ಡಾ. ಚಂದ್ರಕಲಾಗೆ ಪ್ರಶಸ್ತಿ ಪ್ರದಾನ ಸನ್ಮಾನ

ಲೋಕದರ್ಶನ ವರದಿ

ಕೊಪ್ಪಳ 19: ಕರ್ನಾಟಕ  ಜಾಗೃತಿ ವೇದಿಕೆ ಬೆಂಗಳೂರು, ಕರ್ಮಭೂಮಿ ಕನ್ನಡ ಸಂಘ ಬಿಚ್ಚೊಲಿ, ಗೋವಾ ಸಂಘಟನೆಯ ಸಂಯುಕ್ತ ಆಶ್ರಯದಲ್ಲಿ ಪ್ರತಿ ವರ್ಷದಂತೆ ಈ ವರ್ಷವು ಸಹ ಗೋವಾದ ಬಿಚ್ಚೋಲಿ ನಗರದ ಹೀರಾಬಾಯಿ ಹಾಲ್ನಲ್ಲಿ 11ನೇ ಬಾರಿಗೆ ಜರುಗಿದ ಗೋವಾ ಕನ್ನಡಿಗರ ಸಾಂಸ್ಕೃತಿಕ ಸಮ್ಮೇಳನದಲ್ಲಿ ವೈಧ್ಯಕಿಯ ಕ್ಷೇತ್ರದಲ್ಲಿ ಕರುನಾಡ ಪದ್ಮ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದ, ಕೊಪ್ಪಳದ ಮಂಗಳಾ ಹೆರಿಗೆ ಆಸ್ಪತ್ರೆಯ ವೈದ್ಯ ಡಾ. ಚಂದ್ರಕಲಾ ಎಸ್. ನರಹಟ್ಟಿ ಇವರಿಗೆ ಪ್ರಶಸ್ತಿ ಲಭಿಸಿತು.

ಅನ್ಯ ಕಾರ್ಯದ ನಿಮಿತ್ಯ ಸದರಿ ಕಾರ್ಯಕ್ರಮದಲ್ಲಿ ಭಾಗವಹಿಸದೇ ಇರವುದರಿಂದ ಅವರಿಗೆ ಕೊಪ್ಪಳ ಜಿಲ್ಲಾ ನಾಗರೀಕರ ವೇದಿಕೆಯ, ಜಾಗೃತಿಕ ವೇದಿಕೆಯ ಪದಾಧಿಕಾರಿಗಳು ಸೇರಿದಂತೆ ಅನೇಕರು ಅವರ ನಿವಾಸಕ್ಕ ತೆರಳಿ ಕಾರ್ಯಕ್ರಮದ ಪರವಾಗಿ ಪ್ರಶಸ್ತಿಯನ್ನು ಪ್ರಧಾನಮಾಡಿ ಗೌರವಿಸಿ ಸನ್ಮಾನಿಸಿ ವೇದಿಕೆ ಪರವಾಗಿ ಶುಭ ಕೊರಿದರು. ವ್ಯಧ್ಯಕಿಯ ಕ್ಷೇತ್ರದಲ್ಲಿನ ಡಾ. ಚಂದ್ರಕಲಾ ಎಸ್.ನರಹಟ್ಟಿ ಅವರ ಉತ್ತಮ ಸೇವೆಯನ್ನು ಪರಿಗಣಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿತ್ತು, ಈ ಸಂದರ್ಭದಲ್ಲಿ ಕೊಪ್ಪಳ ಜಿಲ್ಲಾ ನಾಗರಿಕರ ವೇದಿಕೆ ಅಧ್ಯಕ್ಷ ಜಿ.ಎಸ್.ಗೋನಾಳ, ತಿರುಳುಗನ್ನಡ ಸಾಹಿತ್ಯ ಪರತಿಷ್ಠಾನದ ಜಿಲ್ಲಾಧ್ಯಕ್ಷ ಎಂ. ಸಾದಿಕ ಅಲಿ, ಕಾ.ನಿ.ಪ.ಸಂ. ರಾಜ್ಯ ಕಾರ್ಯಕಾರಣಿ ಸದಸ್ಯ ಹರೀಶ್ ಹೆಚ್.ಎಸ್., ಜಿ.ಪ್ರ. ಕಾರ್ಯದಶರ್ಿ ಎನ್.ಎಂ.ದೊಡ್ಡಮನಿ ಮತ್ತು ಶಿವರಾಜ ನುಗಡೋಣಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.