ತಾಳಿಕೋಟಿ 06: ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದ ಹತ್ತಿರ ಇರುವ ಲುಂಬಿನಿ ಉದ್ಯಾನವನದಲ್ಲಿ ತಾಲೂಕ ಆಡಳಿತದ ವತಿಯಿಂದ ಡಾ.ಬಿ.ಆರ್.ಅಂಬೇಡ್ಕರ್ ಅವರ 68 ನೇ ಮಹಾಪರಿ ನಿರ್ವಾಣ ದಿನವನ್ನು ಶುಕ್ರವಾರ ಅವರ ಮೂರ್ತಿಗೆ ಪುಷ್ಪ ನಮನ ಸಲ್ಲಿಸಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಸಮಾಜದ ಯುವ ಮುಖಂಡ ಜೈ ಭೀಮ ಮುತ್ತಗಿ ಮಾತನಾಡಿ ಡಾ.ಬಿ.ಆರ್.ಅಂಬೇಡ್ಕರರು ಈ ಜಗತ್ತು ಕಂಡ ಶ್ರೇಷ್ಠ ದಾರ್ಶನಿಕ, ಅವರ ಚಿಂತನೆಗಳು ಎಲ್ಲರಿಗೂ ಸ್ಪೂರ್ತಿಯ ಸೆಲೆಯಾಗಿವೆ. ಅವರೊಬ್ಬ ಆದರ್ಶ ವ್ಯಕ್ತಿ ಅಸಮಾನತೆಯ ವಿರುದ್ಧ ಗಟ್ಟಿ ಧ್ವನಿಯತ್ತಿದ ಮಹಾ ಮಾನವತವಾದಿ ಶೋಷಿತ ವರ್ಗದ ಜನರ ಹಕ್ಕುಗಳ ರಕ್ಷಣೆಗಾಗಿ ಅವರು ತಮ್ಮ ಜೀವನವನ್ನೇ ಅರ್ಿಸಿದರು, ದೇಶಕ್ಕೆ ಅವರ ಕೊಡುಗೆ ಅಪಾರ ಇಂಥಹ ಮಹಾನ್ ಚಿಂತಕನ ಬದುಕಿನ ಆದರ್ಶಗಳನ್ನು ಅನುಸರಿಸುವ ಅಗತ್ಯ ಇದೆ ಎಂದು ಹೇಳಿದರು.
ಈ ಸಮಯದಲ್ಲಿ ಸಮಾಜದ ಹಿರಿಯ ಮುಖಂಡ ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ಎಸ್.ಬಿ.ಕಟ್ಟಿಮನಿ, ತಹಸಿಲ್ದಾರ್ ಕೀರ್ತಿ ಚಾಲಕ್, ಪುರಸಭೆ ಮುಖ್ಯಾಧಿಕಾರಿ ಮೋಹನ ಜಾಧವ, ಸಿರಸ್ತೆದಾರ ಜೆ.ಆರ್.ಜೈನಾಪೂರ, ಮಾಜಿ ಉಪ ತಹಸಿಲ್ದಾರ್ ಜಿ.ಜಿ. ಮದರಕಲ್, ಪಿ.ಎಸ್.ಐ.ಭಂಗಿ, ಕಾಶಿನಾಥ ಮುರಾಳ, ಪ್ರಭು ಸಣ್ಣಕ್ಕಿ, ಸಮಾಜದ ಪ್ರಮುಖರಾದ ಬಸವರಾಜ ಕಟ್ಟಿಮನಿ,ಸಿದ್ದು ಬಾರಿಗಿಡದ ,ಡಿ.ಬಿ.ಹಾದಿಮನಿ, ರವಿ ಕಟ್ಟಿಮನಿ, ಕಾಶಿನಾಥ ಕಾರಗನೂರ, ರಾಮಣ್ಣ ಕಟ್ಟಿಮನಿ, ಗೋಪಾಲ ಕಟ್ಟಿಮನಿ, ನದೀಮ್ ಕಡು, ಅಬೂಬಕರ್ ಲಾಹೋರಿ,ಕೃಷಿ ಅಧಿಕಾರಿ ಮಹೇಶ ಜೋಷಿ,ಎಂ.ಬಿ.ಜಾಯವಾಡಗಿ, ಸ.ಕ.ಇ.ಎಸ್.ಎಂ. ಕಲಬುರ್ಗಿ,ಎ ನ್.ವಿ.ಕೋರಿ. ಎಸ್.ಎನ್.ಮಲ್ಲಾಡೆ, ಅನ್ನಪೂರ್ಣ ಪಾಟೀಲ,ಎಂ.ಸಿ.ಗುಡಗುಂಟಿ, ವಿಶ್ವನಾಥ ಮಾಳಗಿ,ತಾಪಂ, ಕಂದಾಯ ಹಾಗೂ ಪುರಸಭೆ ಸಿಬ್ಬಂದಿಗಳು ಇದ್ದರು.