ಡಾ.ಗೊ.ರು.ಚ ಎಂದರೆ ನಡೆದಾಡುವ ವಿಶ್ವಕೋಶ

Dr. Go.ru.Channabasappa

ಸಮ್ಮೇಳನದಲ್ಲಿ ಬೆಳಗಾವಿ ಹುಕ್ಕೇರಿ ಚಂದ್ರಶೇಖರ ಸ್ವಾಮೀಜಿ ಅವರಿಂದ ಗೌರವ ಸನ್ಮಾನ  

ಮಂಡ್ಯ :87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಡಾ. ಗೊ.ರು.ಚನ್ನಬಸಪ್ಪನವರಿಗೆ ಬೆಳಗಾವಿ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರಿಂದ ಮಂಡ್ಯ ನಗರದಲ್ಲಿ ಜರುಗುತ್ತಿರುವ ಸಾಹಿತ್ಯ ಸಮ್ಮೇಳನದ ಉತ್ಸವದಲ್ಲಿ ಗೌರವಿಸಿ ಸನ್ಮಾನಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರು, ಡಾ. ಗೊ.ರು.ಚನ್ನಬಸಪ್ಪನವರು ಎಂದರೆ ನಡೆದಾಡುವ ವಿಶ್ವಕೋಶ. ಇವತ್ತು ಮಂಡ್ಯದಲ್ಲಿ ಜರುಗುತ್ತಿರುವ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದು ನಮಗೆ ಅತೀವ ಸಂತೋಷ ತಂದಿದೆ ಎಂದರು.ಇದೇ ಸಂದರ್ಭದಲ್ಲಿ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಡಾ. ನಿರ್ಮಲಾನಂದ ಸ್ವಾಮೀಜಿ ಆಶೀರ್ವದಿಸಿ ಗೊ.ರು.ಚ ಎಂದರೆ ಕರ್ನಾಟಕದ ಹೆಮ್ಮೆ. ಬೆಳಗಾವಿಯಿಂದ ಬಂದು ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರು ಡಾ. ಗೊ.ರು.ಚ ಅವರನ್ನು ಸನ್ಮಾನಿಸಿದ್ದು ಸಂತೋಷ ತಂದಿದೆ. ಗಡಿ ಭಾಗದಲ್ಲಿ ಕನ್ನಡವನ್ನು ಉಳಿಸಿ, ಬೆಳೆಸುವಲ್ಲಿ ಹೆಚ್ಚು ಕಾರ್ಯ ಮಾಡುತ್ತಿರುವ ಶ್ರೀಗಳು ರಾಜ್ಯೋತ್ಸವದಲ್ಲಿ ಲಕ್ಷಾಂತರ ಜನರಿಗೆ ಹೋಳಿಗೆ ಸಿಹಿ ಊಟ ಬಡಿಸಿದ ಇತಿಹಾಸ ಇದೆ ಎಂದರು. 

ಸನ್ಮಾನ ಸ್ವೀಕರಿಸಿ ಮಾತನಾಡಿದ ಗೊ.ರು.ಚ ಅವರು, ಬೆಳಗಾವಿಯಿಂದ ಇಡೀ ಕರ್ನಾಟಕದ ಮೂಲೆ ಮೂಲೆಯಿಂದ ಜನರು ಮಂಡ್ಯಕ್ಕೆ ಬಂದಿದ್ದಾರೆ. ಇವತ್ತು ಬೆಳಗಾವಿ ಹುಕ್ಕೇರಿ ಹಿರೇಮಠದ ಶ್ರೀಗಳು ಸನ್ಮಾನಿಸಿ ಗೌರವ ತೋರಿಸಿರುವುದು ಸಂತೋಷ ತಂದಿದೆ. ನಾವೆಲ್ಲ ಕನ್ನಡಕ್ಕಾಗಿ ಶ್ರಮಿಸೋಣ ಎಂದರು.ಜಿಲ್ಲಾ ಉಸ್ತುವಾರಿ ಸಚಿವ ಚಲುವ ನಾರಾಯಣಸ್ವಾಮಿ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಮಹೇಶ್ ಜೋಶಿ, ಗೋವಾ ರಾಜ್ಯದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಸಿದ್ದಣ್ಣ ಮೇಟಿ, ಮಂಡ್ಯದ ವಿಶ್ವ ಮಾನವ ಕ್ಷೇತ್ರದ ಶ್ರೀ ಪುರುಷೋತ್ತಾರಾಮ ಸ್ವಾಮೀಜಿ, ಡಾ.ದೇವರಾಜ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.