ಡಾ.ಜ್ಞಾನೇಶ ಮೋರಕರ್ ಕಾರ್ಯಸಾಧನೆಗೆ ಪ್ರಶಸ್ತಿಯ ಗರಿ
Dr. Gnanesh Morkar receives award for his work
ಬೆಳಗಾವಿ 23: ಕರ್ನಾಟಕ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ, ಎಸ್.ಡಿ.ಎಂ ಧಾರವಾಡ ಮತ್ತು ಕೆ.ಎಲ್.ಇ ಸಂಸ್ಥೆಗಳ ಸಹಯೋಗದೊಂದಿಗೆ ಕರ್ನಾಟಕ ವೈದ್ಯರ ಸಂಘ ಹುಬ್ಬಳ್ಳಿ-ಧಾರವಾಡ ಶಾಖೆ, ಕರ್ನಾಟಕ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ಸಭಾಂಗಣದಲ್ಲಿ ಮೂರು ದಿನಗಳ 42ನೇ ದಕ್ಷಿಣ ವಲಯ ಫಿಜಿಸಿಯನ್‌ಗಳ ಕಾಪಿಕಾನ್-2025 ರಾಜ್ಯ ಸಮ್ಮೇಳನ ನಡೆಯಿತು.
ಸಮ್ಮೇಳನದಲ್ಲಿ ವಿವಿಧ ಕ್ಷೇತ್ರಗಳ ಸುಮಾರು 1800 ಪ್ರಸಿದ್ಧ ವೈದ್ಯರು ಭಾಗವಹಿಸಿದ್ದರು. ಭವಿಷ್ಯದ ಭಾರತ ನಿರ್ಮಾಣದಲ್ಲಿ ವೈದ್ಯರ ಕೊಡುಗೆ ಮಹತ್ವವನ್ನು ಹೊಂದಿದ್ದು, ವೈದ್ಯರಿಗೆ ದೇವರ ಸ್ಥಾನ ನೀಡಲಾಗಿದೆ. ಬಾಹ್ಯಾಕಾಶ, ಕ್ಷೇತ್ರದಲ್ಲಿ ಸಂಶೋಧನೆಗಳು ಸಾಗಿ ಅನುಷ್ಠಾನಗೊಳ್ಳುತ್ತಿರುವಂತೆ ವೈದ್ಯಕೀಯ ಕ್ಷೇತ್ರದಲ್ಲೂ ಸಂಶೋಧನೆಗಳು ನಿರಂತರ ನಡೆಯುವ ಮೂಲಕ ಇನ್ನೂ ಉತ್ತಮ ವೈದ್ಯಕೀಯ ಸೇವೆ ಜನ-ಸಾಮಾನ್ಯರಿಗೆ ದೊರಕುವಂತಾಗಲಿ ಎಂದು ಸಮ್ಮೇಳನಲ್ಲಿ ಆಶಯ ವ್ಯಕ್ತಪಡಿಸಲಾಯಿತು.
ಡಾ.ಟಿ.ಬಿ.ಬಸವರಾಜೇಂದ್ರ ಸ್ಮರಣಾರ್ಥ ಎಚ್.ಐ.ವಿ ಚಿಕಿತ್ಸೆಯ ಹಾದಿ: ಹಿಂದಿನ ಸ್ಥಿತಿಗತಿಯು, ಪ್ರಸ್ತುತ ದೃಶ್ಯ ಮತ್ತು ಭವಿಷ್ಯದ ದಿಕ್ಕು ಎಂಬ ವಿಷಯದ ಕುರಿತು ಉಪನ್ಯಾಸವನ್ನು ಬೆಳಗಾವಿ ಜೆಎನ್‌ಎಂಸಿ, ಕೆಎಎಚ್‌ಇಆರ್ ಸಾಮನ್ಯ ವೈದ್ಯಕೀಯ ವಿಭಾಗದ ಪ್ರಾಧ್ಯಾಪಕ ಡಾ.ಜ್ಞಾನೇಶ ಮೋರಕರ್ ಇವರು ಉಪನ್ಯಾಸ ನೀಡಿದರು.
ಡಾ.ಜ್ಞಾನೇಶ ಮೋರಕರ್ ಅವರ ಎಚ್.ಐ.ವಿ ಕುರಿತಾಗಿ ಕಳೆದ 15 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದು, ಅವರ ಕಾರ್ಯ ಹಾಗೂ ಸಾಧನೆಯನ್ನು ಮೆಚ್ಚಿ ಡಾ.ಟಿ.ಬಿ.ಬಸವರಾಜೇಂದ್ರ ಸ್ಮರಣಾರ್ಥ ನೀಡುವ ಪಾರಿತೋಷಕವನ್ನು ಡಾ.ಜ್ಞಾನೇಶ ಮೋರಕರ್ ಅವರಿಗೆ ನೀಡಲಾಯಿತು.
ಅನೆಕಲ್ಲು, ಮಳೆ ಅಬ್ಬರಕ್ಕೆ 39 ಕುರಿಗಳ ಸಾವು : ಬೀದಿಗೆ ಬಂತು ಬಡವನ ಬದುಕು
ಮಳೆಯ ಅವಾಂತರ : ನದಿಯಂತಾದ ರಾಷ್ಟ್ರೀಯ ಹೆದ್ದಾರಿ, ವಾಹನಗಳು ಸಿಲುಕಿ ಪರದಾಡಿದ ಪ್ರಯಾಣಿಕರು
ಬೆಳಗಾವಿಯಲ್ಲಿ ಆನೆಕಲ್ಲು ಮಿಶ್ರಿತ ಗಾಳಿ ಮಳೆಯ ಅರ್ಭಟಕ್ಕೆ ಜನಜೀವನ ಅಸ್ತವ್ಯಸ್ತ
ಹಣ ದ್ವಿಗುಣ ಹೆಸರಲ್ಲಿ ಜನರಿಗೆ ವಂಚಿಸುತ್ತಿದ್ದ ಅಂತರಾಜ್ಯ ಖದೀಮರ ಬಂಧನ : ಗೋಕಾಕ ಪೊಲೀಸರ ಕಾರ್ಯಕ್ಕೆ ಎಸ್ ಪಿ ಶ್ಲಾಘನೆ
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ 