಕಿ 600 ಮಾಸ್ಕಗಳನ್ನು ಈಗ ವಿತರಿಸಲಾಗುತ್ತಿದೆ. ಇದರಿಂದ ಕೊರೊನಾ ಕುರಿತ ಚಿಕಿತ್ಸೆ ನೀಡುವ ವೈದ್ಯರು ಮತ್ತು ನಸರ್ಿಂಗ ಸಿಬ್ಬಂದಿಯ ಸ್ವ ಸುರಕ್ಷತೆ ಸಾಧ್ಯವಾಗಲಿದೆ ಎಂಬ ಆಶಯ ವ್ಯಕ್ತಪಡಿಸಿದರು.
ಕೊರೊನಾ ಚಿಕತ್ಸೆಗಾಗಿ ಗುರುತಿಸಲಾದ ಜಿಲ್ಲೆಯ ಆಯುಷ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯರು ಹಾಗೂ ಸಿಬ್ಬಂದಿಗಳಿಗೆ ಎಸ್.ವಿ.ಸಂಕನೂರ ಮಾಸ್ಕ ಶೀಲ್ಡ ವಿತರಿಸಿದರು. ಜಿಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸತೀಶ ಬಸರೀಗಡದ, ಜಿಮ್ಸ ನಿದರ್ೆಶಕ ಡಾ. ಪಿ.ಎಸ್.ಭೂಸರೆಡ್ಡಿ, ಅಲ್ಲದೇ ಮೊಹನ ಮಾಳಶೆಟ್ಟಿ ಸೇರಿದಂತೆ ಇತರರು ಇದ್ದರು.