ಡಾ. ಬಿ ಆರ್ ಅಂಬೇಡ್ಕರ್ ಅವರ 134 ನೇ ಜಯಂತಿ
ಸವಣೂರು 14: ಭಾರತ ದೇಶದ ಜನತೆಯ ಏಳಿಗೆಗಾಗಿ ಉತ್ತಮ ಸಂವಿಧಾನ ನೀಡಿದ ಭಾರತರತ್ನ ಡಾ.ಬಿ.ಆರ್ ಅಂಬೇಡ್ಕರ್ ಅವರ ಕೊಡುಗೆ ಸದಾ ಸ್ಮರಣೀಯವಾಗಿದೆ ಎಂದು ರೈತ ಮುಖಂಡರಾದ ಫಕ್ಕಿರೇಶ ಕಾಳಿ ಹೇಳಿದರು. ತಾಲ್ಲೂಕಿನ ಹಿರೇಮುಗದೂರ ಗ್ರಾಮದಲ್ಲಿ ಡಾ. ಬಿ ಆರ್ ಅಂಬೇಡ್ಕರ್ ಅವರ 134 ನೇ ಜಯಂತಿ ಕಾರ್ಯಕ್ರಮದಲ್ಲಿ ಅವರ ಸೇವೆ ಸ್ಮರಿಸಿ ಅವರು ಮಾತನಾಡಿದರು.ಯಾವುದೇ ಸರ್ಕಾರ ಬಂದರೂ ನಮ್ಮ ಸಮುದಾಯಕ್ಕೆ ಸೂಕ್ತ ಒಳಮೀಸಲಾತಿ ಮಾಡುವುದರಲ್ಲಿ ವಿಫಲವಾಗಿವೆ.ಒಳಮೀಸಲಾತಿ ಮಾಡಲು ಸರ್ಕಾರ ಮುಂದಾಗಬೇಕು. ನಮ್ಮ ಸಮುದಾಯಕ್ಕೆ ನ್ಯಾಯ ನೀಡಬೇಕು. ಮುಂದಿನ ದಿನಮಾನಗಳಲ್ಲಿ ವಿವಿಧ ಬಗೆಗಳಲ್ಲಿ ಹೋರಾಟ ಮಾಡಲಾಗುವುದು.
ಡಾ. ಬಿ ಆರ್ ಅಂಬೇಡ್ಕರ್ ಅವರು ನಮಗೆ ಮಾರ್ಗದರ್ಶನ ನೀಡಿದ್ದು,ಪಾಲಿಸೋಣ ಎಂದರು.ಗ್ರಾಪಂ ಸದಸ್ಯರಾದ ನಿಂಗಪ್ಪ ಎಂ ಆರೇರ ಮಾತನಾಡಿ ಡಾ.ಬಿ ಆರ್ ಅಂಬೇಡ್ಕರ್ ಅವರು ಎಲ್ಲಾ ವರ್ಗದವರಿಗೆ ಸೂಕ್ತ ನ್ಯಾಯ ಒದಗಿಸುವ ಸಂವಿಧಾನ ನೀಡಿದ್ದಾರೆ. ಅವರ ತತ್ವ ಸಿದ್ದಾಂತಗಳ ಪಾಲಿಸುತ್ತಾ ಮುನ್ನಡಿಯೋಣ.ಅವರ ಜೀವನವೇ ಎಲ್ಲರಿಗೂ ಸ್ಪೂರ್ತಿಯಾಗಲಿದೆ ಎಂದರು.ಟಿಎಂಎಇಎಸ್ ಪ್ರೌಢ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರಾದ ಮಾಲತೇಶ ತಳವಾರ ಮಾತನಾಡಿ ಡಾ. ಬಿ ಆರ್ ಅಂಬೇಡ್ಕರ್ ಕೇವಲ ಎಸ್ ಸಿ-ಎಸ್ ಟಿ ವರ್ಗಕ್ಕೆ ಸೇರದವರಲ್ಲಾ.ಭಾರತದ ಮಾನವತಾವಾದಿಯಾಗಿ ಮಾರ್ಗದರ್ಶನದ ಸಂವಿಧಾನ ನೀಡಿದ್ದಾರೆ ಎಂದರು.ಇದೇ ಅವಧಿಯಲ್ಲಿ ಬಾಬು ಜನಜೀವನರಾಮ್ ಅವರ ಜಯಂತಿ ಮಾಡಲಾಯಿತು. ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯರಾದ ಮರಿಯಪ್ಪ ನಡುವಿನಮನಿ ಗ್ರಾಪಂ ಕಾರ್ಯದರ್ಶಿ ಹನುಮಂತಪ್ಪ ಸಂಗೂರ, ಮುಖಂಡರಾದ ನೀಲಪ್ಪ ಕಾಳಿ,ಗುಡ್ಡಪ್ಪ ನಡುವಿನಮನಿ,ಫಕ್ಕಿರೇಶ ಹೆಬ್ಬಾಳ,ಗುಡ್ಡಪ್ಪ ಆರೇರ, ಅಜಯ,ಆಕಾಶ,ರಮೇಶ ಕಾಳಿ,ಗದಿಗೆಪ್ಪ ನಡುವಿನಮನಿ,ನೀಲಪ್ಪ ಸೇರಿದಂತೆ ಸಮುದಾಯದ ಮುಖಂಡರು, ಯುವಕರು,ಗ್ರಾಮಸ್ಥರು ಹಾಗೂ ಮಕ್ಕಳು ಪಾಲ್ಗೊಂಡಿದ್ದರು.