ಸಮಾಜಕ್ಕೆ ಡಾ.ಬಾಬುಜಗಜೀವನರಾಂ ಕೊಡುಗೆ ಅಪಾರ: ಪಾಟೀಲ

Dr. Babujagjivanram's contribution to society is immense: Patil

ಬೀಳಗಿ 06: ದೇಶ ಕಂಡ ಅಪರೂಪರದ ವ್ಯಕ್ತಿತ್ವವುಳ್ಳ ಮಾಜಿ ಉಪಪ್ರಧಾನಿ ಡಾ.ಬಾಬುಜಗಜೀವನರಾಂ ರವರು ಕೊಡುಗೆಯು ದೇಶಕ್ಕೆ ಹಾಗೂ ಸಮಾಜಕ್ಕೆ ಅಪಾರವಾಗಿದೆ. ಅವರು ತಮ್ಮ ಅಧಿಕಾರದ ಅವಧಿಯಲ್ಲಿ ಹಸಿರು ಕ್ರಾಂತಿಯನ್ನು ಮಾಡಿದವರು. ಈ ಮಹಾನ್ ನಾಯಕನ ಆದರ್ಶಗಳನ್ನು ಜೀವನದಲ್ಲಿ ಎಲ್ಲರೂ ಅಳವಡಿಸಿಕೊಳ್ಳಬೇಕು ಎಂದು ಹಟ್ಟಿ ಚಿನ್ನದ ಗಣಿ ನಿಗಮದ ಅಧ್ಯಕ್ಷರು ಹಾಗೂ ಶಾಸಕ ಜೆ.ಟಿ.ಪಾಟೀಲ ಹೇಳಿದರು. 

ಪಟ್ಟಣದ ಡಾ.ಬಿ.ಅರ್‌.ಅಂಬೇಡ್ಕರ್ ವೃತ್ತದಲ್ಲಿ ಶನಿವಾರ ತಾಲೂಕಾ ಆಡಳಿತ ಹಾಗೂ ಸಮಾಜ ಕಲ್ಯಾಣ ಇಲಾಖೆ ಇವರ ಸಂಯುಕ್ರ ಆಶ್ರಯದಲ್ಲಿ ಮಾಜಿ ಉಪಪ್ರಧಾನಿ ಡಾ.ಬಾಬು ಜಗಜೀವನರಾಮರವರ 118ನೇ ಜಯಂತ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. 

 ಸಂವಿಧಾನ ಶಿಲ್ಪಿ ಡಾ, ಬಿ.ಆರ್‌.ಅಂಬೇಡ್ಕರ ಹಾಗೂ ಹಸಿರು ಕ್ರಾಂತಿ ಹರಿಕಾರ ಡಾ.ಬಾಬು ಜಗಜೀವನರಾಂ ಇಬ್ಬರೂ ದೇಶದ ಮತ್ತು ಸಮಾಜದ ಎರಡು ಕಣ್ಣುಗಳು. ಮೌನದಿಂದ ಕ್ರಾಂತಿ ಮಾಡಿದ ನಾಯಕರು. ಇವರು ದಲಿತರ ಆಶಾಕಿರಣವಾಗಿದ್ದರು. ಕೃಷಿಯಲ್ಲಿ ಹೊಸಕ್ರಾಂತಿ. ಆಹಾರದ ಕೊರತೆ ನಿವಾರಣೆ ಮಾಡಿದರು. ಅವರ ಹೆಜ್ಜೆಯಲ್ಲಿ ನಾವು ಎಲ್ಲರೂ ನಡೆಯಬೇಕಾಗಿದೆ. ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ ಕೊಡಿಸಬೇಕು. ಮಕ್ಕಳ ಕಲಿಕೆಗಾಗಿ ಸರಕಾರ ಸಾಕಷ್ಟು ಸೌಲಭ್ಯ ನೀಡುತ್ತಿದೆ. ಎಸ್‌.ಸಿ ಎಸ್‌.ಟಿ ಸಮುದಾಯದ ಅಭಿವೃದ್ಧಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಾಕಷ್ಟು ಅನುದಾನ ನೀಡಿದ್ದಾರೆ. ವಿರೋಧ ಪಕ್ಷದವರು ಐದು ಗ್ಯಾರಂಟಿ ಯೋಜನೆ ಬಗ್ಗೆ ಟೀಕೆ ಮಾಡುತ್ತಿದ್ದಾರೆ. ಇದು ಯಾವ ನ್ಯಾಯ. ಆದರೆ ಇಂದು ಅವರೆ ಗ್ಯಾರಂಟಿ ಯೋಜನೆ ಕಾಫೀ ಮಾಡುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಡಾ.ಬಿ.ಆರ್‌.ಅಂಬೇಡ್ಕರ್ ಹಾಗೂ ಡಾ.ಬಾಬು ಜಗಜೀವನರಾಂ ಎರಡು ಸಮುದಾಯಗಳ ನಿರ್ಮಾಣ ಭವನಕ್ಕೆ ಅನುದಾನ ನೀಡುವುದಾಗಿ ಭರವಸೆ ನೀಡಿದರಲ್ಲದೇ ಬಾಬು ಜಗಜೀವನರಾಂ ರವರ ಪುತ್ಥಳಿ ನಿರ್ಮಾನಕ್ಕೆ ಮುಂದಾಗುವುದಾಗಿ ಹೇಳಿದರು. 

ಬೆಳಗಾವಿ ವಿಭಾಗಿ ಡಿ.ಎಸ್‌.ಎಸ್‌.ಸಂಚಾಲಕ ಮಹಾದೇವ ಹಾದಿಮನಿ ಮಾತನಾಡಿ, ಸಾಮಾಜಿಕ ವ್ಯವಸ್ಥೆಯಲ್ಲಿ ನಾವು ಬದಲಾವಣೆ ಕಾಣಬೇಕಾಗಿದೆ. ಎಡಗೈ ಮತ್ತು ಬಲಗೈ ಎನ್ನುವ ಭಾವನೆ ನಮ್ಮಿಂದ ಹೊಗಬೇಕಾಗಿದೆ. ಎಲ್ಲರೂ ನಮ್ಮರು ಏನ್ನುವ ಭಾವನೆ ಬರಬೇಕಾಗಿದೆ. ಒಳಮೀಸಲಾತಿ ಜಾರಿಯಾಗಲಿದೆ ಇದರಲ್ಲಿ ಯಾವುದೇ ಅನುಮಾನವೇ ಬೇಡಾ. ನಮ್ಮೊಂದಿಗೆ ಸಣ್ಣ ಸಣ್ಣ ಜಾತಿಯವರಿಗೂ ನಮ್ಮ ಕರೆದುಕೊಂಡು ಹೋಗಬೇಕಾಗಿದೆ ಎಂದರು. 

ಇದೇ ಸಂದರ್ಭಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ಮಾಡಲಾಯಿತು.  

ಜಯಂತಿ ಉತ್ಸವ ಸಮಿತಿ ಅಧ್ಯಕ್ಷ ತಹಶಿಲ್ದಾರ ವಿನೋದ ಹತ್ತಳ್ಳಿ, ಸಿಪಿಐ ಎಚ್‌.ಬಿ. ಸಣ್ಣಮನಿ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಸಿ.ಎಸ್‌.ಗಡ್ಡದೇವರಮಠ, ಗ್ಯಾರಂಟಿ ಸಮಿತಿ ತಾಲೂಕಾ ಅಧ್ಯಕ್ಷ ಅಣವೀರಯ್ಯ ಪ್ಯಾಟಿಮಠ, ಪಪಂ ಅಧ್ಯಕ್ಷ ಯಲಗೂರದಪ್ಪ (ಮುತ್ತು) ಬೋರ್ಜಿ, ಬಿಇಒ ಆರ್‌.ಎಸ್‌.ಆದಾಪೂರ, ಪಪಂ ಮುಖ್ಯಾಧಿಕಾರಿ ದೇವೇಂದ್ರ ಧನಪಾಲ, ತಾಪಂ ಇಒ ಶ್ರಿನಿವಾಸ ಪಾಟೀಲ ಇತರರು ಇದ್ದರು.