ಕೊಪ್ಪಳ 06: ಬಾಬಾ ಸಾಹೇಬರು ದೀನ, ದಮನಿತ ವರ್ಗಗಳ ಮಹಾನಾಯಕ, ತಳ ಸಮುದಾಯಗಳ ಏಳಿಗೆಗಾಗಿ ಅಪಾರವಾಗಿ ಶ್ರಮಿಸುವ ಮೂಲಕ ದಲಿತ ನಾಯಕರಾಗಿ ಬೆಳೆದರು ಎಂದು ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ಕೆ.ವಿ ಪ್ರಸಾದ್ ಹೇಳಿದರು. ಕೊಪ್ಪಳ ವಿಶ್ವವಿದ್ಯಾಲಯ ಸ್ನಾತಕೋತ್ತರ ಕೇಂದ್ರದಲ್ಲಿ ಡಾ.ಅಂಬೇಡ್ಕರ್ ಮಹಾಪರಿನಿರ್ವಾಣ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿ, ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.
ಶೋಷಣೆಯ ವಿರುದ್ಧದ ಅವರ ನಿರಂತರ ಹೋರಾಟ, ಸುಸ್ಥಿರ ಮತ್ತು ಆರೋಗ್ಯಕರ ಸಮಾಜ ನಿರ್ಮಾಣದ ಮಹತ್ವಾಕಾಂಕ್ಷೆ ಹೊಂದಿತ್ತು. ಮೂಲಭೂತ ಹಕ್ಕುಗಳ ಅಡಿಯಲ್ಲಿ, ಭಾರತದ ಪ್ರತಿಯೊಬ್ಬ ಪ್ರಜೆ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ಸಾಂಸ್ಕೃತಿಕವಾಗಿ ಬೆಳೆಯಬೇಕು, ದೇಶ ಅಭಿವೃದ್ಧಿಯ ಕಡೆ ಸಾಗಬೇಕು ಎಂದರು. ಬಾಬಾ ಸಾಹೇಬರು ದೇಶದ ಮೊದಲ ಕಾನೂನು ಮಂತ್ರಿ, ವಿದೇಶದಲ್ಲಿ ಮೊದಲು ಬ್ಯಾರಿಸ್ಟರ್ ಪದವಿ ಪಡೆದ ಕೀರ್ತಿಗೆ ಭಾಜನರಾಗಿದ್ದಾರೆ, ಜ್ಞಾನದ ಸಮಾನಾರ್ಥಕ ಪದವೇ ಬಾಬಾ ಸಾಹೇಬರು ಎಂದರೆ ತಪ್ಪಾಗಲಾರದು ಎಂದು ಕುಲಸಚಿವರು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಸ್ನಾತಕೋತ್ತರ ಕೇಂದ್ರದ ನಿರ್ದೇಶರಾದ ಡಾ.ಪ್ರಕಾಶ್ ಯಳವಟ್ಟಿ, ಆಂಗ್ಲ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ.ಚಾಂದ್ ಭಾಷಾ, ಕನ್ನಡ ವಿಭಾಗದ ಡಾ. ಪ್ರವೀಣ್ ಪಾಟೀಲ್, ಡಾ. ಪಾರ್ವತಿ ಸಮಾಜಶಾಸ್ತ್ರದ ವಿಭಾಗದ ಡಾ.ಪಾಪಣ್ಣ, ಡಾ.ಬಾಷಾ, ರಾಜ್ಯಶಾಸ್ತ್ರ ವಿಭಾಗದ ಡಾ.ಸುಧಾಕರ್, ಡಾ.ಅಯ್ಯಪ್ಪ , ಮತ್ತು ವಿವಿಧ ವಿಭಾಗಗಳ ಉಪನ್ಯಾಸಕರಾದ ಡಾ. ಜಗದೀಶ್, ಕುಮಾರ್ ನಾಯಕ್, ವಿರುಪಾಕ್ಷ, ಗೀತಾ, ಶ್ರೀಕಾಂತ್, ಸತೀಶ್, ಬೋಧಕೇತರ ಸಿಬ್ಬಂದಿ, ವಿವಿಧ ವಿಭಾಗಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.