ಡಾ. ಬಾಬು ಜಗಜೀವನರಾಮ್ ಜಯಂತಿ ಕಾಮರ್ಿಕ ಕಾಮರ್ಿಕರ ಏಳಿಗೆಗೆ ಅವರ ಕೊಡುಗೆ ಅಪಾರ : ಇಬ್ರಾಹಿಂ

ಬೆಳಗಾವಿ, 05: ಅಧಿಕಾರ ಮತ್ತು ಐಶ್ವರ್ಯದಿಂದ ಗಳಿಸಲಾಗದ ಕಿತರ್ಿಯನ್ನು ಸೇವೆ ಮತ್ತು ತ್ಯಾಗದಿಂದ ಸಂಪಾಧಿಸಬಹುದೆನ್ನುವ ಸಂದೇಶವನ್ನು ಸಾರಿದ ಕಿತರ್ಿ ಡಾ.ಬಾಬು ಜಗಜೀವರಾಮ್ ಅವರಿಗೆ ಸಲ್ಲುತ್ತದೆ ಎಂದು ಮಹಾನಗರ ಪಾಲಿಕೆ ಆಯುಕ್ತರಾದ ಇಬ್ರಾಹಿಂ ಮೈಗೂರ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಮಹಾನಗರ ಪಾಲಿಕೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಇವರುಗಳ ಸಯುಕ್ತಾಶ್ರಯದಲ್ಲಿ (ಎ.5) ರಂದು ಬೆಳಿಗ್ಗೆ 11ಗಂಟೆಗೆ ನಗರದ ಸಂಗಮೇಶ್ವರ ನಗರದಲ್ಲಿರವ ಬಾಬು ಜಗಜೀವನರಾಮ್ ಉದ್ಯಾನವನದಲ್ಲಿ ಆಯೋಜಿಸಲಾದ ಬಾಬು ಜಗಜೀವನರಾಮ್ ಅವರ 112 ನೇ ಜನ್ಮ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.

ಇವತ್ತಿನ ಯುವ ಪೀಳಿಗೆಯವರು ಇಂತಹ ಮಹಾ ನಾಯಕರ ಜಯಂತಿಗಳನ್ನು ಆಚರಣೆ ಮಾಡುವದರಿಂದ ಅವರ ಕೊಡುಗೆ, ತತ್ವಾದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದೆ ಎಂದರು. ಸಮಾಜ ಸುಧಾರಣೆ, ಶಾಂತಿ ಹಾಗೂ ಪ್ರತಿಯೊಬ್ಬರು ಬಡವ ಶ್ರೀಮಂತ ಎನ್ನದೆ ಸಮಾನ ಜೀವನ ನಡೆಸಬೇಕು ಎನ್ನುವ ಮಹತ್ವಾಕಾಂಕ್ಷೆಯನ್ನು ಹೊಂದಿದವರಿವರು ಎಂದರು. ಸದಾ ಕಾಮರ್ಿಕರ ಏಳಿಗೆಯನ್ನು ಬಯಸುತ್ತಿದ್ದರು ಹಾಗೂ ದೇಶದ ಜನರು ಅಹಾರ ಕೊರತೆಯನ್ನು ಅನುಭವಿಸುತ್ತಿರುವದನ್ನು ಕಂಡು ಹಸಿರು ಕ್ರಾಂತಿ ಪ್ರಾರಂಭಿಸಿ ದೇಶದ ಜನತೆಯ ಹಸಿವನ್ನು ಹೊಗಲಾಡಿಸುವ ಕಿತರ್ಿ ಇವರಿಗೆ ಸಲ್ಲುತ್ತದೆ ಎಂದರು.

ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗದ ಪ್ರೊ. ಪ್ರಕಾಶ ಕಟ್ಟಿಮನಿಯವರು ತಮ್ಮ ವಿಶೇಷ ಉಪನ್ಯಾಸ ನೀಡುತ್ತ  ಬಾಬುಜಿ ಎಂದು ಪ್ರೀತಿ ಪಾತ್ರರಾದ ಡಾ.ಬಾಬು ಜಗಜೀವನರಾಮ್ ಅವರು ದೇಶ ಕಂಡ ಮಹಾನ್ ಸ್ವಾತಂತ್ರ ಹೋರಾಟಗಾರರು, ಧೀಮಂತನಾಯಕರು, ದಕ್ಷ ಆಡಳಿತಗಾರರು ಹಾಗೂ ಹಸಿರು ಕ್ರಾಂತಿಯ ಹರಿಕಾರರಾಗಿ ಸಾಮನ್ಯರನೆಂದೂ ಮರಿಯದ ವೆಕ್ತಿತ್ವವನ್ನು ಹೊಂದಿದ ಹಾಗೂ ಬಡವರ ದೀನದಲಿತರ ಕಣ್ಣಿರು ತೊಳೆದ ಶ್ರೇಷ್ಠ ವ್ಯಕ್ತಿತ್ವವಾಗಿತ್ತೆಂದು ಹೇಳಿದರು.

  ಕಾಮರ್ಿಕರ ಚಳುವಳಿಯನ್ನು ಹುಟ್ಟು ಹಾಕಿದ ಮಹಾನ ನಾಯಕರು ಇವರಾಗಿದ್ದು ಬಡ ಕುಟುಂಬದಲ್ಲಿ ಹುಟ್ಟಿದ ಇವರು ಕಾಮರ್ಿಕರ ಭವಿಷ್ಯ ನಿಧಿ ಇ.ಎಸ್.ಐ ಗಳಂತ ಯೋಜನೆಗಗನಳನ್ನು ಜಾರಿಗೆ ತಂದಿದ್ದಾರೆ  ಅಷ್ಟೇ ಅಲ್ಲದೆ 20 ಅಂಶದ ಕಾರ್ಯ ಕ್ರಮವನ್ನು ಬಾರಿಗೆ ತಂದ ಕಿತರ್ಿ ಇವರಿಗೆ ಸಲ್ಲುತ್ತದೆ ಎಂದು ಹೇಳುತ್ತ ಅವರು ಜೀವನದುದ್ದಕ್ಕೂ ನಡೆದ ಬಂದ ದಾರಿಯ ಕುರಿತು ಹೇಳಿದರು.

ಈ ಸಂದರ್ಭದಲ್ಲಿ 2017-18ರ ಸಾಲಿನ ಎಸ್. ಎಸ್.ಎಲ್.ಸಿ ಪರೀಕ್ಷೆಯಲ್ಲಿ ಸಾದನೆ ಮಾಡಿದ ಬೆಳಗಾವಿ ಮತ್ತು ಚಿಕೋಡಿಯ ಪ್ರತಿಭಾವಂತ ವಿದ್ಯಾಥರ್ಿಗಳಿಗೆ ಇದೇ ಸಮಯದಲ್ಲಿ ಸನ್ಮಾನ ಮಾಡಲಾಯಿತು.

ಸಮಾಜ ಕಲ್ಯಾಣ ಇಲಾಖೆ ಜಂಟಿ ನಿದರ್ೇಶಕರಾದ ರಾಮನಗೌಡ ಕನ್ನೋಳಿ, ಜಿಲ್ಲಾ ಮಹಷರ್ಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿಗಳಾದ ಉಮಾ ಸಾಲಿಗೌಡರ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳಾದ ಸದಾಶಿವ ಬಡಿಗೇರ, ನಂ.1 ಗುತ್ತಿಗೆದಾರರಾದ ಮಲ್ಲಿಕಾಜರ್ುನ ರಾಸಿಂಗೆ, ಮಹಾನಗರ ಪಾಲಿಕೆ ಅಧಿಕಾರಿಗಳಾದ ಲಕ್ಷ್ಮಿ ನಿಪ್ಪಾಣಿಕರ, ಮಹಿಳಾ ಮತ್ತು ಮಕ್ಕಳ ಇಲಾಖೆಯ ಹಿರಿಯ ಸಹಾಯಕ ನಿದೇರ್ಶಕರಾದ ಅರುಣ ನಿರಗಟ್ಟಿ, ಹೆಸ್ಕಾಂ ಅಧಿಕಾರಿಗಳಾದ ಅಶ್ವಿನ ಸಿಂಧೆ, ಸೇರಿದಂತೆ ಸಮಾಜದ ಹಲವಾರು ಗಣ್ಯ ವ್ಯಕ್ತಿಗಳು ಉಪಸ್ಥಿತರಿದ್ದರು.