ಗೋಕಾಕ 12: ಭಾರತೀಯ ಹ್ಯೂಮನ್ ರೈಟ್ಸ್ ಕೌನ್ಸಿಲ್‌ದ ಬೆಳಗಾವಿ ಜಿಲ್ಲೆಯ ಅಧ್ಯಕ್ಷರನ್ನಾಗಿ ಡಾ. ಹನುಮಂತ್ ಕಮತಗಿ ಹಾಗೂ ಉಪ ಅಧ್ಯಕ್ಷರನ್ನಾಗಿ ಸವದತ್ತಿ ತಾಲೂಕಿನ ಶಿರಸಂಗಿಯ ಎಂ.ಕೆ. ನದಾಫ್ ಅವರು ಸರ್ವಾನುಮತದಿಂದ ಆಯ್ಕೆಗೊಂಡಿದ್ದಾರೆ.
ದೆಹಲಿಯ ಮುಖ್ಯ ಕಚೇರಿಯಲ್ಲಿ ನಡೆದ ಕಾರ್ಯಕಾರಿಯ ಸಭೆಯಲ್ಲಿ ಭಾರತೀಯ ಹೂಮೆನ್ ರೈಟ್ಸ್ ಕೌನ್ಸಿಲ್‌ದ ರಾಜ್ಯ ಅಧ್ಯಕ್ಷರಾದ ಡಾ: ನಾರಾಯಣ ಈಳಿಗೇರ ಇವರು ಆಯ್ಕೆ ಮಾಡಿ ಘೋಷಣೆ ಮಾಡಿದ್ದಾರೆ. ಈ ಸಭೆಯಲ್ಲಿ ನ್ಯೂ ದೆಲ್ಲಿಯ ಕೌನ್ಸಿಲ್ ಸಂಸ್ಥಾಪಕರಾದ ಡಾ: ಪೂರ್ಣಚಂದ್ರ ಸಾವು ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.