ಕಡ್ಲೇವಾಡ ಗ್ರಾಮದಲ್ಲಿ ಡಾ. ಅಮೃತಾನಂದ ಶ್ರೀಗಳ ಆಧ್ಯಾತ್ಮಿಕ ಪ್ರವಚನ
ದೇವರಹಿಪ್ಪರಗಿ, 18; ತಾಲೂಕಿನ ಕಡ್ಲೇವಾಡ ಪಿಸಿಎಚ್ ಗ್ರಾಮದಲ್ಲಿ ಮಹಾಶಿವರಾತ್ರಿಯ ಹಬ್ಬದ ಪ್ರಯುಕ್ತ ವಿಜಯಪುರ ಜ್ಞಾನ ಯೋಗಾಶ್ರಮದ ಪ.ಪೂ.ಲಿಂ ಸಿದ್ದೇಶ್ವರ ಸ್ವಾಮೀಜಿಯವರು ಶಿಷ್ಯರಾದ ಡಾ. ಅಮೃತಾನಂದ ಶ್ರೀಗಳ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮ ಸುಮಾರು 14 ದಿನಗಳ ಕಾಲ ನಡೆಯಲಿದ್ದು, ಫೆ.13-26 ರವರೆಗೆ ಬೆಳಗ್ಗೆ 6:30 ರಿಂದ 7:30ರ ವರೆಗೆ ಜರುಗಲಿದೆ.
ಮಂಗಳವಾರ ಬೆಳಗ್ಗೆ ನಡೆದ ಆಧ್ಯಾತ್ಮಿಕ ಪ್ರವಚನದಲ್ಲಿ ಮೃತ್ಯುಂಜಯ ಮಂತ್ರದ ಕುರಿತು ಹಾಗೂ ಹುಟ್ಟು ಹಾಗೂ ಸಾವಿನ ನಡುವೆ ಮನುಷ್ಯ ತನ್ನ ಜೀವಿತಾವಧಿಯಲ್ಲಿ ದುರಾಸೆಯಿಂದ ಬದುಕದೆ ನೆಮ್ಮದಿಯ ಜೀವನ ಕಟ್ಟಿಕೊಳ್ಳಲು ಜೀವನದ ಸಪ್ತ ಸೂತ್ರಗಳ ಕುರಿತು ತಮ್ಮದೇ ಆದ ವಾಣಿಯಲ್ಲಿ ತಿಳಿಸಿಕೊಟ್ಟರು. ಜ್ಞಾನಯೋಗಿ ಸಿದ್ದೇಶ್ವರ ಶ್ರೀಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಚಾಲನೆ ನೀಡಲಾಯಿತು.ಇದೇ ಸಂದರ್ಭದಲ್ಲಿ ನಿವಾಳಖೇಡ ಗ್ರಾಮದ ಸಿದ್ದಕೃಪಾ ಮಲ್ಲಿಕಾರ್ಜುನ ಮಹಾಂತಮಠದ ಡಾ.ಬಸವಾನಂದ ಶ್ರೀಗಳು, ಬೋರೆಗಾವದ ಬಸವೇಶ್ವರ ಶ್ರೀಗಳು, ಕಡ್ಲೇವಾಡ ಗ್ರಾಮದ ಅಮೋಘಸಿದ್ದ ಶ್ರೀಗಳು, ಗೋವಿಂದ ಶ್ರೀಗಳು, ನಿಂಗರಾಯ ಮಹಾರಾಜರು, ಗ್ರಾಮದ ಪ್ರಮುಖರಾದ ಸೋಮನಗೌಡ ಪಾಟೀಲ, ನಾಗಣ್ಣ ಮುಳಜಿ, ಸಿದ್ದನ ಸಾಹುಕಾರ ಚೌಡಕಿ, ಸಾಹೇಬಗೌಡ ರೆಡ್ಡಿ, ವಿಠ್ಠಲ ದೇಗಿನಾಳ, ವಿದ್ಯಾಧರ ಸಂಗೋಗಿ, ಬಸವರಾಜ ಇಮ್ಮನ, ಯಲ್ಲಾಲಿಂಗ ಗಣಜಲಿ, ದೇವಾನಂದ ಹೂಗಾರ, ಪ್ರಚಾರ ಸಮಿತಿಯ ಅಧ್ಯಕ್ಷರಾದ ಸಾಯಿಕುಮಾರ ಬಿಸನಾಳ ಸೇರಿದಂತೆ ಕಡ್ಲೇವಾಡ ಗ್ರಾಮ ಸೇರಿದಂತೆ ಚಿಕ್ಕರೂಗಿ, ಮುಳಸಾವಳಗಿ, ನಿವಾಳಖೇಡ ಅನೇಕ ಗ್ರಾಮಗಳ ಜನರು ಭಾಗವಹಿಸಿದ್ದರು.ಸುತ್ತಮುತ್ತಲಿನ ಗ್ರಾಮದ ಜನತೆ ಇದರ ಸದುಪಯೋಗ ಪಡಿಸಿಕೊಳ್ಳಲು ಕಡ್ಲೇವಾಡ ಗ್ರಾಮದ ಆಧ್ಯಾತ್ಮಿಕ ಪ್ರವಚನ ಸಮಿತಿಯ ಪದಾಧಿಕಾರಿಗಳು ತಿಳಿಸಿದರು