ಲೋಕದರ್ಶನವರದಿ
ರಾಣೇಬೆನ್ನೂರು08: ತಾಲೂಕಿನ ಚಳಗೇರಿ ಗ್ರಾಮದ ಸಿಇಎಸ್ ಪ್ರೌಢಶಾಲೆಯಲ್ಲಿ ನಡೆದ ಡಾ| ರಾಧಾಕೃಷ್ಣನ್ ಜನ್ಮದಿನದ ಅಂಗವಾಗಿ ಶಿಕ್ಷಕರ ದಿನವನ್ನು ಸರಳವಾಗಿ ಆಚರಿಸಲಾಯಿತು. ಈ ವೇಳೆ ಮುಖ್ಯ ಶಿಕ್ಷಕ ಜೆ.ಬಿ ಗುಡಗೂರ ಮಾತನಾಡಿ, ಕತ್ತಲು ತುಂಬಿದ ಬಾಳಿನಲ್ಲಿ ಬೆಳಕೆಂಬ ಜ್ಞಾನದ ಬೀಜವನ್ನು ಬಿತ್ತಿ ಪೋಷಿಸುವ ಪವಿತ್ರ ಶಿಕ್ಷಕ ವೃತ್ತಿಯಾಗಿದೆ. ಅರ್ಪಣಾ ಭಾವದಿಂದ ಮಕ್ಕಳಿಗೆ ಬೋಧಿಸುವ ಮೂಲಕ ನಾಲ್ಕು ಗೋಡೆಗಳ ಮಧ್ಯೆ ರಾಷ್ಟ್ರದ ಭವಿಷ್ಯವನ್ನು ರೂಪಿಸಲು ಬದ್ಧರಾಗಬೇಕು ಎಂದರು.
ಉಪನ್ಯಾಸಕ ಎನ್.ಎಸ್ ರೇವಣ್ಣನವರ ಡಾ| ರಾಧಾಕೃಷ್ಣನ್ರವರ ಜೀವನ ಕುರಿತು ಉಪನ್ಯಾಸ ನೀಡಿದರು. ಮುಖ್ಯ ಶಿಕ್ಷಕಿ ಸಿ.ಆರ್ ಪಳಗಿ, ರಾಜು ಎಂ.ಎನ್., ಕಾಂತೇಶ್ ಮಾದಾಪುರ, ರೇಖಾ ಎಚ್.ಎಚ್., ನಾಗರತ್ನಾ ಬಿ, ಶಾಂತಾ ಮಠದ ಹಾಗೂ ವಿದ್ಯಾಥರ್ಿಗಳು ಇದ್ದರು